
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ನಿರ್ವಹಣಾ ವೈಫಲ್ಯದಿಂದ ಒಳ ಭಾಗದಲ್ಲಿ ಕಟ್ಟಡ ವಿಪರೀತ ಸೋರುತ್ತಿದ್ದೂ, ರೋಗಿಗಳ ಪಾಡು ಹೇಳತೀರದು.
ವರ್ಷಕ್ಕೆ ಕೋಟ್ಯಂತರ ರೂ ಗಳ ಅನುದಾನ ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರ್ನಾಟಕ ಘನ ಸರ್ಕಾರ ಮಂಜೂರು ಮಾಡುತ್ತಿದ್ದೂ, ಆಸ್ಪತ್ರೆ ಕಟ್ಟಡ ನಿರ್ವಹಣೆ ಮಾಡದೇ ಸೋರುವ ಹಂತಕ್ಕೆ ತಲುಪಿರುವ ಬಗ್ಗೆ ಆಡಳಿತ ವೈಧ್ಯಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಆರೋಗ್ಯ ರಕ್ಷಾ ಸಮಿತಿಯ ನಡೆ ವಿರುದ್ಧ ಸಾಗರೀಕರುಗಳು ವ್ಯಾಪಕ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಉತ್ತಮ ನಿಸ್ವಾರ್ಥ ಸೇವೆಯತ್ತ ದಾಪುಗಾಲು ಇಡುತ್ತಿರುವ ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯವರಿಗೆ ಈ ಕಟ್ಟಡ ಸೋರುತ್ತಿರುವ ಬಗ್ಗೆ ಗಮನಕ್ಕೆ ಬಾರದೇ, ಕೂಡಲೇ ಈ ಸರ್ಕಾರಿ ಆಸ್ಪತ್ರೆಯ ಸೋರುತ್ತಿರುವುದನ್ನು ಸರಿಪಡಿಸಲು ಸಾಗರದ ಪ್ರಜ್ಞಾವಂತರೂ ಆಗ್ರಹಿಸಿದ್ದಾರೆ…
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ..9449553305….