
ಚಿಕ್ಕಮಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ಎಂದೇ ಖ್ಯಾತಿ ಪಡೆದಿದ್ದ ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ವೈಎಸ್‌ವಿ ದತ್ತಾ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿಗೆ ಸೇರಿಕೊಂಡಿದ್ದರು.
ಆದರೆ ಕಾಂಗ್ರೆಸ್ ಪಕ್ಷದಲ್ಲಿ ವೈಎಸ್‌ವಿ ದತ್ತಾಗೆ ಟಿಕೆಟ್ ನೀಡಲಿಲ್ಲ ಇದರಿಂದ ವಿಚಲಿತರಾದ ದತ್ತಾ ತೀವ್ರ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ನನ್ನನ್ನು ಬಲಿಪಶು ಮಾಡಿದರು ಕಾಂಗ್ರೆಸ್ ಗೆ ಕರೆತಂದು ಟಿಕೆಟ್ ನೀಡುತ್ತೇನೆ ಎಂದು ಹೇಳಿ ನೀಡಲಿಲ್ಲ ನನಗೆ ವಂಚನೆ ಮಾಡಿದ್ದರು ಇದರಿಂದ ನನಗೆ ತೀವ್ರ ಬೇಸರವಾಗಿದೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು .
ನಂತರ ದೇವೇಗೌಡರ ಆದೇಶದ ಮೇಲೆ ಕಾರ್ಯಚರಣೆಗೆ ಇಳಿದ ಎಚ್ ಡಿ ರೇವಣ್ಣ ಮತ್ತೆ ದತ್ತಾ ಅವರನ್ನು ಜೆಡಿಎಸ್ ಗೆ ಕರೆತರಲು ಯಶಸ್ವಿಯಾದರು.
ಈಗ ಜೆಡಿಎಸ್ ಪಕ್ಷ ದತ್ತಾ ಅವರಿಗೆ ಟಿಕೆಟ್ ನೀಡಿದೆ ಮಾಜಿ ಪ್ರಧಾನಿ ಜೆಡಿಎಸ್ ನ ವರಿಷ್ಠ ಎಚ್ ಡಿ ದೇವೇಗೌಡ ಅವರ ಆದೇಶ ಆಗಿದೆ ದತ್ತಾ ಅವರನ್ನು ಗೆಲ್ಲಿಸಿಕೊಂಡು ಬರಬೇಕು ನಾವು ಗೆಲ್ಲಿಸಿಕೊಂಡು ಬರುತ್ತೇವೆ ಯಾವತ್ತೂ ಜೆಡಿಎಸ್ ಪಕ್ಷ ದತ್ತಾ ಅವರ ಜೊತೆ ನಿಲ್ಲುತ್ತದೆ ಎಂದು ಎಚ್ ಡಿ ರೇವಣ್ಣ ಹೇಳಿದ್ದಾರೆ…
ಈ ಸಲ ಪ್ರಾಮಾಣಿಕ ಸರಳ ಸಜ್ಜನಿಕೆಯ ರಾಜಕಾರಣಿಯ ಕೈ ಹಿಡಿಯುತ್ತಾರಾ ಕಡೂರು ಮತದಾರರು ಕಾದುನೋಡಬೇಕು..
ರಘುರಾಜ್ ಹೆಚ್.ಕೆ…9449553305…