
ದಾವಣಗೆರೆ> ಜಿಲ್ಲೆಯ ಹರಿಹರ ತಾಲೂಕಿನ ಕಾಳಿದಾಸ ನಗರದ 14ನೇ ವಾರ್ಡ್‌ನ ಕಾಂಗ್ರೆಸ್ ನ ಅಭ್ಯರ್ಥಿ ಮೆಹಬೂಬ್ ಬಾಷ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಅಲ್ತಾಫ್ 742 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಜೀನತ್ ಉನ್ನೀಸಾ ಅವರ ವಿರುದ್ಧ 333 ಮತಗಳ ಅಂತರದಿಂದ ಜಯ ಸಾಧಿಸುವುದರ ಮುಖಾಂತರ ಹೊಸ ಇತಿಹಾಸ ಬರೆದಿದ್ದಾರೆ.
ಕಾಂಗ್ರೆಸ್ ನ ಭದ್ರಕೋಟೆ ಗೆ ಲಗ್ಗೆ ಹಾಕಿದ ಜೆಡಿಎಸ್…
ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಮತಏಣಿಕೆ ಕಾರ್ಯ ಆರಂಭಗೊಂಡಿತು. 8.30ಕ್ಕೆ ಫಲಿತಾಂಶ ಪ್ರಕಟಗೊಂಡಿತು. ಮತಏಣಿಕೆ ಕಾರ್ಯದಲ್ಲಿ ಚುನಾವಣಾಧಿಕಾರಿ ರಾಮಾಂಜನೇಯ, ಉಪ ಚುನಾವಣಾಧಿಕಾರಿ ಲಕ್ಷ್ಮಣನಾಯಕ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪಿಎಸ್‍ಐ ಸುನಿಲ್ ತೇಲಿ, ಸಿಬ್ಬಂದಿ ಬಿ.ಬಿ. ರೇವಣನಾಯಕ್, ಬಸವರಾಜಯ್ಯ ಭಾಗವಹಿಸಿದ್ದರು.
ಕಾಂಗ್ರೆಸ್ಸಿನ ಎಡವಟ್ಟು ಜೆಡಿಎಸ್ ಗೆ ಸಿಕ್ತು ಪಟ್ಟು:
ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆಯ್ಕೆ ಮೆಹಬೂಬ್ ಬಾಷ ಅವರ ಮಡದಿಯ ಆಯ್ಕೆ ಉತ್ತಮವಾಗಿರಲಿಲ್ಲ. ಜೆಡಿಎಸ್ ನ ಅಭ್ಯರ್ಥಿ ಅಲ್ತಾಫ್ ಜನರಿಗೆ ಚಿರಪರಿಚಿತ ನಾಗಿದ್ದು. ಜನರ ಸಂಕಷ್ಟಕ್ಕೆ ನೆರವಾಗುವ ವ್ಯಕ್ತಿಯಾಗಿದ್ದ ನೆಂದು ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿತ್ತು. ಅದು ಈಗ ನಿಜವಾಗಿದೆ. ಬಿಜೆಪಿ-ಜೆಡಿಎಸ್ ನೇರ ಹೋರಾಟದಲ್ಲಿ ಬಿಜೆಪಿಯ ಪಾತ್ರ ಅಷ್ಟೇನೂ ಇರಲಿಲ್ಲ.
ಅಂತಿಮವಾಗಿ ನಡೆದ ಮತದಾನದಲ್ಲಿ 1,444 ಮತದಾರರು ಹಕ್ಕು ಚಲಾಯಿಸಿದ್ದರು. ಜೆಡಿಎಸ್ ಅಭ್ಯರ್ಥಿ ಬಿ. ಅಲ್ತಾಫ್ 742, ಕಾಂಗ್ರೆಸ್ ಅಭ್ಯರ್ಥಿ ಜೀನತ್ ಉನ್ನೀಸಾ 409, ಬಿಜೆಪಿ ಅಭ್ಯರ್ಥಿ ಸಂತೋಷ ರಾಜನಹಳ್ಳಿ 290 ಹಾಗೂ ಪಕ್ಷೇತರ ಅಭ್ಯರ್ಥಿ ಸಂಕೇತರಾಜ್ 3 ಮತಗಳನ್ನು ಪಡೆದರು.
ಸಂಭ್ರಮದಲ್ಲಿ ಮೈ ಮರೆತ ಜೆಡಿಎಸ್ ನಾಯಕರು:
ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಜಯಘೋಷಗಳೊಂದಿಗೆ ಸಂಭ್ರಮಾಚರಣೆ ಮಾಡಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ವಿಜೇತ ಅಭ್ಯರ್ಥಿ ಬಿ. ಅಲ್ತಾಫ್‍ಗೆ ಹಾರ ಹಾಕಿ ಮೆರವಣಿಗೆ ನಡೆಸಲಾಯಿತು.
ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಸಂಭ್ರಮಾಚರಣೆ ಮೂಕಪ್ರೇಕ್ಷಕರಾದ ಅಧಿಕಾರಿಗಳು:
ಜೆಡಿಎಸ್ ಸಂಭ್ರಮಾಚರಣೆಯಲ್ಲಿ ಅಂತರ ಹಾಗೂ ಮಾಸ್ಕ್ ಕಣ್ಮರೆಯಾಗಿತ್ತು. ನೂರಾರು ಜನ ಗುಂಪು ಸೇರಿ ಮೆರವಣಿಗೆ ನಡೆಸಿದರು. ಇದನ್ನು ನೋಡುತ್ತಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು ಕೋವಿಡ್ ನಿಯಮಗಳು ಕಣ್ಮರೆ ಆಗಿತ್ತು…
ವರದಿ.. ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…