
ಹರಿಹರ:-ಕರೋನಾ ಮೊದಲನೇ ಹಾಗೂ ಎರಡನೆ ಅಲೆ ಪರಿಣಾಮದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಆರ್ಥಿಕ,ಶೈಕ್ಷಣಿಕ, ಔದ್ಯೋಗಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ ಎಂತಹ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಅಧ್ಯಯನದ ಪ್ರಕಾರ ಕರೋನಾ ಮೂರನೇ ಅಲೆಯು ಮತ್ತೆ ಬರುವ ಸಾಧ್ಯತೆ ಇದ್ದು ಈ ಮೂರನೇ ಅಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಈಗಾಗಲೇ ತಿಳಿಸಿದ್ದಾರೆ .
ಆದ್ದರಿಂದ ಕರೋನಾ ಮೂರನೇ ಅಲೆಯನ್ನ ಎದರಿಸುವ ಮುಂಜಾಗ್ರತ ಕ್ರಮವಾಗಿ ಹರಿಹರ ತಾಲ್ಲೂಕು ಕುಣೆಬೆಳಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಣುಕಾಪುರ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೇಷರ್ ನೀಡುತ್ತಿದ್ದೇವೆ ಎಂದರು.
ಮಕ್ಕಳು ಕರೋನಾ ಮೂರನೇ ಅಲೆ ಎದುರಿಸಲು ಈಗಾಗಲೇ ಸನ್ನದ್ಧರಾಗಬೇಕಾಗಿದೆ ಆದ್ದರಿಂದ ಅವರಿಗೆ ತೊಳೆದು ಮತ್ತೆ ಬಳಸಲು ಸಾಧ್ಯವಾಗುವಂತಹ ಮಾಸ್ಕ್ ಗಳನ್ನು ನೀಡುತ್ತಿದ್ದೇವೆ ಇದು ಅವರ ಆರೋಗ್ಯವನ್ನ ಮುಂದಿನ ದಿನದಲ್ಲಿ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಈ ಸರಳ ಕಾರ್ಯಕ್ರಮದ ಸಂದರ್ಭದಲ್ಲಿ ಹರಿಹರ ನಗರಸಭೆಯ ಮಾಜಿ ಸದಸ್ಯ ಹುಲಿಗೇಶ್,ಬಸವರಾಜಪ್ಪ,ಮಹಾದೇವಪ್ಪ,ಕರಿಬಸಪ್ಪ,ನಿಂಗಪ್ಪ,ಮೌನ್ವೇಶ್ K.T.
ವರದಿ.. ಶ್ರೀನಿವಾಸ್ ಆರ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ..9449553305/7892830899..