
ಬೆಂಗಳೂರು: ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಡೀರನೆ ಪತ್ರಿಕಾಗೋಷ್ಠಿ ಕರೆದಿದ್ದು. ಹಲವು ಅನುಮಾನ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 4ಗಂಟೆಗೆ ಸುದ್ದಿಗೋಷ್ಠಿ:
ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಿಡೀರನೆ ಪತ್ರಿಕಾಗೋಷ್ಠಿ ಕರೆದಿದ್ದು ಬೊಮ್ಮಾಯಿ ಜೊತೆಗೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ವಿರೋಧಪಕ್ಷಗಳ ದಾಳಿಗೆ ಪ್ರತಿ ಉತ್ತರ ನೀಡುತ್ತಾರಾ? ಸ್ವಪಕ್ಷದ ರೆಬೆಲ್ ಶಾಸಕ ಬಸನಗೌಡ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾರಾ?
ನಿರಂತರವಾಗಿ ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಇಂದು ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡುತ್ತಾರಾ? ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ, ಸ್ವಪಕ್ಷದ ರೆಬೆಲ್ ಶಾಸಕ ಬಸನಗೌಡ ಯತ್ನಾಳ್ ನೀಡಿದ ಹೇಳಿಕೆ ಬಿಜೆಪಿ ಪಾಳ್ಯದಲ್ಲಿ ಅಲ್ಲೋಲಕಲ್ಲೋಲ ಮೂಡಿಸಿದ್ದು ಸಿಎಂ ಹುದ್ದೆಗೇರಲು 2, 500 ಕೋಟಿ ಕೇಳಿದ್ದರು ಎನ್ನುವ ಹೇಳಿಕೆಗೆ ಮುಖ್ಯಮಂತ್ರಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ.
ಬಿಜಾಪುರದ ರೆಬಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರಾ ಮುಖ್ಯಮಂತ್ರಿಗಳು :
ನನಗೆ ಮುಖ್ಯಮಂತ್ರಿ ಹುದ್ದೆ ನೀಡಲು 2500 ಕೋಟಿಯನ್ನು ಕೇಳಿದ್ದರು ಎನ್ನುವ ಹೇಳಿಕೆ ನೀಡಿರುವ ಶಿಸ್ತಿನ ಪಕ್ಷದ ಶಾಸಕ ಯತ್ನಾಳ್ ವಿರುದ್ಧ ಮುಖ್ಯಮತ್ರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಯತ್ನಾಳ್ ಹೇಳಿಕೆ ನಿಜ ಎಂದು ಒಪ್ಪಿಕೊಂಡಂತಾಗುತ್ತದೆ. ಹಾಗಾಗಿ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ಮಹತ್ವದ್ದಾಗಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುಳಿವು ನೀಡುತ್ತಾರ ಮುಖ್ಯಮಂತ್ರಿಗಳು:
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುಳಿವು ನೀಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಇಂದು 4ಗಂಟೆಗೆ ಮುಖ್ಯಮಂತ್ರಿಗಳಿಗೂ ಕರೆದಿರುವ ಮಹತ್ವದ ಪತ್ರಿಕಾಗೋಷ್ಠಿ ಕುತೂಹಲದಿಂದ ಕೂಡಿದ್ದು ಪಿಎಸ್ಐ ಹಗರಣ, ಯತ್ನಾಳ್ ಹೇಳಿಕೆ, ಸಂಪುಟದ ವಿಸ್ತರಣೆ, ಮುಖ್ಯಮಂತ್ರಿಗಳ ಬದಲಾವಣೆ, ವಿರೋಧಪಕ್ಷಗಳ ನಿರಂತರ ಟೀಕೆ ಹೀಗೆ ಹಲವು ವಿಷಯಗಳಿಂದ ಮಹತ್ವ ಪಡೆದುಕೊಂಡಿದೆ.
ರಘುರಾಜ್..ಹೆಚ್.ಕೆ…
############################₹₹₹##₹₹₹#₹₹
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..