
ಶಿವಮೊಗ್ಗ: ಸರ್ಕಾರಿ ನೌಕರರ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಹಾಗೂ ಕಂದಾಯ ಇಲಾಖೆಯ ಸಿರಸ್ತೆದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು 1.50.000/ ರೂ, ನಗದು ಹಣದೊಂದಿಗೆ ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಏನಿದು ಪ್ರಕರಣ..?!
ಕಂದಾಯ ಇಲಾಖೆಯಲ್ಲಿ ಸಿರಸ್ತೆದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ಕುಮಾರ್ ಹನುಮಂತ ಆರ್ ಬನ್ನಿಕೋಡ್ ಎನ್ನುವ ವ್ಯಕ್ತಿಯ ಹತ್ತಿರ ಮನೆಯ ಖಾತೆ ಬದಲಾವಣೆಗಾಗಿ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅದರ ಮುಂಗಡ ಹಣವಾಗಿ ಒಂದುವರೆ ಲಕ್ಷವನ್ನು ಕೇಳಿದ್ದ ಇದನ್ನು ಬನ್ನಿ ಕೋಡ್ ಲೋಕಾಯುಕ್ತರ ಗಮನಕ್ಕೆ ತಂದಿದ್ದರು ದೂರನ್ನು ನೀಡಿದ್ದರು ಇದನ್ನು ಕೂಲಂಕುಶವಾಗಿ ಪರಿಶೀಲಿಸಿದ ಲೋಕಾಯುಕ್ತರು ಇಂದು ಅರುಣ್ ಕುಮಾರ್ ಅನ್ನು ಒಂದುವರೆ ಲಕ್ಷ ಹಣ ದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ ಪಿ ವಾಸುದೇವ್ 15 ಜನ ಪೊಲೀಸ್ ಇಲಾಖೆಯವರು ಹಾಗೂ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್,, ಲೋಕಾಯುಕ್ತ ಇನ್ಸ್ಪೆಕ್ಟರ್ ಶಿಲ್ಪ, ಇನ್ಸ್ಪೆಕ್ಟರ್ ರಾಧಾಕೃಷ್ಣ, ಇನ್ನಿತರ ಸಿಬ್ಬಂದಿಗಳು ಇದ್ದರು…
ರಘುರಾಜ್ ಹೆಚ್.ಕೆ…9449553305….