
ನಗರ ಪ್ರದೇಶದಲ್ಲಿರುವ ಸಾರ್ವಜನಿಕ ಸ್ವತ್ತುಗಳ ರಕ್ಷಣೆ ಸಂಬಂಧಿಸಿದ ಪುರಸಭೆ,ನಗರಸಭೆ,ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ದಂಡಾಧಿಕಾರಿ ಗಳದ್ದಾಗಿದ್ದರೆ.ಗ್ರಾಮಾಂತರ ಪ್ರದೇಶದಲ್ಲಿರುವ ಸಾರ್ವಜನಿಕ ಸ್ವತ್ತುಗಳ ರಕ್ಷಣೆ ಸಂಬಂಧಿಸಿದ ಗ್ರಾಮ ಪಂಚಾಯಿತಿದ್ಡಾಗಿರುತ್ತದೆ.
ಪ್ರತಿ ಸಾರ್ವಜನಿಕರ ಆಸ್ತಿಯನ್ನು ಸಂರಕ್ಷಿಸಿ ಕಾಪಾಡಿಕೊಂಡು, ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳದ್ದಾಗಿದ್ದು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ .
ಹರಿಹರ ತಾಲೂಕು ವಾಸನ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಸಾರ್ವಜನಿಕರಿಗೆ ಸಂಬಂಧಿಸಿದ ರಸ್ತೆಯನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ .
ಸರಿ ಸುಮಾರು ನಲವತ್ತು ವರ್ಷಗಳ ಹಿಂದೆ ನೀರಾವರಿ ಇಲಾಖೆಯಿಂದ ತುಂಗಭದ್ರಾ ನದಿಯ ದಡದಲ್ಲಿರುವ ಸುಮರು 74 ಸಂತ್ರಸ್ತ ಕುಟುಂಬದವರಿಗೆ ವಾಸನ ಗ್ರಾಮದಲ್ಲಿ 50 ಅಡಿ ಅಗಲ,120 ಅಡಿ ಉದ ಅಳತೆಯ ನಿವೇಶನವನ್ನು ಹಂಚಿಕೆ ಮಾಡಿದ್ದರು.ಪ್ರತಿ ನಿವೇಶನದ ಹಿಂಭಾಗದಲ್ಲಿ ರಸ್ತೆ ಮತ್ತು ಚರಂಡಿಗೆ ಬೇಕಾದ ಜಾಗವನ್ನು ಬಿಟ್ಟು ಮತ್ತೊಂದು ನಿವೇಶನವನ್ನು ಹಂಚಿಕೆ ಮಾಡಿದ್ದರು.ಪ್ರತಿ ನಿವೇಶನದ ಹಿಂಭಾಗದಲ್ಲಿ ರಸ್ತೆಗೆ ದಾರಿ ಮಾಡಿಕೊಟ್ಟಿದ್ದರು .ಅದರಂತೆ ಪ್ರತಿ 1ಲೈನಿನ ನಿವೇಶನದ ನಂತರ ರಸ್ತೆಯನ್ನು ಬಿಟ್ಟಿರುವುದು ನಮ್ಮ ಮಾಧ್ಯಮದ ಕಣ್ಣಿಗೆ ಬಿದ್ದಿತ್ತು.ಆದರೆ ಖಾತೆ ನಂಬರ್ 357 ರಲ್ಲಿ ಇರುವ ನಿವೇಶನದ ಮಾಲೀಕ ಪೂರ್ಣಪ್ಪ ಬಿನ್ ನಿಂಗಪ್ಪ ಇವರು ಸಾರ್ವಜನಿಕರ ಓಡಾಟಕ್ಕೆಂದು ಬಿಟ್ಟ 11 ಅಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆಯನ್ನು ನಿರ್ಮಾಣ ಮಾಡುತ್ತಿದ್ದರು .
ಸಾರ್ವಜನಿಕರ ಉಪಯೋಗಕ್ಕೆಂದು ಇರುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿರುವವರಿಗೆ ಸಂಬಂಧಿಸಿದಂತೆ ವಾಸನ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಗಮನಸೆಳೆದು ಪ್ರಶ್ನೆ ಮಾಡಿದರೆ ಅವರಿಂದ ಬಂದ ಉತ್ತರ ಹೀಗಿತ್ತು .
ಶ್ರೀ ಬಸವನಗೌಡ ತಂದೆ ಭರಮನಗೌಡ ಇವರ ತಂದೆ ಇರುವ ಆಸ್ತಿ ನಂ,358 ರಲ್ಲಿ ಮತ್ತು ಶ್ರೀ ಪೂರ್ಣಪ್ಪ ಬಿನ್ ನಿಂಗಪ್ಪನವರ ಆಸ್ತಿ ನಂಬರ್ 357 ರಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಸಂಬಂಧಿಸಿದಂತೆ ನಮ್ಮ ಪಂಚಾಯತಿಯಲ್ಲಿರುವ ದಾಖಲೆಯ ಪ್ರಕಾರ ಸದರಿ ಪಾಳು ಜಾಗದ ಅಳತೆ ಪೂ.ಪ 50 ಅಡಿ,ಉ.ದ.131ಅಡಿ ಇರುವ ಚಕ್ಕುಬಂದಿ ಪೂರ್ವಕ್ಕೆ ಖಾ.ಮಾ ನಂ 356 ಪಶ್ಚಿಮಕ್ಕೆ:358,ಉತ್ತರಕ್ಕೆ:ರಸ್ತೆ,ದಕ್ಷಿಣಕ್ಕೆ ಗೂರಪ್ಪನ ಪಾಳು,ಈ ರೀತಿಯ ಚಕ್ಕುಬಂದಿಯನ್ನು ಅಂದಿನ ಕೊಕ್ಕನೂರು ಮಂಡಲ್ ಪಂಚಾಯತಿಯಿಂದ 1988-89 ರಲ್ಲಿ ಹೌಸ್ ಲಿಸ್ಟ್ ನೀಡಿರುತ್ತಾರೆ ಮತ್ತು ಇದೇ ಸ್ವತ್ತಿನ ಮೇಲೆ 24/10/1990 ರಲ್ಲಿ ಮನೆ ಕಟ್ಟಲು ಪರವಾನಗಿ ಯನ್ನು ಸಹ ನೀಡಿರುತ್ತಾರೆ.ಅದರಂತೆಯೇ ಈಗಲೂ ಗ್ರಾಮ ಪಂಚಾಯತಿಯಲ್ಲಿ ಪರಿಶೀಲನೆ ನಡೆಸಿದಾಗ ಅಂದಿನ ಕೊಕ್ಕನೂರು ಮಂಡಲ ಪಂಚಾಯಿತಿಯಲ್ಲಿ ನೀಡಿರುವ ದಾಖಲೆಯಂತೆ ತಾಳೆ ಹೊಂದಿರುತ್ತದೆ ಎಂಬ ಹಾರಿಕೆ ಉತ್ತರವನ್ನು ಈಗಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಈರಪ್ಪನವರು ನೀಡಿ ಜಾರಿಕೊಳ್ಳುವ ಪ್ರಯತ್ನವನ್ನೂ ಮಾಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತ್ ಇಒ ಇವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ನಾವು ಕೂಡಲೇ ವಾಸನ ಗ್ರಾಮ ಪಂಚಾಯತಿಗೆ ತೆರಳಿ ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ತಾಲ್ಲೂಕು ಪಂಚಾಯ್ತಿ ಇಒ ಇವರ ಭರವಸೆ ಭರವಸೆಯಾಗಿಯೇ ಉಳಿದಾಗ ಜಿಲ್ಲಾ ಪಂಚಾಯತ್ ಸಿಇಒ ಅವರ ಗಮನಕ್ಕೆ ತರಲಾಯಿತು.ಜಿಲ್ಲಾ ಪಂಚಾಯತ್ ಸಿಇಒ ಅವರು ಕೂಡಲೇ ತಾಲ್ಲೂಕು ಪಂಚಾಯಿತಿ ಇಒ ಗಂಗಾಧರ್ ಇವರಿಗೆ ಕರೆ ಮಾಡಿ ವಾಸನಾ ಗ್ರಾಮಕ್ಕೆ ತೆರಳುವಂತೆ ತಾಕೀತು ಮಾಡಿದರು ಸಿಇಒ ಅವರ ಎಚ್ಚರಿಕೆಯ ನಡುವೆ 2ದಿನಗಳ ನಂತರ ಎಚ್ಚೆತ್ತುಕೊಂಡ ಇಒ ವಾಸನ ಗ್ರಾಮಕ್ಕೆ ತೆರಳಿ ಮಾಡಿದ್ದಾದರೂ ಏನು ಅಂತೀರಾ.?ಅದೇ ರಾಗ, ಅದೇ ಹಾಡು.ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಣ್ಣ ಮುಂದೆ ಇದ್ದರೂ ಸಹ ತಾನೇ ಏನೂ ಮಾಡಲಾಗದ ಅಸಹಾಯಕ ಎಂಬಂತೆ ಕಟ್ಟಡ ನಿರ್ಮಿಸುತ್ತಿರುವ ಮಾಲೀಕನ ಮನೆಗೆ ತೆರಳಿ ಟೀ ಕುಡಿದು ಬಂದಿದ್ದೆ ಇವರ ಮೇಲಧಿಕಾರಿಗಳಿಗೆ ನೀಡಿದ್ದ ವರದಿಯಾಯಿತು.
ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಇರುವದರಿಂದಲೇ ಸಾರ್ವಜನಿಕರ ಸೊತ್ತುಗಳು ರಾತ್ರಿ ಬೆಳಗಾಗುವುದರೊಳಗೆ ಅನ್ಯರ ಪಾಲಾಗುತ್ತಿದೆ.

ಸರಿಯಾಗಿ ಕಾನೂನನ್ನು ತಿಳಿಯದೆಯೇ, ಸಂವಿಧಾನವನ್ನು ಓದದೇ ತಮ್ಮ ಮನಸ್ಸಿಗೆ ಬಂದ ತೀರ್ಪನ್ನು ನೀಡಿ ಗ್ರಾಮದಲ್ಲಿ ಸಾಮರಸ್ಯದಿಂದ ಬದುಕುತ್ತಿರುವ ಕುಟುಂಬಗಳ ನಡುವೆ ವೈಮನಸ್ಸನ್ನು ಸೃಷ್ಟಿಸುವ ಕೆಲಸ ಇಂಥ ಬೇಜವಾಬ್ದಾರಿ ಅಧಿಕಾರಿಗಳಿಂದಲೇ ನಡೆಯುತ್ತಿರುವುದು .
ಈ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಸಾರ್ವಜನಿಕರ ರಸ್ತೆಗೆ ಸಂಬಂಧಿಸಿದಂತೆ 357 ನಿವೇಶನದ ನಂತರ ರಸ್ತೆಯ ಎದುರುಗಡೆ ಇರುವ 354 ನಿವೇಶನದ ಮಾಲೀಕ ತಂಬೂಳಿ ಮಂಜುನಾಥ ಎಂಬುವವರು ದಿನಾಂಕ 25/05/2021 ರಂದು ಟಿ.ಪೂರ್ಣಪ್ಪ ಬಿನ್ ನಿಂಗಪ್ಪ ಇವರು ಗ್ರಾಮ ಪಂಚಾಯತಿಗೆ ಸಂಬಂಧಿಸಿದ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ.ಕೂಡಲೇ ಒತ್ತುವರಿ ಮಾಡಿಕೊಂಡ ರಸ್ತೆಯನ್ನು ಬಿಡಿಸಿಕೊಡುವಂತೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿರುವ ವಿಚಾರ ನಮ್ಮ ಮಾಧ್ಯಮ ಪ್ರತಿನಿಧಿಯ ಗಮನಕ್ಕೆ ಬಂದಿತ್ತು .
ಮನವಿ ನೀಡಿದ ಮಂಜುನಾಥ್ ಇವರನ್ನು ಸಂಪರ್ಕಿಸಿದಾಗ ನಮಗೆ ಸುಮಾರು ನಲವತ್ತು ವರ್ಷಗಳ ಹಿಂದೆ ನೀರಾವರಿ ಇಲಾಖೆಯ ವತಿಯಿಂದ ಸರಿಸುಮಾರು ಎಪ್ಪತ್ತು ಕ್ಕೂ ಹೆಚ್ಚು ಕುಟುಂಬಗಳಿಗೆ 50120 ಅಳತೆಯ ನಿವೇಶನವನ್ನು ನೀಡಿದ್ದರೂ ಪ್ರತಿ ನಿವೇಶನದ ಲೈನಿನ ನಂತರ ಹಿಂಬದಿಗೆ ಓಡಾಡಲು ರಸ್ತೆಯನ್ನು ಬಿಟ್ಟು ಮತ್ತೆ ನಿವೇಶನಗಳನ್ನ ನೀಡಿದ್ದರು. ಇಲ್ಲಿರುವ ಎಪ್ಪತ್ತು ಕ್ಕೂ ಹೆಚ್ಚು ಕುಟುಂಬದವರಿಗೆ 50120 ಅಳತೆಯ ನಿವೇಶನವನ್ನು ನೀಡಿದ್ದಾರೆ ನಕಾಶೆಯಲ್ಲೂ ಸಹ ಇದೇ ರೀತಿ ಇದೆ .ಆದರೆ ಪೂರ್ಣಪ್ಪ ಇವರಿಗೆ ಮಾತ್ರ 50131 ಅಳತೆಯ ನಿವೇಶನ ಇದೆಯೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಈ ನಕಲಿ ದಾಖಲೆಯ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್ ಇವರ ಪಾತ್ರ ಇದೆ ಎಂದು ಮಂಜುನಾಥ್ ಅವರು ಆರೋಪ ಮಾಡಿದರು.ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಂದರ್ಭದಲ್ಲಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ.ಆದರೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದಾರೆ.ಇದೇ ಗ್ರಾಮ ಪಂಚಾಯತಿಯವರು ನೀಡುವ ಹೌಸ್ ಲಿಸ್ಟ್ ನಲ್ಲಿ 352,353 ರ ಹಿಂದೆ 50120 ನಿವೇಶನ ಈ ನಿವೇಶನದ ಹಿಂದೆ ರಸ್ತೆ ಇದೆ ಎನ್ನುತ್ತಾರೆ .ಅದೇ 357 ರ ಖಾತೆ ನಂಬರ್ 50*131 ಅಡಿ ನಿವೇಶನ ರಸ್ತೆ ಇಲ್ಲವೆಂದು ನೀಡುತ್ತಾರೆ.ಉಳಿದೆಲ್ಲಾ ನಿವೇಶನದ ಹಿಂಬದಿಯಲ್ಲಿ ರಸ್ತೆಗಳಿದ್ದರೆ ಈ ನಿವೇಶನದ ಹಿಂದೆಯೇ ರಸ್ತೆಯೂ ಇಲ್ಲ, ಹೆಚ್ಚುವರಿಯಾಗಿ ಹನ್ನೊಂದು ಅಡಿ ಜಾಗ ನೀಡಿದ್ದಾದರೂ ಹೇಗೆ.?ಒಂದು ವೇಳೆ ಹನ್ನೊಂದು ಅಡಿ ಜಾಗವನ್ನು ಪೂರ್ಣಪ್ಪ ಇವರಿಗೆ ಮಂಡಲ ಪಂಚಾತಿಯವರು ಹೆಚ್ಚುವರಿ ಹಣಕ್ಕೆ ನೀಡಿದ್ದಾರೆ ಎಂಬುದಾದರೆ ಸಾರ್ವಜನಿಕರ ಸ್ವತ್ತನ್ನು ಅನ್ಯರಿಗೆ ಮಾರಾಟ ಮಾಡಲು ಪಂಚಾಯತಿಯವರಿಗೆ ಅಧಿಕಾರವಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಮಂಜುನಾಥ್ ಅವರು ಸಂಬಂಧಿಸಿದ ಅಧಿಕಾರಿಗಳ ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ವಾಸನ ಗ್ರಾಮ ಪಂಚಾಯ್ತಿಯ ಸಾರ್ವಜನಿಕರ ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ “ಕತ್ತಲ ರಾತ್ರಿಯಲ್ಲಿ ಟೇಬಲ್ಲಿನ ಕೆಳಗೆ ಕಪ್ಪು ಹಣದ ಕಾಂಚಾಣ ಕುಣಿದಿರಬಹುದೇ.? ಎಂಬ ಅನುಮಾನ ಕಾಡತೊಡಗಿದೆ.

ಪಂಚಾಯಿತಿಗಳು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಪ್ರಾಮಾಣಿಕತೆಯನ್ನು ತೋರ ಬೇಕು ಆಗ ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಸಾಧ್ಯವಾಗುತ್ತದೆ .
ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳ ವಾಸನ ಗ್ರಾಮ ಪಂಚಾಯ್ತಿ ಸಾರ್ವಜನಿಕರ ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇದ್ದು ಗ್ರಾಮ ಲೆಕ್ಕಾಧಿಕಾರಿಯಿಂದ ಸ್ಥಳ ಪರಿಶೀಲನೆಯ ಮಾಹಿತಿಯ ವರದಿ ನೀಡುವಂತೆ ಆದೇಶ ನೀಡಿದ್ದಾರೆ ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ .
ಸಾರ್ವಜನಿಕರ ಸ್ವತ್ತು ರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿ ಒಂದು ಕಡೆಯಾದರೆ,ಪ್ರಭಾವಿ ವ್ಯಕ್ತಿಗಳಿಂದ ಸಾರ್ವಜನಿಕರ ಸ್ವತ್ತು ದುರ್ಬಳಕೆ ಯಾಗುತ್ತಿದೆ ಎಂಬ ವರದಿ ಪ್ರಕಟಿಸುವುದು ಮಾಧ್ಯಮದ ಕರ್ತವ್ಯವಾಗಿದೆ .ಆ ನಿಟ್ಟಿನಲ್ಲಿ ನಮ್ಮ ಪತ್ರಿಕೆಯು ಪ್ರಾಮಾಣಿಕ ಹೆಜ್ಜೆಯನ್ನು ಇಡುತ್ತದೆ ಎಂಬ ಭರವಸೆಯನ್ನು ನಮ್ಮ ಓದುಗರ ಮಿತ್ರರಿಗೆ ನೀಡುತ್ತೇವೆ.
ವರದಿ… ಶ್ರೀನಿವಾಸ್, ಆರ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…