
ಅಪ್ಪು ಅಪ್ಪ ಅಮ್ಮನಿಗೆ ಮುದ್ದಿನ ಕೂಸಿವನು
ಪ್ರೀತಿಯ ಸಹೋದರನಾಗಿ ಮಾದರಿಯಿವನು
ಕೂಡಿ ಬಾಳಿದ ಸುಸಂಸ್ಕೃತ ಪರಿವಾರದವನು
ಲೋಹಿತನಾಗಿ ಬಂದು ಪುನೀತನಾದ
ಬಾಲನಟನೆಯಲ್ಲಿ ಭಾಗ್ಯವಂತನಾದ
ಎರಡು ನಕ್ಷತ್ರದಲ್ಲಿ ಮಿನುಗಿ ಮರೆಯಾದll
ಮರೆಯದ ಬೆಟ್ಟದ ಹೂವಾದ
ಭಕ್ತ ಪ್ರಹ್ಲಾದನಾಗಿ ತಂದೆ ತಾಯಿಗೆ ಕಣ್ಮಣಿಯಾದ
ವೀರಕನ್ನಡಿಗ ,ಮೌರ್ಯ,ಪರಮಾತ್ಮ
ಚಕ್ರವ್ಯೂಹದಿಂದ ಧೃವತಾರೆಯಾದ
ದೊಡ್ಮನೆ ಹುಡುಗನಾಗಿ ಬಂದು ರಾಜಕುಮಾರನಂತೆ
ಕಂಗೊಳಿಸಿದ ಕಲಾಪ್ರೇಮಿಯಿವನುll
ಅಂಜನಿಪುತ್ರ,ನಟಸಾರ್ವಭೌಮ
ಯುವರತ್ನನಾಗಿ ಯುವಕರಿಗೆ ಬೆಳಕಾದ
ಚಲನಚಿತ್ರನಟ,ಹಿನ್ನೆಲೆಗಾಯಕ
ದೂರದರ್ಶನ ನಿರೂಪಕ ಮತ್ತು ನಿರ್ಮಾಪಕ
ಕನ್ನಡದ ಕೋಟ್ಯಾಧಿಪತಿ ನಿರೂಪಕನಾಗಿ
ಜನರನ್ನು ವಿಸ್ಮಯಗೊಳಿಸಿದll
ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿ
ಅತ್ಯುತ್ತಮ ಬಾಲ ಪ್ರಶಸ್ತಿ ಗಳಿಸಿ
ಯುವಕರಿಗೆ ಯುವರತ್ನವಾದ
ಕನ್ನಡದ ಮರೆಯದ ಮಾಣಿಕ್ಯನಿವನು
ಕಲಾಭಿಮಾನಿಗಳಿಗೆ ಮೇರು ನಟನಿವನು
ನೋಡುವ ಕಣ್ಣಿಗೆ ಆದರ್ಶವಾಗಿಹನುll
ಧೀರವಿಕ್ರಮನಂತೆ ಬಾಳಿ
ಎಂದೂ ಬಾರದ ಲೋಕಕ್ಕೆ ಕಾಣದಂತೆ ಮಾಯವಾದನು
ಮತ್ತೆ ಹುಟ್ಟಿ ಬರಲಿ ಈ ಕಲಾವಿದ
ನಮ್ಮ ಪವರ್ ಸ್ಟಾರ್ ಕನ್ನಡದ ಕಣ್ಮಣಿಗೆ ಪದಮಾಲೆಯ ಭಾವಪೂರ್ಣ ಶ್ರದ್ಧಾಂಜಲಿll
ಡಾ.ಎನ್, ಆರ್ ಮಂಜುಳ
ಕವಯಿತ್ರಿ ಮತ್ತು ಲೇಖಕಿ
ಶಿವಮೊಗ್ಗ…