SPL-3 ( ಶಿವಮೊಗ್ಗ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ) ಪಂದ್ಯಾವಳಿಗಳು 2025ರ ಮೇ ಮೊದಲನೇ ವಾರದಲ್ಲಿ ನಡೆಯಲಿದೆ.

ಕಳೆದೆರಡು ವರ್ಷಗಳಂತೆ ಈ ಬಾರಿಯೂ 8 ತಂಡಗಳು ಭಾಗವಹಿಸಲಿದ್ದು, ತಂಡಗಳ ವಿವರ ಹಾಗೂ ಮಾಲೀಕರ ವಿವರ ಈ ಕೆಳಕಂಡಂತಿದೆ.

1) ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ತೀರ್ಥಹಳ್ಳಿ. ಮಾಲೀಕರು ಅಬ್ದುಲ್ ಕಲಾಂ2) ಸಿರಿ ಸಮೃದ್ಧಿ ಮಾಸ್ಟರ್ ಬ್ಲಿಸ್. ಮಾಲೀಕರು ವಿಶ್ವಾಸ್ ಮತ್ತು ಅಮಿತ್ ಕುಮಾರ್.3) ದಿ ವಾಲ್ ಸಿಸಿ ಭದ್ರಾವತಿ. ಮಾಲೀಕರು ಮೈಕಲ್ ಮತ್ತು ಬಾಬು4) ಸಹ್ಯಾದ್ರಿ ಸ್ಟ್ರೈಕರ್ಸ್ ಶಿವಮೊಗ್ಗ. ಮಾಲೀಕರು ಅಶೋಕ್ ಬಾಸುರು5) ಮೈಟಿ ಟಸ್ಕರ್. ಮಾಲೀಕರು ಕೇನಿತ್ 6) ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್. ಮಾಲೀಕರು ರೋಹನ್ ರಾಜು7) ತುಂಗಾ ಥಂಡರ್ಸ್. ಮಾಲೀಕರು ಮಿಥುನ್ ಮತ್ತು ಅನಿಲ್ ಪಾಟೀಲ್8) ಟಿಪ್ ಟಾಪ್ ಬೈಸನ್ ಸಾಗರ. ಮಾಲೀಕರು ಬಶೀರ್ ಮತ್ತು ಜಾನಿ.ಈ ತಂಡಗಳಲ್ಲಿ ಭಾಗವಹಿಸಲು 166 ಆಟಗಾರರು ನೋಂದಣಿ ಮಾಡಿಕೊಂಡಿದ್ದು, ಹರಾಜು ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟಾರೆ 140 ಆಟಗಾರರು ವಿವಿಧ ತಂಡಗಳಲ್ಲಿ ಆಟವಾಡಲು ಆಯ್ಕೆಯಾಗಿರುತ್ತಾರೆ.
ದಿನಾಂಕ 11.04.2025 ರಂದು ಶಿವಮೊಗ್ಗ ಕಂಟ್ರಿ ಕ್ಲಬ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಲಿನ ಎಲ್ಲಾ ತಂಡಗಳ ಮಾಲೀಕರು ವ್ಯವಸ್ಥಾಪಕರು ಹಾಗೂ ಐಕಾನ್ ಆಟಗಾರರು ಭಾಗವಹಿಸಿದ್ದು ಜೊತೆಯಲ್ಲಿ ಹಿರಿಯ ಆಟಗಾರರು ಹಿಂದಿನ ಕೆ ಎಸ್ ಸಿ ಎ ಶಿವಮೊಗ್ಗ ವಲಯದ ಸಂಚಾಲಕರಾದ ಶ್ರೀಯುತ ಡಿ ಆರ್ ನಾಗರಾಜ್ ಹಿಂದಿನ ವಲಯ ಅಧ್ಯಕ್ಷರಾದ ಸುಕುಮಾರ್ ಪಟೇಲ್, ಕೆ.ಎಸ್.ಸಿ.ಎ.ಯ ಶಿವಮೊಗ್ಗದ ಪ್ರತಿನಿಧಿ ಕೆ ಎಲ್ ಸುಬ್ರಹ್ಮಣ್ಯ SPL-3ರ ಸಂಘಟನಾ ಕಾರ್ಯದರ್ಶಿ ಎ. ಬಿ. ಅನಿಲ್ ಕುಮಾರ್(ಉತ್ತಿ) ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
