
ಹರಿಹರ:ಉತ್ತರ ದಕ್ಷಿಣವನ್ನು ಬೆಸೆಯುವ ಮಧ್ಯಕರ್ನಾಟಕ ದಾವಣಗೆರೆ ಜಿಲ್ಲೆಗೆ ಒಂದಾದರೂ ಮಂತ್ರಿ ಸ್ಥಾನ ನೀಡುವಂತೆ ಬಿಜೆಪಿ ರೈತ ಮೋರ್ಚಾ ನಗರ ಘಟಕ ಪ್ರಧಾನ ಕಾರ್ಯದರ್ಶಿ ಕಿರಣ್ ಮೂಲಿಮನಿ ಅವರು ಮಾನ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ .
ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿಗಳಾಗಿ 5 ಜನ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.ಕಳೆದ ಬಾರಿ ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ದಾವಣಗೆರೆಯಿಂದ ಯಾರಾದರೂ ಒಬ್ಬರು ಮಂತ್ರಿಯಾಗುತ್ತಾರೆ ಎಂಬ ಭರವಸೆಯನ್ನು ಪಕ್ಷದ ಕಾರ್ಯಕರ್ತರು ಹೊಂದಿದ್ದರು.ಅದರೆ ಪಕ್ಷದ ಕಾರ್ಯಕರ್ತರ ಆಸೆ ಈಡೇರಲಿಲ್ಲ.
ಈ ಬಾರಿಯಾದರೂ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಜಿಲ್ಲೆಯಿಂದ ಯಾರಾದರೊಬ್ಬರು ಮಂತ್ರಿಯಾಗುತ್ತಾರೆ ಎಂಬ ಆಸೆಯನ್ನ ಪಕ್ಷದ ಕಾರ್ಯಕರ್ತರು ಹೊಂದಿದ್ದರು.ಆದರೆ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ದಾವಣಗೆರೆ ಜಿಲ್ಲೆಯಿಂದ ಯಾರೊಬ್ಬರೂ ಮಂತ್ರಿಯಾಗಲಿಲ್ಲ .
ಪಕ್ಷದ ವರಿಷ್ಠರು ಹಾಗೂ ಮಾನ್ಯ ಮುಖ್ಯಮಂತ್ರಿಗಳು ದಾವಣಗೇರಿ ಜಿಲ್ಲೆಗೆ ಅನ್ಯಾಯ ಮಾಡದೆ ಕೂಡಲೇ ಯಾರಾದರೂ ಒಬ್ಬರಿಗೆ ಮಂತ್ರಿ ಸ್ಥಾನ ನೀಡುವಂತೆ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಳ್ಳುತ್ತೇನೆ .
ಜಿಲ್ಲೆಗೆ ಒಬ್ಬರನ್ನು ಮಂತ್ರಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ .ಕರೋನ ಬಂತಾ ಹೆಮ್ಮಾರಿಯನ್ನು ಮೆಟ್ಟಿ ನಿಲ್ಲಲು ಹಾಗೂ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯಲು ಜಿಲ್ಲೆಯಿಂದ ಯಾರಾದರೂ ಒಬ್ಬರನ್ನು ಮಂತ್ರಿ ಮಾಡಿ .ಆ ಮೂಲಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಬೇಡಿಕೆಯನ್ನು ಈಡೇರಿಸಿ .ಇಲ್ಲವಾದರೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಅದಕ್ಕೆ ಅವಕಾಶ ಮಾಡಿಕೊಡದೆ ಜಿಲ್ಲೆಯಿಂದ ಯಾರಾದರೂ ಒಬ್ಬರಿಗೆ ಮಂತ್ರಿ ಸ್ಥಾನ ನೀಡಿ ಎಂಬೋದು ನಮ್ಮ ಬೇಡಿಕೆಯಾಗಿದೆ ಎಸ್ ಆರ್ ಬೊಮ್ಮಯಿ ಅವರು ಪಕ್ಷ ನಿಷ್ಠೆ ಹೊಂದಿದವರನ್ನು ಮುಂದಿನ ದಿನದಲ್ಲಿ ಮಂತ್ರಿ ಮಾಡುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದರು .
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಮುಖ್ಯಮಂತ್ರಿಯಾಗಿ ಎಸ್ಆರ್ ಬೊಮ್ಮಾಯಿ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಅವರಿಗೆ ರೈತ ಮೋರ್ಚಾ ತಾಲ್ಲೂಕು ಘಟಕದಿಂದ ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು …
ವರದಿ.. . ಶ್ರೀನಿವಾಸ್, ಆರ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…