
ಜಯಕರ್ನಾಟಕ ಸಂಘಟನೆಯ ಪ್ರಧಾನ ಕಚೇರಿ ಮಲ್ಲೇಶ್ವರಂನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಅವರ ಸಹಯೋಗದೊಂದಿಗೆ ರಾಜ್ಯದ ಅನಾಥ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ ,ಎನ್ ಜಗದೀಶ್ ರವರು ಜಯಕರ್ನಾಟಕ ಸಂಘಟನೆಯ ವತಿಯಿಂದ ಫಲಾನುಭವಿ ಮಕ್ಕಳಿಗೆ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹರಿಸಿದರು . ಮಾತನಾಡುವ ಸಮಯದಲ್ಲಿ ಮುತ್ತಪ್ಪ ರೈಯವರ ನೆನೆದು ಗದ್ಗದಿತರಾದ ಜಗದೀಶ್ ಬಿ, ಎನ್ ರವರು ಮುತ್ತಪ್ಪ ರೈ ರವರು ಎಲ್ಲ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಿಗೆ ತಮ್ಮ ಮಾತೃ ಹೃದಯವನ್ನು ದಾನ ಮಾಡಿದ್ದಾರೆ ಹಾಗಾಗಿ ಜಯಕರ್ನಾಟಕ ಸಂಘಟನೆಯ ಎಲ್ಲ ಪದಾಧಿಕಾರಿಗಳು ತಮ್ಮ ಸುತ್ತಮುತ್ತಲಿರುವ ನೊಂದವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ . ಮುತ್ತಪ್ಪ ರೈ ಅವರ ಮಗನಾದ ರಿಕ್ಕಿ ರೈ ರವರು ಜಯಕರ್ನಾಟಕ ಸಂಘಟನೆ ಬೆನ್ನುಲುಬಾಗಿದ್ದು ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚು ಹೆಚ್ಚು ಇಂಥ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಕ್ಕಿ ರೈ ಅವರು ಬಡವರ ಕಷ್ಟಗಳು ನನಗೆ ಅರಿವಿದೆ ಹಾಗಾಗಿ ತಂದೆಯವರ ದಾರಿಯಲ್ಲಿ ಇನ್ನೂ ಹೆಚ್ಚೆಚ್ಚು ಜನರಿಗೆ ನಾನು ಸಹಾಯ ಮಾಡುತ್ತೇನೆ ಆಗ ಮಾತ್ರ ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ವಕೀಲರ ಘಟಕದ ನಾರಾಯಣಸ್ವಾಮಿ ಅವರು ಸಂಸ್ಥಾಪಕರ ಮಗನಾದ ರಿಕ್ಕಿ ರೈ ಯವರ ನೇತೃತ್ವದಲ್ಲಿ ಸಂಘಟನೆ ಇನ್ನೂ ಬೆಳೆಯಲಿದೆ ಎಂದು ಹೇಳಿದರು …..
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…