Home ತೀರ್ಥಹಳ್ಳಿThirthalli breaking news:ಪತ್ರಿಕೆ ವರದಿ ನಿಜವಾಯಿತು..! ಕದ್ದವರು ಸಿಕ್ಕಿಬಿದ್ದರು..! ಅಸಲಿಗೆ ಕದ್ದವರು ಯಾರು ಗೊತ್ತಾ..?!

Thirthalli breaking news:ಪತ್ರಿಕೆ ವರದಿ ನಿಜವಾಯಿತು..! ಕದ್ದವರು ಸಿಕ್ಕಿಬಿದ್ದರು..! ಅಸಲಿಗೆ ಕದ್ದವರು ಯಾರು ಗೊತ್ತಾ..?!

by EDITOR NEWS WARRIORS
0 comments

ತೀರ್ಥಹಳ್ಳಿ : ಪಟ್ಟಣದ ರಂಜದ ಕಟ್ಟೆಯ ಸಮೀಪ ನಿನ್ನೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಗೂಡ್ಸ್ ವಾಹನವನ್ನು ನಿಲ್ಲಿಸಿ ನಮಾಜಿಗೆ ಎಂದು ತೆರಳಿದ್ದ ಹೊನ್ನಾಳಿ ಮೂಲದ ಗುಜರಿ ವ್ಯಾಪಾರ ಮಾಡುವ ಮಾಲಿಕ ಹಾಗೂ ಡ್ರೈವರ್ ವಾಹನ ನಿಲ್ಲಿಸಿದ ನಂತರ ಇವರು ನಮಾಜಿಗೆ ಹೋಗಿದ್ದನ್ನು ನೋಡಿ ಇವರ ಗೂಡ್ಸ್ ವಾಹನವನ್ನು ತೆಗೆದುಕೊಂಡು ಸ್ವಲ್ಪ ದೂರದವರೆಗೆ ಹೋಗಿ ಅಲ್ಲಿ ಹಣವನ್ನು ತೆಗೆದುಕೊಂಡು ಗೂಡ್ಸ್ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು .

ಕದ್ದವರು ಸಿಕ್ಕಿಬಿದ್ದರು..!

ಈ ಪ್ರಕರಣವನ್ನು ಬೆನ್ನತ್ತಿದ ತೀರ್ಥಹಳ್ಳಿ ಪೊಲೀಸರು ಪ್ರಕರಣ ನಡೆದು 24 ಗಂಟೆ ಒಳಗೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಆರೋಪಿಗಳು ಹೊನ್ನಾಳಿ ಮೂಲದವರಾಗದ್ದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಹತ್ತಿರ ಕಳುವಾಗಿದ್ದ ಸುಮಾರು 29 ಲಕ್ಷ ರೂಗಳನ್ನು ವಶಪಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪತ್ರಿಕೆಯ ವರದಿ ನಿಜವಾಯಿತು..!

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ಸುದ್ದಿ ಮಾಡುವಾಗ ಈ ಪ್ರಕರಣದಲ್ಲಿ ಡ್ರೈವರ್ ಮತ್ತು ಮಾಲೀಕರು ಇಬ್ಬರು ಇದ್ದರು ಕದ್ದವರು ಯಾರು..?! ಮಾಲಿಕ ಕಳ್ಳತನ ಮಾಡುವುದಿಲ್ಲ … ಹಾಗಾದರೆ ಡ್ರೈವರ್ ಇದರಲ್ಲಿ ಪಾಲುದಾರನ..?! ಈತನ ಕಡೆಯವರು ಇದರಲ್ಲಿ ಇದ್ದಾರಾ ಎನ್ನುವ ಅನುಮಾನ ಪತ್ರಿಕೆ ವ್ಯಕ್ತಪಡಿಸಿದ್ದು…. ಅದು ಈಗ ನಿಜವಾಗಿದ್ದು ಡ್ರೈವರ್ ಹಾಗೂ ಇನ್ನಿಬ್ಬರು ಸೇರಿಕೊಂಡು ಈ ಹಣವನ್ನು ದೋಚಲು ಹೊನ್ನಾಳಿಯಲ್ಲಿ ಸ್ಕೆಚ್ ರೂಪಿಸಿದ್ದಾರೆ ಆದರೆ ಅದನ್ನು ಕಾರ್ಯರೂಪಕ್ಕೆ ತರಲು ತೀರ್ಥಹಳ್ಳಿಯನ್ನು ಬಳಸಿಕೊಂಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಪೊಲೀಸರ ಸಮಗ್ರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ…

ರಘುರಾಜ್ ಹೆಚ್‌ ಕೆ…9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...