
ತೀರ್ಥಹಳ್ಳಿ:- ಚುನಾವಣೆ ಘೋಷಣೆ ದಿನ ಇಂದು ಬೆಳ್ಳಗೆ ಕೂಡ ತಮ್ಮ ಮನೆಯಲ್ಲಿ ಜನತಾದರ್ಶನ ನಡೆಸಿದ ಗೃಹ ಸಚಿವರು,ನಂತರ ಅರಳಿ ಸುರುಳಿಯಲ್ಲಿ ಕಾರ್ಯಕರ್ತರೊಬ್ಬರ ಅನಾರೋಗ್ಯ ವಿಚಾರಿಸಿ,
ತೂದೂರು ಪ್ರವಾಸ ಮುಂದುವರಿಸುತ್ತಿದ್ದಾಗ ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಸಚಿವರು ಸರ್ಕಾರಿ ಕಾರನ್ನು ತ್ಯಜಿಸಿ,
ತಕ್ಷಣವೇ ಚಾಕನಗದ್ದೆ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ
ತಮ್ಮ ಖಾಸಗಿ ವಾಹನದಲ್ಲಿ ಪ್ರವಾಸವನ್ನು ಮುಂದುವರಿಸಿದರು.

ಆರಗ ಜ್ಞಾನೇಂದ್ರ ಅವರ ಅಭಿಮಾನಿ ಕೆಂದಳಬೈಲು ನಿತ್ಯಾನಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಎಳನೀರಿನಲ್ಲಿ ಮತ್ತೊಮ್ಮೆ ಜ್ಞಾನೇಂದ್ರ ಎಂದು ಬರೆದು ಜ್ಞಾನೇಂದ್ರ ಅವರು ಮತ್ತೆ ಗೆಲ್ಲಬೇಕು ಎಂದು ಸಂಕಲ್ಪ ಮಾಡಿ ಮಂಜುನಾಥನ ಮರೆಹೋಗಿದ್ದಾರೆ….
ರಘುರಾಜ್ ಹೆಚ್.ಕೆ…9449553305…