
ಮಳವಳ್ಳಿ ಕಳೆದ 2ದಿನಗಳ ಹಿಂದಷ್ಟೇ ಭಾರೀ ಮಳೆಯಿಂದಾಗಿ ಪಟ್ಟಣದ ಅನಂತ ರಾಮಯ್ಯ ಸರ್ಕಲ್ಲಿನಲ್ಲಿ ಮಳೆಯ ನೀರು ನಿಂತು ಸಾರ್ವಜನಿಕರಿಗೆ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿತ್ತು .
ಇದನ್ನು ಮನಗಂಡ ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ರವರು
ಪುರಸಭೆ ಆಡಳಿತ ವತಿಯಿಂದ ಜೆಸಿಬಿಯ ಮೂಲಕ ಚರಂಡಿಯ ಹೂಳನ್ನು ತೆಗೆಸಿ ಮಳೆ ನೀರು ಬಿದ್ದರೂ ಸರಾಗವಾಗಿ ಹೋಗುವಂತೆ ಇಂದು ಜೆಸಿಬಿಯ ಮೂಲಕ ಹೂಳೆತ್ತಿಸುವ ಕೆಲಸವನ್ನು ಮಾಡಿಸಿದರು .
ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಕಳೆದ 2ದಿನಗಳ ಹಿಂದೆ ಭಾರಿ ಮಳೆ ಬಿದ್ದ ಪರಿಣಾಮ ಅನಂತರಾಮಯ್ಯ ಸರ್ಕಲ್ ತುಂಬಾ ಜಲಾವೃತಗೊಂಡಿತ್ತು ಇದನ್ನು ಮನಗಂಡು ಚರಂಡಿಯ ಹೂಳನ್ನು ಪುರಸಭೆ ವತಿಯಿಂದ ತೆಗೆಸಲು ನಾವು ಮುಂದಾಗಿದ್ದೇವೆ ಎಂದರು ಜನರು ಮತ್ತು ವ್ಯಾಪಾರಸ್ಥರು ತ್ಯಾಜ್ಯಗಳನ್ನು ಚರಂಡಿಗೆ ಹಾಕುತ್ತಿರುವುದರಿಂದ ಚರಂಡಿಯ ಹೂಳು ಹೆಚ್ಚಾಗುತ್ತಿದೆ ಮುಂದೆ ತ್ಯಾಜ್ಯಗಳನ್ನು ಚರಂಡಿಗೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರವಿ ವಡ್ಡರಹಳ್ಳಿಸಿದ್ದರಾಜು ಜೆಡಿಎಸ್ ಮುಖಂಡರಾದ ಪೊತ್ತಂಡೆ ನಾಗರಾಜು ಅಂಕರಾಜು ಪೌರಕಾರ್ಮಿಕರ ಮೇಸ್ತ್ರಿ ಕುಮಾರ್ ಚರಂಡಿಯ ಹೂಳೆತ್ತಿಸುವ ಸಂದರ್ಭದಲ್ಲಿ ಇದ್ದರು …
ವರದಿ..ಎಸ್, ಮಂಜು ಮಳವಳ್ಳಿ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…