Wednesday, April 30, 2025
Google search engine
Homeರಾಜ್ಯಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹೆಚ್, ಎನ್ ವಿಜಯದೇವ, ಅವರಿಗೆ ಅದ್ದೂರಿ ಅಭಿನಂದನಾ ಸಮಾರಂಭ...

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಹೆಚ್, ಎನ್ ವಿಜಯದೇವ, ಅವರಿಗೆ ಅದ್ದೂರಿ ಅಭಿನಂದನಾ ಸಮಾರಂಭ…

ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ತೀರ್ಥ ಹಳ್ಳಿ ತಾಲ್ಲೂಕು ಸಮಸ್ತ ಸಹಕಾರ ಸಂಘಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿಯಮಿತ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ, ಬೆಂಗಳೂರು ಇವುಗಳ ನಿರ್ದೇಶಕರೂ ಆದ ಹೆಚ್.ಎನ್. ವಿಜಯದೇವ್‌ರವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪುರಸ್ಕೃತರಾಗಿ ಮಾತನಾಡಿದ ವಿಜಯ್ ದೇವ ಅವರು, ತಾನು ಯಾವೊಂದು ಜಾತಿ – ಧರ್ಮ – ವ್ಯಕ್ತಿ ಮುಂತಾದ ಸಂಬಂಧಗಳಿಗೆ ಕಟ್ಟುಬಿದ್ದು ಸಂಸ್ಥೆಗಳನ್ನು ಕಟ್ಟಲಿಲ್ಲ ಬದಲಾಗಿ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಪೂರಕವಾಗಿ ಸಹಕಾರಿ ನೀತಿ ನಿಯಮಗಳಿಗೊಳಪಟ್ಟಂತೆ ನೆರವಾಗಬೇಕು. ಎನ್ನುವ ದೃಷ್ಟಿಯಿಂದ ಸಂಸ್ಥೆ ಕಟ್ಟಲಾಗಿದೆ. ಈ ಸಂಸ್ಥೆಯ ಉದ್ದೇಶ ಯಾವಾಗಲೂ  ಸಂಸ್ಥೆ ಸಮಾಜದ ಸ್ವಾಸ್ಥ್ಯ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದಾಗಿ ಇದೇ ಸಮಯದಲ್ಲಿ ತಿಳಿಸಿದರು.

ತಾನು ಯಾವುದೇ ಪ್ರಶಸ್ತ – ಪುರಸ್ಕಾರ ಇಷ್ಟಪಟ್ಟವನಲ್ಲ. ಹಾಗೂ ಅವುಗಳಿಂದ ದೂರವಿರಬೇಕೆಂಬ ಮನೋಭಾವ ಹೊಂದಿ ದವನಾಗಿದ್ದೇನೆ ಎಂದು ವಿನಮ್ರತೆಯಿಂದ ನುಡಿದರಲ್ಲದೇ, ಸಂಬಂಧಪಟ್ಟಂತೆ ತಾನು ಪ್ರಾಮಾಣಿಕನಾಗಿ ಕೆಲಸ ನಿರ್ವಹಿಸಿದ್ದೇನೆ. ನನಗೆ ಇಂತಹ ಅಭಿನಂದನೆಗಳು ಹೆಚ್ಚು ಖುಷಿ ಕೊಡದು. ಆದ್ದಾಗ್ಯೂ ಈ ನಿಟ್ಟಿನಲ್ಲಿ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಂಡು ಶ್ರಮಿಸಿದ ಸಂಘಟಕರು, ಸಂಘ ಸಂಸ್ಥೆಗಳ ಪ್ರಮುಖರೂ ಸೇರಿದಂತೆ ಪ್ರತಿಯೊಬ್ಬರಿಗೂ ಆಭಾರಿಯಾಗಿ ರುವುದಾಗಿ ತಿಳಿಸಿದರು.

ಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ॥ ಆರ್.ಎಂ. ಮಂಜುನಾಥಗೌಡ, ಸಹಕಾರಿ ಕ್ಷೇತ್ರ ಸಜ್ಜನರ ಚಳುವಳಿಯಾಗಿದ್ದು, ಸರ್ಕಾರದ ಸಾಧನೆ ಅಲ್ಲ ಹಾಗೂ ಸರ್ಕಾರ ಹಸ್ತಕ್ಷೇಪ ಮಾಡಿದರೆ ಸಹಕಾರಿ ಕ್ಷೇತ್ರ ಚಟ್ಟಕ್ಕೆ ಹಾಕಿದಂತೆ ಸೊರಗುತ್ತದೆ ಎಂದು ಸೂಚ್ಯವಾಗಿ ನುಡಿದರಲ್ಲದೇ, ಮ್ಯಾಮ್ಕೋಸ್‌ಗೂ ಕೂಡಾ ಸರ್ಕಾರದ ಷೇರು ಧನ ಇಲ್ಲ. ಷೇರುದಾರರ ಬಂಡವಾಳದಲ್ಲಿಯೇ ವ್ಯಾಪಾರ – ವ್ಯವಹಾರಗಳನ್ನು ನಿರ್ವಹಿಸಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ತಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ ಸಹಕಾರಿ ಕ್ಷೇತ್ರ ಉನ್ನತಿಯತ್ತ ಸಾಗಿತ್ತು. ಈ ಕ್ಷೇತ್ರ ಸ್ವಾಭಾವಿಕವಾಗಿ ಬೆಳೆಯುವಂತಹ ವಾತಾವರಣ ಸೃಷ್ಟಿಯಾಗಿತ್ತು. ಸರ್ಕಾರದ ಸವಲತ್ತು – ಸಹಕಾರ ಅಗತ್ಯವಿಲ್ಲ ಎಂದರಲ್ಲದೇ ವಿಜಯದೇವ್ ಕಷ್ಟಪಟ್ಟು ಸಂಸ್ಥೆಗಳನ್ನು ಕಟ್ಟಿದ್ದಾರೆ ಎನ್ನುವ ಬದಲು ಇಷ್ಟಪಟ್ಟು ಕಟ್ಟಿ ಬೆಳೆಸಿದ್ದಾಗಿದೆ ಎಂದರು.


ಹಿರಿಯ ಸಹಕಾರಿ, ಮಾಜಿ ಶಾಸಕರೂ ಆದ ಕಡಿದಾಳ್ ದಿವಾಕರ್ ಮಾತನಾಡಿ, ವಿಜಯ ದೇವ್ ರವರ ಸನ್ಮಾನ ಇಡೀ ಸಹಕಾರಿ ಸಂಘಕ್ಕೇ ಆದ ಸನ್ಮಾನ. ಇಂದು ತಾಲ್ಲೂಕಿನ ಯಾರೊಬ್ಬರೂ ಹಣದ ಮುಗ್ಗಟ್ಟಿಗೆ ಒಳಗಾಗದೇ, ಕೆಲವು ಮಂದಿ ವಿಜಯದೇವ್ ಹೆಸರಲ್ಲಿ ಊಟ ಮಾಡುವಂತಾಗಿದೆ ಎಂದರಲ್ಲದೇ, ಸಹಕಾರಿ ರಂಗದ ಸೇವೆಗೆ ರಾಜ್ಯ ಸಹಕಾರಿಯ ಅಧ್ಯಕ್ಷ ರಾಗಬೇಕಾಗಿದೆ ಎಂದು ತಮ್ಮ ಮನ ದಿಂಗಿತವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವಾನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್ ಉಪಾಧ್ಯಾಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಡಿ. ಕೃಷ್ಣಕುಮಾರ್, ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ಮೈಸೂರು, ಚಾಮರಾಜಗರ ಜಿಲ್ಲಾಾ ಕೇಂದ್ರ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ಜಿ.ಡಿ. ಹರೀಶ್ ಗೌಡ, ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

ಮುನ್ನೂರು ಮೋಹನ್ ಶೆಟ್ಟಿ ಸ್ವಾಗತಿಸಿ, ಕೆಸ್ತೂರು ಮಂಜುನಾಥ್ ಪ್ರಾಸ್ತಾವಿಕ ನುಡಿ ಮಾತನಾಡಿದರು. ಡಿ.ಎಸ್. ವಿಶ್ವನಾಥ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ವಿಜಯದೇವ್ ದಂಪತಿಗಳನ್ನು ಸನ್ಮಾನಿಸಲಾಯಿತು.

ವಿಜಯದೇವ ಅವರ ಸಾಮಾಜಿಕ ಕಳಕಳಿ, ಸಂಸ್ಥೆ ಕಟ್ಟುವ ಉಲ್ಲಾಸ, ಬಡವರ ಬಗ್ಗೆ ಇರುವ ಕಾಳಜಿ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಗುಣ ಹೀಗೆ ಮುಂದುವರೆಯಲಿ ಒಂದು ಸಂಸ್ಥೆಯನ್ನು ಹೇಗೆ ಕಟ್ಟಿ ಬೆಳೆಸಬೇಕು. ಎನ್ನುವುದಕ್ಕೆ ವಿಜಯ್ ದೇವ್ ಅವರು ಮಾದರಿ ಎನ್ನಬಹುದು…

ವರದಿ… ರಘುರಾಜ್ ಹೆಚ್ .ಕೆ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...