ಶಿವಮೊಗ್ಗ : ನಗರದ ವಿದ್ಯಾನಗರದ ವ್ಯಾಪ್ತಿಗೆ ಒಳಪಡುವ ಬಿ ,ಹೆಚ್ ರಸ್ತೆಯಲ್ಲಿರುವ ರೋಟರಿ ಚಿತಾಗರಕ್ಕೆ ಹೋಗುವ ದಾರಿಯನ್ನು ಗಣೇಶ ಆಲಿಯಾಸ್ ಮಂಜಪ್ಪ ಎನ್ನುವ ವ್ಯಕ್ತಿ ಆಕ್ರಮಿಸಿಕೊಂಡಿದ್ದು. ಜೊತೆಗೆ ಅಲ್ಲಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಆಕ್ರಮಿಸಿಕೊಂಡಿದ್ದು. ಸರ್ಕಾರಿ ಅಂಗನವಾಡಿಯ ಹೆಸರಿಗೆ ಈತ ಬಣ್ಣವನ್ನು ಬಳಿದಿದ್ದು ಬೇಲಿ ಹಾಕಿಕೊಂಡಿದ್ದಾನೆ. ಇಲ್ಲಿ ಓಡಾಡುವ ಜನರಿಗೆ ಧಮ್ಕಿ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರಿಗೂ ದಮ್ಕಿ ಹಾಕುತ್ತಾನೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ:
ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ಅವರು ಜನರ ದೂರಿನ ಮೇರೆಗೆ ಈತನ ಬಳಿ ಹೀಗೆಲ್ಲ ಮಾಡುವುದು ಸರಿನಾ..? ತಪ್ಪಲ್ಲವೇ..? ಎಂದು ಪ್ರಶ್ನೆ ಮಾಡಿದ್ದಕ್ಕೆ. ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಯ್ಯುತ್ತಾನೆ…
ಸ್ಥಳೀಯವಾಗಿ ಓಡಾಡುವ ಜನರಿಗೂ ಬೈಯುತ್ತಾನೆ, ನಿಂದಿಸುತ್ತಾನೆ:
ಸ್ಥಳೀಯವಾಗಿ ಸಾರ್ವಜನಿಕರು ಸಾಮಾನ್ಯವಾಗಿ ಆ ರಸ್ತೆಯಲ್ಲಿ ಓಡಾಡುವಾಗ ಅವರಿಗೆ ಬೈಯುವುದು ನಿಂದಿಸುವುದು ಈ ರಸ್ತೆಯಲ್ಲಿ ಓಡಾಡಬೇಡಿ ಇದು ನನಗೆ ಸೇರಿದ್ದು ಎಂದು ಧಮ್ಕಿ ಹಾಕುತ್ತಾನೆ…
ಪತ್ರಕರ್ತರಿಗೆ ಅವಾಜ್ ಹಾಕುವ ಈತ ಜಿಲ್ಲಾಧಿಕಾರಿಗಳ ಆದೇಶ ಇದೆ ಎನ್ನುತ್ತಾನೆ:
ಸಾರ್ವಜನಿಕರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ದೂರಿನ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೆಂದು ಹೇಳಿದರು ಕೂಡ ಕೇಳಿಸಿಕೊಳ್ಳದೆ ನಮಗೆ ಧಮ್ಕಿ ಹಾಕಲು ಪ್ರಯತ್ನಿಸುತ್ತಾನೆ. ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೆ ಈ ರಸ್ತೆ ನನಗೆ ಸೇರಿದ್ದು ಇದಕ್ಕೆ ಬೇಲಿ ಹಾಕುತ್ತೇನೆ ಎಂದು ಹೇಳುತ್ತಾನೆ…
ಜಿಲ್ಲಾಧಿಕಾರಿಗಳೇ ಸರ್ಕಾರಿ ಜಾಗವನ್ನೇ ಆಕ್ರಮಿಸಿಕೊಂಡಿರುವ ಈತನ ಮೇಲೆ ಕ್ರಮ ತೆಗೆದುಕೊಳ್ಳಿ..! ಅಥವಾ ಈತ ಹೇಳುತ್ತಿರುವುದು ಸರಿ ಇದೆಯಾ ಪರೀಕ್ಷಿಸಿ..! ಸಾರ್ವಜನಿಕರಿಗೆ ನಮಗೆ ಇರುವ ಗೊಂದಲವನ್ನು ಬಗೆಹರಿಸಿ..!
ರಘುರಾಜ್ ಹೆಚ್.ಕೆ…9449553305….