
ಶಿವಮೊಗ್ಗ: ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಸಿದ್ದ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷದ ಹೈಕಮಾಂಡ್ ನಿರಾಸೆ ಮಾಡಿದೆ.
ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಜಿ ಎಂಎಲ್ಎ ಕೆಬಿ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್, ಗ್ರಾಮಾಂತರದ ನಾರಾಯಣಸ್ವಾಮಿ, ಜಿ ಪಲ್ಲವಿ, ರವಿಕುಮಾರ್ ಅವರಿಗೆ ತೀವ್ರ ನಿರಾಶೆಯಾಗಿದೆ.
ಇನ್ನೊಬ್ಬ ಆಕಾಂಕ್ಷಿ ಮಹಾನಗರ ಪಾಲಿಕೆಯ ಸದಸ್ಯರಾದ ಮಾಜಿ ಎಂಎಲ್ಎ ಚಂದ್ರಶೇಖರಪ್ಪ ಪುತ್ರರಾದ ಯೋಗೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಇನ್ನೊಂದು ಕಡೆ ಶಿಕಾರಿಪುರದಲ್ಲಿ ನಾಗರಾಜ್ ಗೌಡ ಬದಲಿಗೆ ಗೋಣಿ ಮಾಲ್ತೇಶ್ ಕೆ ಟಿಕೆಟ್ ನೀಡಲಾಗಿದೆ.
ಇವೆಲ್ಲ ಬೆಳವಣಿಗೆಗಳಿಂದ ನೊಂದ ಟಿಕಟ್ ಆಕಾಂಕ್ಷಿಗಳ ಅಭಿಮಾನಿಗಳು ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಗೆ ತಮ್ಮ ತಮ್ಮ ನಾಯಕರಿಗೆ ಟಿಕೆಟ್ ನೀಡಬೇಕು ಟಿಕೆಟ್ ಹಂಚಿಕೆ ಪ್ರಕ್ರಿಯೆ ಸರಿಯಿಲ್ಲ ಮತ್ತೆ ಪರಿಶೀಲನೆ ನಡೆಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ…
ಗ್ರಾಮಾಂತರ ಭಾಗದಲ್ಲಿ ನಾರಾಯಣಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ, ಶಿಕಾರಿಪುರದಲ್ಲಿ ನಾಗರಾಜ್ ಗೌಡ ಪಕ್ಷೇತರ ಅಭ್ಯರ್ಥಿಯಾಗಿ, ನಿಲ್ಲಲು ತಯಾರಿ ನಡೆಸಿದ್ದಾರೆ…
ಇವೆಲ್ಲ ಬೆಳವಣಿಗೆಗಳ ಮಧ್ಯೆ ನಾಳೆ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಅವರು ಪತ್ರಿಕಾಗೋಷ್ಠಿ ಕರೆದಿದ್ದು ಟಿಕೆಟ್ ಹಂಚಿಕೆ ಬಗ್ಗೆ ಅಭಿಮಾನಿಗಳ ಕಾರ್ಯಕರ್ತರ ಆಕ್ರೋಶದ ಬಗ್ಗೆ ಮುಂದಿನ ಪಕ್ಷದ ನಿಲುವಿನ ಬಗ್ಗೆ ಯಾವ ನಿರ್ಧಾರ ಪ್ರಕಟಿಸುತ್ತಾರೆ ಕಾದು ನೋಡಬೇಕು…
ರಘುರಾಜ್ ಹೆಚ್.ಕೆ..9449553305…