
ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಬಳಿಕ ದಲಿತ ಕುಟುಂಬದ ಇಬ್ಬರು ಬಾಲಕರು ಮಾತು, ಕೈ ಕಾಲು ಸ್ವಾಧೀನ ಕಳೆದು ಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ ಅಲ್ಲದೇ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಚಂದ್ರನಾಯ್ಕ ಮತ್ತು ಶಾಂತಿಬಾಯಿ ಎಂಬುವವರಿಗೆ ಇಬ್ಬರು ಗಂಡು ಮಕ್ಕಳ್ಳಿದ್ದು, ಅವರಲ್ಲಿ ಮಧುಚಂದ್ರ ಆನವಟ್ಟಿ ಸರಕಾರಿ ಪಿಯುಸಿ ಓದುತ್ತಿರುವಾಗ ಜನವರಿ 04/ 2022 ರಂದು ಕಾಲೇಜಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದನು. ಅವರ ಇನ್ನೊರ್ವ ಪುತ್ರ ಮನುಚಂದ್ರ ಅಟಲ್ ಬಿಹಾರಿ ವಸತಿ ಶಾಲೆ ಸಾಗರದಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ, ಇವನು ಸರ್ಕಾರಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದನು. ಲಸಿಕೆ ಹಾಕಿಸಿಕೊಂಡ ಮರುದಿನವೇ ಇಬ್ಬರು ಮಕ್ಕಳಿಗೂ ಜ್ವರ ಕಾಣಿಸಿಕೊಂಡಿತ್ತು. ಮಧುಚಂದ್ರ ಮಾತು ಬರದಂತಾದನು. ಮನುಚಂದ್ರ ಕೈ ಕಾಲು ಸ್ವಾಧೀನ ಕಳೆದುಕೊಂಡನು. ಇವರ ತಂದೆ ತಾಯಿ ಇದ್ದ 01 ಏಕರೇ ಜಮೀನು ಮಾರಿ ಸರ್ಕಾರಿ ಆಸ್ಪತ್ರೆ ಶಿವಮೊಗ್ಗ ಮತ್ತು ಬೆಂಗಳೂರು ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನರಲ್ಲಿ ಲಸಿಕೆ ಪಡೆಯಬೇಕೆಂದು ಜಾಗೃತಿ ಮೂಡಿಸಿದರ ಪರಿಣಾಮ ದೇಶದ್ಯಾ0ತ ಲಕ್ಷಾಂತರ ಜನ ಲಸಿಕೆ ಪಡೆದಿದ್ದಾರೆ. ಅದರಲ್ಲಿ ಅನೇಕರು ಇದೆ ರೀತಿಯಲ್ಲಿ ತೊಂದರೆಗಳಿಗೆ ಒಳಗಾಗಿದ್ದರೂ ಈ ವಿಚಾರ ಸರಕಾರದ ಗಮನಕ್ಕೆ ಬಂದಿದ್ದರೂ ಸರ್ಕಾರ ಸಂತ್ರಸ್ತರಿಗೆ ಪರಿಣಾಮಕಾರಿಯಾಗಿ ನೀಡಬೇಕಾದ ಯಾವುದೇ ಪರಿಹಾರವನ್ನೂ ನೀಡದೇ ಜಾಣಕುರುಡರತನ ಪ್ರದರ್ಶಿಸುತ್ತಿದೆ ಕೂಡಲೇ ಕರ್ನಾಟಕ ಸರ್ಕಾರ ಕೋವ್ಯಾಕ್ಸಿನ್ ಲಸಿಕೆಯನ್ನೂ ಪಡೆದು ಕೊಂಡ ನಂತರ ಈ ಇಬ್ಬರು ಸಂತ್ರಸ್ತರಿಗೆ ಆರೋಗ್ಯವಾಗುವರೆಗೂ ಸರ್ಕಾರ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನೂ ಭರಿಸಬೇಕು ತನಿಖೆ ನೆಡೆಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ನೀಡಬೇಕು.
ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದ ಮನುಚಂದ್ರ ಸಂತ್ರಸ್ತ ಬಾಲಕ ” ನಾನು ಸಾಗರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ಕೋವ್ಯಾಕ್ಸಿನ್ ಲಸಿಕೆ ಪಡೆದ ನಂತರ ಮರುದಿನವೇ ಕೈ ಕಾಲು ಊದಿಕೊಂಡು ಮೂತ್ರ ವಿಸರ್ಜನೆ ಮಾಡಲಾಗದೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನಂತರ ಬೆಂಗಳೂರಿನ ನೀಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕಾಲಿನ ಮಾಂಸ ಮತ್ತು ನರ ಪರೀಕ್ಷೆಗೆ ಒಳಪಡಿಸಿದಾಗ ಕೋವ್ಯಾಕ್ಸಿನ್ ಲಸಿಕೆಯಿಂದ ರಿಯಾಕ್ಷನ್ ದಿಂದ ಈ ರೀತಿ ಆಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಓಂಕಾರ್ ಎಸ್ ವಿ ತಾಳಗುಪ್ಪ….
#####################################
ರಘುರಾಜ್ ಹೆಚ್ .ಕೆ ….9449553305…