
ದಾವಣಗೆರೆ: ಇಂದು ಪತ್ರಿಕಾ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ 8.30ಕ್ಕೆ ನಗರದ ಹರ್ಡೇಕರ್ ಮಂಜಪ್ಪ ಇವರ ಪುತ್ಥಳಿಗೆ ಮಹಾನಗರ ಪಾಲಿಕೆ ಅಧ್ಯಕ್ಷರಾದ ವಿನಾಯಕ ಪೈಲ್ವಾನ್ ಹಾಗು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಇವರು ಮಾಲಾರ್ಪಣೆ ಮಾಡಿ ಪತ್ರಿಕಾ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಕಾನಿಪ ಅಧ್ಯಕ್ಷರಾದ ಇ. ಮಂಜುನಾಥ,ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ
ಖಜಾಂಚಿ ಬದರಿನಾಥ್,ಕಾರ್ಯದರ್ಶಿಗಳಾದ ನಿಂಗೋಜಿ ರಾವ್,ಚನ್ನವೀರಯ್ಯ, ಹಿರಿಯ ಪತ್ರಕರ್ತರಾದ ಮಂಜುನಾಥ,ಬಕ್ಕೇಶ್ ನಾಗನೂರು, ಪದಾಧಿಕಾರಿಗಳಾದ ವೇದಮೂರ್ತಿ,ಇಂದುದರ್ ನಿಷಾನಿಮತ್,ರವಿ,ಮಂಜುನಾಥ್ ಕಾಡಜ್ಜಿ, ಸದಸ್ಯರುಗಳಾದ ಚನ್ನಬಸವ ಶೀಲವಂತ.ರಾಜಶೇಖರ್,ನಿಂಗರಾಜು, ವಿನಾಯಕ್ ಜಾದವ್,ಹನುಮಂತಪ್ಪ ,ಸೋಮಶೇಖರ್ ಇನ್ನಿತರರು ಉಪಸ್ಥತರಿದ್ದರು.