
ಕೆಲವರಿಗೆ ಅಧಿಕಾರದ ಗದ್ದುಗೆ ಹಿಡಿದ ತಕ್ಷಣ ಅದರ ಅಮಲು ತಲೆಗೆ ಎರುತ್ತದೆ. ಅದಕ್ಕೆ ತಕ್ಕ ಹಾಗೆ ಅಹಂಕಾರದಿಂದ, ದೌರ್ಜನ್ಯದಿಂದ, ನಡೆದುಕೊಳ್ಳುತ್ತಾರೆ.
ಮೊದಲು ನಾವು ನಡೆದು ಬಂದ ಹಾದಿ, ನಾವು ಇದ್ದ ರೀತಿ ಬೇರೆಯವರಿಗೆ ಪ್ರತಿಕ್ರಿಯೆ ನೀಡುತ್ತಿದ್ದ ರೀತಿ, ನಮಗೆ ಸಹಾಯ ಮಾಡಿದವರ ನೆನಪು ಮರೆತು ಹೋಗುತ್ತಾರೆ.
ಅಂಥವರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಈಗ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ನೂತನ ಸಂಪುಟದಲ್ಲಿ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಏಕೆಂದರೆ, ಸದಾ ಜನರ ನಡುವೆ ಇರುತ್ತಿದ್ದ ಇವರಿಗೆ ಈಗ ಗೃಹ ಸಚಿವರ ಖಾತೆ ಸಿಕ್ಕಿರುವುದರಿಂದ ಅಲ್ಲಿ ತನಗೆ ಮೊದಲ ರೀತಿ ಇರುವದಕ್ಕೆ ಆಗುವುದಿಲ್ಲ ಎನ್ನುವ ಸಂಕಟ ಎದುರಾಗಿದೆ.
ಜನರು ಸದಾ ನನ್ನ ಜೊತೆ ಇರದಿದ್ದರೆ ಸಮಾಧಾನವೇ ಆಗುವುದಿಲ್ಲ ಎನ್ನುವ ಮಾತುಗಳನ್ನು ಆರಗ ಜ್ಞಾನೇಂದ್ರ ಅವರು ಹಂಚಿಕೊಂಡಿದ್ದಾರೆ.
ಆದರೆ ಈಗ ಪ್ರೋಟೋಕಾಲ್ ಪ್ರಕಾರ ಪೊಲೀಸ್ ವ್ಯವಸ್ಥೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಅನುಸರಿಸಬೇಕಾಗುತ್ತದೆ. ಇವರನ್ನು ಮಾತಾಡಿಸ ಬೇಕಾದರೆ ಒಂದಷ್ಟು ವವಸ್ಥೆಗಳನ್ನು ದಾಟಿ ಹೋಗ ಬೇಕಾಗುತ್ತದೆ. ಮೊದಲಿನ ಹಾಗೆ ನೇರವಾಗಿ ಸಿಗುವುದು ಕಷ್ಟ ಇದನ್ನು ಕ್ಷೇತ್ರದ ಜನರು ಕೂಡ ಅರ್ಥಮಾಡಿಕೊಳ್ಳಬೇಕು ಎನ್ನುವುದು ಜ್ಞಾನೇಂದ್ರ ಅವರ ಮನದಾಳದ ಮಾತು,
ಇದರ ಜೊತೆಗೆ ಮುಖ್ಯಮಂತ್ರಿಗಳ ನಂತರ ಸ್ಥಾನದಲ್ಲಿರುವ ಗೃಹ ಸಚಿವರಾಗಿರುವ ಪ್ರತಿಯೊಬ್ಬರೂ ಝೀರೋ ಟ್ರಾಫಿಕ್ ನಲ್ಲಿ ಓಡಾಡುವುದು ಸರ್ವೇಸಾಮಾನ್ಯ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ನಲ್ಲಿ ಓಡಾಡಿ ಬಹಳ ಟೀಕೆಗೆ ಗುರಿಯಾಗಿದ್ದರು.
ಅವರಷ್ಟೇ ಅಲ್ಲ ಹಲವರು ತಮ್ಮ ಅಹಂ ತೋರಿಸಿಕೊಳ್ಳಲು ಜೀರೋಟ್ರಾಫಿಕ್ನನಲ್ಲಿ ಓಡಾಡುವುದು ಸಾಮಾನ್ಯ ಆದರೆ ಗೃಹ ಸಚಿವರಾಗಿರುವ ಜ್ಞಾನೇಂದ್ರ ಅವರು ಜೀರೋ ಟ್ರಾಫಿಕ್ ನಿರಾಕರಿಸುವುದರ ಮೂಲಕ ಸರಳತೆ ಮೆರೆದಿದ್ದಾರೆ. ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.
ಇದು ಹೀಗೆ ಮುಂದುವರಿದುಕೊಂಡು ಹೋಗಲಿ ಅಧಿಕಾರದ ಅಹಂನಿಂದ ಇರುವವರು ಇವರನ್ನು ನೋಡಿ ಕಲಿತುಕೊಳ್ಳಲಿ….
ವರದಿ …ರಘುರಾಜ್ ಹೆಚ್ .ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899..