Wednesday, April 30, 2025
Google search engine
Homeರಾಜ್ಯಲಾಬಿ ನಡೆಸಿ, ಪಟ್ಟುಹಿಡಿದು, ಖಾತೆ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ, ಯಾವುದೇ ಲಾಬಿ ನಡೆಸದೆ ಆರಗ ಜ್ಞಾನೇಂದ್ರ...

ಲಾಬಿ ನಡೆಸಿ, ಪಟ್ಟುಹಿಡಿದು, ಖಾತೆ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ, ಯಾವುದೇ ಲಾಬಿ ನಡೆಸದೆ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದು ಹೇಗೆ? ಬಿಜೆಪಿ v/s ಆರೆಸ್ಸೆಸ್ ಇಬ್ಬರಲ್ಲಿ ಗೆದ್ದವರು ಯಾರು?

ರಾಜ್ಯ ಬಿಜೆಪಿಯಲ್ಲಿ ನೂತನ ಸಂಪುಟ ರಚನೆಯಾಗಿದೆ. 29 ಸಚಿವರುಗಳಿಗೆ ಖಾತೆಗಳನ್ನು ನೀಡಲಾಗಿದೆ. ಕೆಲವರು ಈಗಾಗಲೇ ಕೊಟ್ಟ ಖಾತೆಗಳು ಸರಿಯಿಲ್ಲ ಎಂದು ಖ್ಯಾತೆಗಳನ್ನು ತೆಗೆದು ಆಗಿದೆ. ಅದರಲ್ಲಿ ಹಲವು ಹೊಸ ಮುಖಗಳಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಮುಖಗಳು ಹೊಸದಾದರೂ ಅನುಭವ ಹಳೆಯದು.ಲಾಬಿ ನಡೆಸಿದರೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಸರ್ವೇಸಾಮಾನ್ಯ ಆದರೆ ಯಾವುದೇ ಲಾಬಿ ನಡೆಸದೆಯೂ ಮಂತ್ರಿಯಾಗಬಹುದು ಎನ್ನುವುದನ್ನು ಗೃಹ ಸಚಿವರಾಗಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು, ಬಂದರು ಖಾತೆಯ ಸಚಿವರಾದ ಎಸ್. ಅಂಗಾರ, ಬಿ,ಸಿ ನಾಗೇಶ್, ಸುನಿಲ್ ಕುಮಾರ್ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ v/s ಭಾರತೀಯ ಜನತಾ ಪಾರ್ಟಿ ಎರಡರಲ್ಲಿ ಸಂಘದ ಮಾತಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎಂದು ಹೇಳಬಹುದಾಗಿದೆ….


ಮೂಲ ಬಿಜೆಪಿಗರು ಮತ್ತು ಸಂಘ ನಿಷ್ಠೆಯನ್ನು ಹೊಂದಿದವರಿಗೆ ಆಯಕಟ್ಟಿನ ಸ್ಥಾನ ನೀಡಬೇಕೆನ್ನುವುದು ಸಂಘ ಪರಿವಾರದ ಒತ್ತಾಯವಾಗಿತ್ತು. ಅದಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎನ್ನಬಹುದು…

ಖಾತೆ ಹಂಚಿಕೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಒಲಿಯಿತು ಬಂಗಾರಪ್ಪ ಮಾದರಿ ಅದೃಷ್ಟ…..

ರಾಜ್ಯದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ ಸಂಘ ಪರಿವಾರದ ಮಾತೇ ಬಹುತೇಕ ಅಂತಿಮವಾಗುವುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಬಲವಾದ ಹಿಂದೂ ಪ್ರತಿಪಾದಕರು, ಸಂಘಟನೆಯ ಕಟ್ಟಾ ಕಾರ್ಯಕರ್ತರಾದ ಮೂವರು ಶಾಸಕರಿಗೆ ಅವರ ನಿಷ್ಠೆ ಬಯಸಿದ್ದಕ್ಕಿಂತ ಹೆಚ್ಚಿದ್ದನ್ನೇ ಕೊಟ್ಟಿದೆ.

ಬಿಜೆಪಿ, ಸಂಘ ಪರಿವಾರ ಮೂವರಿಗೆ ಉತ್ತಮ ಖಾತೆಯ ಜೊತೆಗೆ ಒಬ್ಬರಿಗಂತೂ ಡಬಲ್ ಖಾತೆ
ಇಷ್ಟೊಂದು ಪ್ರಭಾವೀ ಖಾತೆ ಸಿಗಬಹುದು ಎನ್ನುವ ಕಲ್ಪನೆ ಮೂವರು ನೂತನ ಸಚಿವರಿಗೆ ಇರಲಿಕ್ಕಿರಲಿಲ್ಲ. ಯಾಕೆಂದರೆ, ಸಚಿವ ಸ್ಥಾನ ನಿಭಾಯಿಸದ ಅನುಭವದ ಮಾನದಂಡ ಆ ಮೂರು ಖಾತೆಯನ್ನು ನಿಭಾಯಿಸಲು ಅತ್ಯವಶ್ಯಕ. ಆದರೂ, ಬಿಜೆಪಿ ಮತ್ತು ಸಂಘ ಪರಿವಾರ ಮೂವರಿಗೆ ಉತ್ತಮ ಖಾತೆಯ ಜೊತೆಗೆ ಒಬ್ಬರಿಗಂತೂ ಡಬಲ್ ಖಾತೆಯನ್ನು ಹಂಚಿದೆ.

ಕಳಂಕರಹಿತ ರಾಜಕಾರಣಿ, ಜನಪರ ವಿಷಯಗಳಲ್ಲಿ ರಾಜಿರಹಿತ ಹೋರಾಟಕ್ಕೆ ಹೆಸರಾಗಿರುವ ಅರಗ ಜ್ಞಾನೇಂದ್ರ…


ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಶಿವಮೊಗ್ಗ ಘಟಕದ ಅಧ್ಯಕ್ಷರಾಗುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ ಅರಗ ಜ್ಞಾನೇಂದ್ರ ಅವರಿಗೆ ಭರ್ಜರಿ ಗೃಹ ಖಾತೆ ಲಭಿಸಿದೆ. ಸಿಎಂ ನಂತರದ ಆಯಕಟ್ಟಿನ ಸ್ಥಾನ ಎಂದೇ ಗುರುತಿಸಲ್ಪಡುವ ಗೃಹ ಖಾತೆಯನ್ನು ಇವರಿಗೆ ನೀಡಲಾಗಿದೆ. ಜನಪರ ವಿಷಯಗಳಲ್ಲಿ ರಾಜಿರಹಿತ ಹೋರಾಟಕ್ಕೆ ಹೆಸರಾಗಿರುವ ಆರಗ ಜ್ಞಾನೆಂದ್ರ ಅವರು ವಿದ್ಯಾರ್ಥಿ ಜೀವನದಿಂದಲೇ ಆರ್​ಎಸ್​ಎಸ್​ ಸಂಪರ್ಕ ಹೊಂದಿದ್ದವರು. ಸತತ ಒಂಬತ್ತು ಬಾರಿ ಚುನಾವಣೆಗೆ ಸ್ಪರ್ಧಿಸಿ ಐದು ಬಾರಿ ಸೋತು, ನಾಲ್ಕು ಬಾರಿ ಗೆದ್ದು , ಅದರಲ್ಲೂ ಮೂರು ಬಾರಿ ಸತತವಾಗಿ ಗೆದ್ದು ದಾಖಲೆ ನಿರ್ಮಿಸಿದ ಕೀರ್ತಿ ಆರಗ ಜ್ಞಾನೇಂದ್ರ ಅವರದು.

ಕಳೆದ ಬಾರಿ ಚುನಾವಣೆಯಲ್ಲಿ 22 ಸಾವಿರ ಮತಗಳ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ ಕೀರ್ತಿ ಸಹ ಜ್ಞಾನೇಂದ್ರ ಅವರದು. ಬಡ ಕೃಷಿ ಕುಟುಂಬದಿಂದ ಬಂದ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ರಾಜಕಾರಣಿ ವಿರೋಧಪಕ್ಷದವರು ಮೆಚ್ಚುವಂತವರು, ಹಿಂದೆ ಒಂದು ಸಲ ಪ್ರಬಲ ರಾಜಕೀಯ ವೈರಿಗಳಾದ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಅವರು ನಾನು ಗೆದ್ದರೆ ತೊಂದರೆ ಇಲ್ಲ, ನಾನು ಗೆಲ್ಲದಿದ್ದರೆ ಆ ಸ್ಥಾನದಲ್ಲಿ ಜ್ಞಾನೇಂದ್ರ ಗೆಲ್ಲಬೇಕು ಎನ್ನುವ ಮಾತುಗಳನ್ನಾಡಿರುವುದು ಇದಕ್ಕೆ ಸಾಕ್ಷಿ.

ಈಗಲೂ ತೀರ್ಥಹಳ್ಳಿಯ ಸಮೀಪದ ಹಳ್ಳಿಯ ಗುಡ್ಡೆ ಕೊಪ್ಪದಲ್ಲಿ ತಮ್ಮ ರಾಜಕೀಯ ಗುರುಗಳಾದ ನಾಗರಾಜ್ ಭಟ್ಟರು ಕೊಟ್ಟಂತಹ ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾರೆ. ಇದು ಅವರ ಸರಳತೆಗೆ ಸಾಕ್ಷಿ, ಇವರ ಹುಟ್ಟು, ಬೆಳೆದು ಬಂದ ಹಾದಿ, ಪಟ್ಟ ಶ್ರಮ ಇವೆಲ್ಲದರ ಬಗ್ಗೆ ಪತ್ರಿಕೆ ಹಿಂದೆ ಪತ್ರಿಕೆ ವಿಸ್ತಾರವಾಗಿ ಬರೆದಿತ್ತು.

ಇಂಥ ಸರಳ ಸಜ್ಜನಿಕೆಯ ನೇರ-ನಿಷ್ಠುರ ರಾಜಕಾರಣಿಯಾದ ಆರಗ ಜ್ಞಾನೇಂದ್ರ ಅವರಿಗೆ ಅವರು ಊಹಿಸದೆ ಇದ್ದ ಗೃಹ ಖಾತೆ ಸಿಕ್ಕಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಎಲ್ಲಾ ಅರ್ಹತೆ ಅವರಿಗಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಪೊಲೀಸ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ಎಲ್ಲಾ ಪ್ರಯತ್ನ ಪಡುವುದಾಗಿ ಸ್ವತಃ ಜ್ಞಾನೇಂದ್ರ ಅವರು ಹೇಳಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರಿಗೂ ಕೂಡ ಸಚಿವರಾದ ಮೊದಲ ಪ್ರಯತ್ನದಲ್ಲೇ ಗೃಹ ಸಚಿವರಾಗುವ ಭಾಗ್ಯ ಒದಗಿ ಬಂದಿತ್ತು. ಈಗ ಆ ಸರದಿ ಜ್ಞಾನೇಂದ್ರ ಅವರದು..

ಜ್ಞಾನೇಂದ್ರ ಅವರ ಬಗ್ಗೆ ಕ್ಷೇತ್ರದ ಜನರ ಜೊತೆಗೆ, ರಾಜ್ಯದ ಜನರಿಗೂ ಸಾಕಷ್ಟು ಹಲವಾರು ಸವಾಲುಗಳು ಅವರ ಮುಂದಿವೆ. ಅವೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎನ್ನುವ ಭರವಸೆ ಹಲವರದ್ದು.

ವಿ.ಸುನೀಲ್ ಕುಮಾರ್ ಅವರಿಗೆ ಪವರ್ ಫುಲ್ ಖಾತೆ ….


ಇನ್ನೋರ್ವ ಕಟ್ಟಾ ಹಿಂದೂತ್ವವಾದಿ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರವನ್ನು ಪ್ರತಿನಿಧಿಸುವ ವಿ.ಸುನೀಲ್ ಕುಮಾರ್ ಅವರಿಗೂ ಬಹುಮುಖ್ಯ ಇಂಧನ ಖಾತೆ ಲಭಿಸಿದೆ. ಇದರ ಜೊತೆಗೆ, ಕನ್ನಡ ಮತ್ತು ಸಂಸ್ಕೃತಿಯ ಜವಾಬ್ದಾರಿಯನ್ನು ನೀಡಲಾಗಿದೆ. ಕಳೆದ ಬಾರಿ ಯಡಿಯೂರಪ್ಪನವರ ಸರಕಾರದಲ್ಲೂ ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕಳೆದ ಬಾರಿ ಅವರಿಗೆ ನಿರಾಸೆಯಾಗಿತ್ತು.

ಆದರೂ ದೃತಿಗೆಡದೆ ತಾಳ್ಮೆಯಿಂದ ಕಾದಿದ್ದ ಸುನೀಲ್ ಕುಮಾರ್ ಅವರಿಗೆ ಬಿಜೆಪಿ ಮತ್ತು ಸಂಘ ಉತ್ತಮ ಖಾತೆಯನ್ನೇ ನೀಡಿದೆ. ಇದರ ಜೊತೆಗೆ, ಇವರು ಉಡುಪಿ ಜಿಲ್ಲೆಯ ಉಸ್ತುವಾರಿ ಕೂಡಾ ಆಗಿದ್ದಾರೆ. ಹಾಗಾಗಿ, ಸುನೀಲ್ ಕುಮಾರ್ ಅವರು ಬಯಸಿದ್ದಕ್ಕಿಂತ ಹೆಚ್ಚಿದ್ದನ್ನೇ ಸಂಘ ಮತ್ತು ಪಕ್ಷ ನೀಡಿದೆ ಎಂದು ಹೇಳಬಹುದಾಗಿದೆ.

ಬಿ.ಸಿ.ನಾಗೇಶ್ ಅವರು ನೂತನ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಸಚಿವ….


ತಿಪಟೂರು ಕ್ಷೇತ್ರದ ಎರಡು ಬಾರಿ ಶಾಸಕರಾಗಿರುವ ಬಿ.ಸಿ.ನಾಗೇಶ್ ಅವರು ರಾಜ್ಯದ ನೂತನ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿದ್ದಾರೆ. ಕೊರೊನಾದ ಈ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಖಾತೆಗಳಲ್ಲೊಂದಾಗಿರುವ ಈ ಖಾತೆಯನ್ನು ಒಂದು ಕಾಲದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿ ಫುಲ್ ಟೈಂ ದುಡಿಯುತ್ತಿದ್ದ ನಾಗೇಶ್ ಅವರ ಸಂಘ ನಿಷ್ಠೆಗೆ ಫಲ ಲಭಿಸಿದೆ.

ಇವೆಲ್ಲವನ್ನು ಗಮನಿಸುತ್ತಿದ್ದರೆ ರಾಜ್ಯ ಹಾಗೂ ಕೇಂದ್ರ ಬಿಜೆಪಿಯಲ್ಲಿ ಪಕ್ಷಕ್ಕೆ ನಿಷ್ಠರಾಗಿರುವ ಕಾರ್ಯಕರ್ತರಿಗೆ, ಶಾಸಕರಿಗೆ, ಒಂದಲ್ಲ ಒಂದು ದಿನ ಉತ್ತಮ ಅಧಿಕಾರದ ಯೋಗ ಕೂಡಿ ಬರುತ್ತದೆ. ಅದಕ್ಕಾಗಿ ಕಾಯಬೇಕೆ ವಿನಹ ಅವಸರ ಪಡಬಾರದು. ಎನ್ನುವ ಮಾತನ್ನು ನಂಬಬಹುದು…

ವರದಿ…. ರಘುರಾಜ್ ಹೆಚ್. ಕೆ..

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...