
ಶಿವಮೊಗ್ಗ : ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿ ಐ ಎಸ್ ಎಲ್ ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಭದ್ರಾವತಿ ವಿ ಐ ಎಸ್ ಎಲ್ ಕಾರ್ಖಾನೆ ಭೇಟಿ ವಿಚಾರ ಕಾರ್ಖಾನೆ ಉಳಿವಿಗಾಗಿ ಸಂಸದ ಬಿ.ವೈ ರಾಘವೇಂದ್ರ, ಶಾಸಕರಾಗಿದ್ದ ದಿವಂಗತ ಅಪ್ಪಾಜಿಗೌಡ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಃ ಶ್ಚೇತನ ಸಂಬಂಧ ಕಾರ್ಮಿಕರ ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ.ಲೋಕಸಭಾ ಕಲಾಪ ನಡೆಯುತ್ತಿರುವ ಹಿನ್ನೆಲೆ ನಿರ್ಧಾರ ಪ್ರಕಟ ಮಾಡಲು ಬರುವುದಿಲ್ಲ ಕೇಂದ್ರದ ಎಲ್ಲಾ ನಿರ್ಧಾರವನ್ನು ನಾನು ಇಲ್ಲಿ ಹೇಳಲಾಗದು.
ವಿಐಎಸ್ಎಲ್ ಕಾರ್ಖಾನೆ ಉಳಿಸಿ ಕೊಡಲು ಚಿಂತನೆ ನಡೆಸುತ್ತೇವೆ ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಕಾರ್ಯಕ್ರಮ ಸೇರಿದಂತೆ ಹಲವು ರೀತಿಯಲ್ಲಿ ಯೋಜನೆ ಜಾರಿ ಮೂಲಕ ಕಾರ್ಖಾನೆ ಉಳಿಸಲು ಅವಕಾಶವಿದೆ.
ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿ ಹೊಂದಿದ್ದು ಅದಕ್ಕೆ ಪೂರಕವಾಗಿ ತೀರ್ಮಾನಕ್ಕೆ ಬರುತ್ತೇವೆ ಸೈಲ್ ಆಸ್ತಿಯಾಗಿರುವ ವಿಐಎಸ್ಎಲ್ ಉಳಿಸಿ, ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ .
ಬಳ್ಳಾರಿಯ ರಮಣದುರ್ಗದಲ್ಲಿ ಕಬ್ಬಿಣದ ಆದಿರಿಗಾಗಿ ಗಣಿ ಅನುಮೋದನೆ ಸಿಕ್ಕಿದೆ ಅಲ್ಲಿ ಅದಿರು ಉತ್ಪಾದಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ ಭದ್ರಾವತಿ ವಿಎಸ್ಐಎಲ್ ಉಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ.
ಸಿಎಂ ಬದಲಾವಣೆ ವಿಚಾರ :
ಅದೆಲ್ಲಾ ನಮ್ಮ ಪಕ್ಷಕ್ಕೆ ಸೇರಿದ ವಿಷಯವಲ್ಕ. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಅವರು ತೀರ್ಮಾನ ಮಾಡಬೇಕು
ಮಂಡ್ಯದಲ್ಲಿ ವಿಮಾನ ನಿಲ್ದಾಣ ವಿಚಾರ :
ಮಂಡ್ಯದಲ್ಲಿ ಏರ್‌ಪೋರ್ಟ್ ಸ್ಥಾಪನೆಗೆ ಕೇಂದ್ರ ಸರ್ಕಾರದ ನೆರವು ಬೇಕು ಎಂಬ ಸಚಿವರು ಚೆಲುವರಾಯಸ್ವಾಮಿಯವರ ಬೇಡಿಕೆ ಕೇಂದ್ರ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಹಾವೇರಿ ಬಳಿ ಆಕ್ಸಿಡೆಂಟ್ ನಲ್ಲಿ ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ 13 ಜನರ ದುರಂತ ಸಾವು ಎಮ್ಮೆ ಹಟ್ಟಿ ಗ್ರಾಮದಲ್ಲಿ ಕುಟುಂಬಗಳ ಪರಿಸ್ಥಿತಿ ದಾರುಣವಾಗಿದ್ದು ಅವರಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
ಶತಮಾನ ಪೂರೈಸಿರುವ ಸರಕಾರಿ ಸ್ವಾಮ್ಯದ ಕಾರ್ಖಾನೆಗೆ ಜೀವ ನೀಡ್ತಾರಾ ಹೆಚ್ಡಿಕೆ
ವಿಶ್ವೇಶ್ವರಯ್ಯ ಅವರು ಆರಂಭಿಸಿದ್ದ ಕಾರ್ಖಾನೆ ವಿಐಎಸ್ಎಲ್
ಕುಮಾರಸ್ವಾಮಿ ವಿಐಎಸ್ಎಲ್ ಭೇಟಿ ನಂತರ ಚಿಗುರೊಡೆದ ನಿರೀಕ್ಷೆ
ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನದ ದಿನಗಳನ್ನು ಎದುರು ನೋಡ್ತೀರೋ ಜನ
ನಷ್ಟದ ಹಾದಿಯಲ್ಲಿರುವ ಕಾರ್ಖಾನೆಗೆ ಮರು ಜೀವಾ ನೀಡ್ತಾರಾ ಹೆಚ್ಡಿಕೆ
ಕಾರ್ಖಾನೆಯನ್ನು ಕೇಂದ್ರದ ಸ್ವಾಧೀನಕ್ಕೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡ
ಒಂದು ರೂಪಾಯಿಗೆ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ನೀಡಿದ್ದ ಹೆಚ್ಡಿಡಿ
ಉಕ್ಕಿನ ನಗರಿಯ ತುಕ್ಕು ಹಿಡಿದ ಕಾರ್ಖಾನೆಗೆ ಮರು ಜೀವ ನೀಡ್ತಾರಾ ಹೆಚ್ಡಿಕೆ
ಕಾರ್ಮಿಕರಿಗೆ ಪೂರ್ಣ ಪ್ರಮಾಣದ ಕೆಲಸ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರಾ ಕುಮಾರಸ್ವಾಮಿ ಕಾದು ನೋಡಬೇಕು.