
ಜೆ ಜೆ ಎಂ .ಜಲ ಜೀವನ್ ಮಿಷನ್ ಗ್ರಾಮೀಣ ಶುದ್ಧ ಕುಡಿಯುವ ನೀರಿನ ಯೋಜನೆಯ ಅಕ್ರಮ ಮತ್ತು ಕಳಪೆ ಬಗ್ಗೆ ನಿಮ್ಮ ನ್ಯೂಸ್ ವಾರಿಯರ್ಸ್ ಪತ್ರಿಕೆಯಲ್ಲಿ 21.10.2021ರ ಸಂಚಿಕೆಯಲ್ಲಿ “”ಹರ್ ಘರ್ ಜಲ್ ಯೋಜನೆ ನಲ್ಲಿ ಇದೆ ನೀರಿಲ್ಲ”” ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಸಿಇಒ ಎನ್ ಡಿ ಪ್ರಕಾಶ್ ಅವರಿಂದ ಮೊದಲ ವಿಕೆಟ್ ಪತನ ಭ್ರಷ್ಟ ಇಂಜಿನಿಯರ್ ಮುರುಗೇಶ್ ಸಸ್ಪೆಂಡ್ …
ತೀರ್ಥಹಳ್ಳಿ :- ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ನೀರು ಬಳಕೆದಾರರ ಗ್ರಾಮಸ್ಥರ ವಂತಿಗೆ ಹಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ನೀರಿನ ಕುಡಿಯುವ ಯೋಜನೆ ಸರ್ಕಾರ ನೂತನ ಕುಡಿಯುವ ನೀರಿನ ಯೋಜನೆಯನ್ನು ಜಲಜೀವನ ಮಿಷನ್ ಪ್ರಾರಂಭಿಸಿದೆ. ಗ್ರಾಮ ಪಂಚಾಯಿತಿಗಳಿಗೆ ಅಂದಾಜು 30ಲಕ್ಷ ರೂಪಾಯಿಗಳಿಂದ ಕೆಲವು ಗ್ರಾಮ ಪಂಚಾಯಿತಿಗಳಿಗೆ 40ಲಕ್ಷ ರೂಪಾಯಿಗಳು ಮತ್ತು ಹೆಚ್ಚಿನ ಮೊಬಲಗನ್ನು ಯೋಜನೆಗೆ ಅನುದಾನ ನೀಡಲಾಗಿದೆ ತೀರ್ಥಹಳ್ಳಿಯ ಭಾಗದಲ್ಲಿ ಅಂದಾಜು ಸುಮಾರು 250–300ಕೋಟಿ ರೂಪಾಯಿಗಳು ಅನುದಾನ ಹರಿದು ಬಂದಿದೆ .ಈ ಯೋಜನೆಯಲ್ಲಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ಕೊಡುವ ಯೋಜನೆಯಾಗಿರುತ್ತದೆ .ಆದರೆ ಭ್ರಷ್ಟಾತಿ ಭ್ರಷ್ಟತನವನ್ನೇ ಮೈಗೂಡಿಸಿಕೊಂಡು ಬಂದ ಕೆಲ ಇಂಜಿನಿಯರ್ ಗಳು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಕಳಪೆ ಮತ್ತು ಅಕ್ರಮ ಕಾಮಗಾರಿ ಮಾಡಿಸಿ ಯೋಜನೆ ಎಕ್ಕುಟ್ಟಿ ಹೋಗುವಂತಾಗಿದೆ .ಇಲ್ಲಿ ಶೇಕಡಾ 40–50%ಕಮಿಷನ್ ಕೊಡಲಾಗಿದೆ ತಿಳಿದುಬಂದಿದೆ .ಈ ರೀತಿ ಕುಡುಮಲ್ಲಿಗೆಯಲ್ಲಿ ಜೆಜೆಎಂ ವತಿಯಿಂದ ಮಾಡಿಸಿದ ಅಕ್ರಮ ಕಾಮಗಾರಿಯನ್ನು ಜನಪರ ಸೇವೆ ಮಾಡಬೇಕೆಂಬ ಇಚ್ಛಾಶಕ್ತಿ ಇರುವ ಸಿಇಒ ಎನ್. ಡಿ ಪ್ರಕಾಶ್ ರವರು ಇಂಜಿನಿಯರ್ ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಖುಲ್ಲಂಖುಲ್ಲಾ ಯೋಜನೆಯಲ್ಲಿ ಅಕ್ರಮವಾಗಿದೆ ಎಂದು ತಿಳಿದು ಕೆ.ಮುರುಗೇಶ್ ಎಂಬ ಇಂಜಿನಿಯರ್ ನನ್ನು ಸಸ್ಪೆಂಡ್ ಮಾಡಿದ್ದಾರೆ .ಈ ಮುರುಗೇಶ್ ತಾಲ್ಲೂಕಿನಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಮೈಗೂಡಿಸಿಕೊಂಡು ಅನೇಕ ವರ್ಷಗಳಿಂದ ಜಾಂಡಾ ಹಾಕಿಕೊಂಡು ಸರ್ಕಾರದ ಹತ್ತಾರು ಕಾಮಗಾರಿಗಳನ್ನು ದುರುಪಯೋಗಪಡಿಸಿ ಅಕ್ರಮ ನಡೆಸಲು ಸಹಕರಿಸಿದ್ದಾನೆ .ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಲಾಪುರದ ಹೊರಬೈಲು ಗ್ರಾಮದಲ್ಲಿ ಸುಮಾರು 2–3ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾವಿಯಿಂದ ನೀರು ತೆಗೆದು ಗ್ರಾಮಗಳಿಗೆ ಹಂಚಿಕೆ ಮಾಡುವ ವಿಚಾರದಲ್ಲಿ ಸಹ ಸಂಪೂರ್ಣ ಅಕ್ರಮ ನಡೆದಿದ್ದು ಇದನ್ನು ಸಿಇಒ ಮತ್ತು ತಾಲ್ಲೂಕು ಪಂಚಾಯ್ತಿ ಇಒ ತನಿಖೆ ನಡೆಸಬೇಕಿದ್ದು ಗ್ರಾಮಸ್ಥರ ಒತ್ತಾಯವಾಗಿದೆ .ಒಟ್ಟಿನಲ್ಲಿ ಜೆಜೆಎಮ್ ಯೋಜನೆಯ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ಮೊದಲ ವಿಕೆಟ್ ಇಂಜಿನಿಯರ್ ಮುರುಗೇಶ್ ಪತನವಾಗಿದೆ ..ಇಂಜಿನಿಯರ್ ನಮ್ಮೊಂದಿಗೆ ಮಾತನಾಡುತ್ತಾ ಜನಪ್ರತಿನಿಧಿಗಳಿಗೆ ಮತ್ತು ಅವರ ಆಪ್ತರಿಗೆ ಈಗಾಗಲೇ ಕಮಿಷನ್ ಹಣ ಕಾಮಗಾರಿಯ ಮೊದಲೇ ಅಡ್ವಾನ್ಸ್ ಆಗಿ ಸಂದಾಯ ಮಾಡಲಾಗಿದೆ .ಕುಡುಮಲ್ಲಿಗೆಯ ಕಾಮಗಾರಿ ಆನ್ ಗೋಯಿಂಗ್ ಕೆಲಸ ಇನ್ನೂ ಸಂಪೂರ್ಣವಾಗಿಲ್ಲ ಅಷ್ಟರಲ್ಲಿ ಹಿರಿಯ ಅಧಿಕಾರಿಗಳು ಬಂದು ಪರ್ಸಂಟೇಜ್ ನಿರೀಕ್ಷೆಯಲ್ಲಿ ವಿನಾಕಾರಣ ನನ್ನನ್ನು ಸಸ್ಪೆಂಡ್ ಮಾಡುತ್ತಿದ್ದಾರೆ .ನನ್ನನ್ನು ವಿನಾಕಾರಣ ಸಸ್ಪೆಂಡ್ ಮಾಡಿದೆ ಉಳಿದ ಅಧಿಕಾರಿಗಳು ಹೆದರಿ ಕಮಿಷನ್ ನಿಗದಿಪಡಿಸಿಕೊಳ್ಳಲು ದಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಆಪಾದಿಸಿದ್ದಾರೆ .ಏನೇ ಇರಲಿ ಜೆ ಜೆ ಎಂ ಶುದ್ಧ ಕುಡಿಯುವ ನೀರಿನ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಹತ್ತಾರು ಅಕ್ರಮಗಳು ಸದ್ಯದಲ್ಲೇ ಬಯಲಿಗೆ ಬರಲಿದೆ…. ಒಟ್ಟಾರೆಯಾಗಿ ವರದಿಗೆ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಂಡ ಸಿಇಒ ದಿಟ್ಟ ಕ್ರಮವನ್ನು ಪತ್ರಿಕೆ ಅಭಿನಂದಿಸುತ್ತದೆ…
ಓಂಕಾರ ಎಸ್. ವಿ. ತಾಳಗುಪ್ಪ….