
ಸಾಗರ:- ಕೆಲವು ದಿನಗಳ ಹಿಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ತ್ಯಾಗರ್ತಿ ಗ್ರಾಮದಲ್ಲಿ 08-06 2022 ರಂದು ಜಾನುವಾರುಗಳನ್ನು ಯಾರೋ ಕಳ್ಳರು ಹೈ- ಕಾರಿನಲ್ಲಿ ಬಂದು ರಾತ್ರೋರಾತ್ರಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಸಾಗರದ ಐ ಪಿ ಎಸ್ ಅಧಿಕಾರಿ ರೋಹನ್ ಜಗದೀಶ್ ಪೊಲೀಸ್ ಸಹಾಯಕ ಅಧಿಕ್ಷಕರು, ಸಾಗರ ಉಪವಿಭಾಗ ಮಾರ್ಗದರ್ಶನ ದಲ್ಲಿ
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಎ ಪ್ರವೀಣ್ ಕುಮಾರ್, ಕಾರ್ಗಲ್ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ನಾಯ್ಕ, ರವರ ನೇತೃತ್ವದಲ್ಲಿ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು.
ಶ್ರೀಮತಿ ಸುಜಾತ ಪಿ ಎಸ್ ಐ,
ರಘುವೀರ್ ಪಿ.ಎಸ್.ಐ, ಸಾಗರ ಉಪವಿಭಾಗದ ಪೊಲೀಸ್ ಸಿಬ್ಬಂಧಿಗಳಾದ ಹೆಚ್.ಸಿ 3167, ತಾರನಾಥ, ಹೆಚ್.ಸಿ 491 ಸನಾವುಲ್ಲಾ, ಹೆಚ್.ಸಿ 447 ಶ್ರೀ ರತ್ನಾಕರ್, ಸಿಪಿಸಿ 1233 ಸಂತೋಷ್ ನಾಯ್ಕ, ಸಿಪಿಸಿ, 2149 ಶ್ರೀಧರ್, ಸಿಪಿಸಿ 1605, ಆಶೋಕ, ಸಿಪಿಸಿ 1396, ರವಿಕುಮಾರ್, ಈರಯ್ಯ ಮಠಪತಿ ಸಿಪಿಸಿ 165), ಪ್ರಕಾಶ್ ಅಂಬ್ಲಿ ಸಿಪಿಸಿ 1076, ಪ್ರವೀಣ್ ಕುಮಾರ್ ಸಿಪಿಸಿ 834, ಸುನಿಲ್ ಸಿಪಿಸಿ, 1440, ಗಿರೀಶ್ ಬಾಬು ಎಹೆಚ್ ಸಿ 124 ರವರ ತಂಡ.
ದಿನಾಂಕ:15-06 2022 ರಂದು ಈ ಪ್ರಕರಣದ ಆರೋಪಿಯಾದ ಎ| ಮಹಮ್ಮದ್ ಇರ್ಪಾನ್ @ ಪೌರ ಮಗ, ಶೇಖ್ ಮಹಮದ್ ಸಾದೀಕ್ ತಂದೆ ಮಹಮ್ಮದ್ ಹುಸೇನ್ ಖಾದ್ರಿ, 32 ವರ್ಷ, ಮುಸ್ಲಿಂ ಜನಾಂಗ, ವರ್ಕಶಾಪ್ ಕೆಲಸ, ವಾಸ 4ನೇ ಕಾಸ್ ಎಡಭಾಗ ಟಿಪ್ಪುನಗರ ಶಿವಮೊಗ್ಗ ಟೌನ್, ಈತನನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದು, ಸದರಿ ಆರೋಪಿತನಿಂದ ಠಾಣಾ ಸಿಆರ್ ನಂ 241/2022 ಕಲಂ 379 ಐಪಿಸಿ ಕೇಸಿನಲ್ಲಿ ಕೃತ್ಯಕ್ಕೆ ಬಳಸಿದ್ದ 10,00,000/-ರೂ ಮೌಲ್ಯದ ಮಹೇಂದ್ರ ಎಕ್ಸ್.ಯು.ವಿ 500 ಕಾರನ್ನು, ಜಾನುವಾರುಗಳನ್ನು ಆರೋಪಿತರು ಕಡಿದು ಮಾರಾಟ ಮಾಡಿದ 25,000/-ರೂ ನಗದು ಹಣವನ್ನು ಮತ್ತು ಜಾನುವಾರುಗಳನ್ನು ಕಟಾವು ಮಾಡಲು ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಈ ದಿನ ದಿನಾಂಕ:16-06-2022 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಹಾಗೂ ಪ್ರಕರಣದಲ್ಲಿನ ಇನ್ನು ನಾಲ್ಕು ಜನ ಆರೋಪಿತರ ಪತ್ತೆ ಕಾರ್ಯಕ್ಕೆ ಕ್ರಮ ಕೈಗೊಂಡಿರುತ್ತದೆ. ಈ ಬಗ್ಗೆ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಅಭಿನಂದನೆ ಸಲ್ಲಿಸಿರುತ್ತಾರೆ. ಪ್ರಕರಣಗಳು ತನಿಖೆಯಲ್ಲಿರುತ್ತದೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್. ಕೆ…9449553305…