
ಶಿವಮೊಗ್ಗ : ನಗರದದ ಸೆಕ್ರೇಟ್ ಹಾರ್ಟ್ ಚರ್ಚ್ ಫಾದರ್ ಹಾಗೂ ಅದೇ ಕಾಲೇಜಿನ ಪ್ರಿನ್ಸಿಪಾಲ್ ಪ್ರಾನ್ಸಿಸ್ ಫರ್ನಾಂಡಿಸ್ ಬಂಜಾರ ಸಮುದಾಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ನ್ಯಾಯಾಂಗಬಂಧನದಲ್ಲಿದ್ದು ಈ ಅತ್ಯಾಚಾರವನ್ನು ಖಂಡಿಸಿ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಜಿಲ್ಲಾಬಂಜಾರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಭರ್ಜರಿ ಪ್ರತಿಭಟನೆ ನಡೆಸಲಾಯತು.
ನಗರದ ಸೈನ್ಸ್ ಮೈದಾನದಿಂದ ಕಾನ್ವೆಂಟ್ ರಸ್ತೆ, ಡಿವಿಎಸ್ ಸರ್ಕಲ್ ಮಹಾವೀರ ವೃತ್ತಕ್ಕೆ ತಲುಪಿದ ಪ್ರತಿಭಟನಾ ಮೆರವಣಿಗೆ ನಂತರ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು .
ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸದ ಪ್ರತಿಭಟನಾಕಾರರು. “”ರಕ್ಷಿಸಿ ರಕ್ಷಿಸಿ ಹಿಂದೂ ಮಕ್ಕಳನ್ನ ರಕ್ಷಿಸಿ””, “ಆರೋಪಿಯನ್ನ ಗಲ್ಲಿಗೇರಿಸಿ”_ ಎಂದು ಘೋಷಣೆ ಕೂಗುವುದರ ಮೂಲಕ ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹಿಂದುಳಿದ ವರ್ಗದ ಲಂಬಾಣಿ ವಿದ್ಯಾರ್ಥಿನಿಯರ ವಿರುದ್ಧ ಅತ್ಯಾಚಾರ ವೆಸಗಲಾಗಿದೆ. ಇದನ್ನ ತನಿಖೆ ನಡೆಸಬೇಕು.. ಈ ಪ್ರಕರಣದಲ್ಲಿ ವಿದ್ಯಾಸಂಸ್ಥೆಯನ್ನ ಸರ್ಕಾರ ಸುಪರ್ಧಿಗೆ ತೆಗೆದುಕೊಳ್ಳಬೇಕು, ಪ್ರಕರಣವನ್ನ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಬೇಕೆಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಬೃಹತ್ ಮೆರವಣಿಗೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಡಿ.ಆರ್.ಗಿರೀಶ್, ಶ್ರೀಮತಿ ಚಂಪಾ, ಉಮಾಮಹೇಶ್ವರ ನಾಯ್ಕದ, ಧನಲಕ್ಷ್ಮೀ ಬಾಯಿ ಬಿಜೆಪಿಯ ಬೋಜ್ಯ ನಾಯ್ಕ, ಹಿಂದೂ ಸಂಘಟನೆಯ ವಾಸುದೇವ್, ರಾಜೇಶ್ ಗೌಡ, ಸುರೇಶ್ ಬಾಬು ಮೊದಲಾದವರು ಭಾಗಿಯಾಗಿದ್ದರು.