ಸೊರಬ :- ಶಿವಮೊಗ್ಗ ಜಿಲ್ಲಾ ಸೊರಬ ವಿಧಾನಸಭಾ ಕ್ಷೇತ್ರದ ಕುಪ್ಪಗಡ್ಡೆ ಹೋಬಳಿಯ ಕುಪ್ಪಗಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ” ಯಕ್ಷಿ ” ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದ್ದೂ, KRIDAL (ನಿರ್ಮಿತಿ ಕೇಂದ್ರ) ಅನುಷ್ಠಾನ ಕೈಗೆತ್ತಿಕೊಂಡಿದ್ದೂ, ಕಾಮಗಾರಿ ಗುಣಮಟ್ಟ ಕಾಪಾಡದೇ ಇರುವುದು ಸ್ಥಳಕ್ಕೆ ಭೇಟಿ ಕೊಟ್ಟಾಗ ನಮ್ಮ ಗಮನಕ್ಕೆ ಬಂದಿರುತ್ತದೆ. ಅಲ್ಲದೇ ಡಾ0ಬರೀಕರಣ ಕಾಮಗಾರಿಯು ನಾಳೆಯಿಂದ ನಡೆಯುವ ಸಾಧ್ಯತೆ ಹೆಚ್ಚಿದೆ.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನಲೆ ಡಾ0ಬರೀಕರಣ ಕಾಮಗಾರಿ ಅನುಷ್ಠಾನ ಮಾಡಿದರೇ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಅನುದಾನ ನೀರಲ್ಲಿ ಹೋಮವಾದಂತೆ ಆಗುವುದು ಕಟುಸತ್ಯ.
ಕೂಡಲೇ ಕುಪ್ಪುಗಡ್ಡೆ ಗಾಮ ಪಂಚಾಯಿತಿ ವ್ಯಾಪ್ತಿಯ ” ಯಕ್ಷಿ ” ಗ್ರಾಮದಲ್ಲಿ KRIDAL (ನಿರ್ಮಿತಿ ಕೇಂದ್ರ) ಅನುಷ್ಠಾನ ಮಾಡುತ್ತಿರುವ ಡಾ0ಬರೀಕರಣ ಕಾಮಗಾರಿ ನಿಲ್ಲಿಸಿ, ಮಳೆಗಾಲ ಮುಗಿದ ನಂತರ ಕಾಮಗಾರಿ ಅನುಷ್ಠಾನ ಮಾಡುವಂತೆ ಸಂಬಂಧ ಪಟ್ಟ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ಅವರು, ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿ ಮುಗಿದ ನಂತರ ವ್ಯವಸ್ಥಿತವಾಗಿ ರಸ್ತೆ ನಿರ್ಮಿಸುವಂತೆ ಈ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ನಿರ್ಮಿತಿ ಕೇಂದ್ರದ ಕರ್ಮಕಾಂಡ ಜಿಲ್ಲೆಯ ತುಂಬಾ ಹಬ್ಬಿದೆ:
ನಿರ್ಮಿತಿ ಕೇಂದ್ರದ ಕರ್ಮಕಾಂಡ ಜಿಲ್ಲೆಯ ತುಂಬಾ ಹಬ್ಬಿದ್ದು ಇನ್ನು ಮುಂದೆ ಎಳೆಎಳೆಯಾಗಿ ಒಂದೊಂದೇ ಸಾಕ್ಷಿ ಸಮೇತ ಪತ್ರಿಕೆ ಹೊರತರುತ್ತದೆ. ನಿರ್ಮಿತಿ ಕೇಂದ್ರದ m.d. ನಾಗರಾಜ್ ಕಳೆದ 15ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಗೂಟ ಹೊಡೆದುಕೊಂಡು ಕೂತಿದ್ದು .
ಇವೆಲ್ಲಾ ಕಳಪೆ ಕಾಮಗಾರಿ ನಡೆಯಲು ಕಾರಣವಾಗಿದೆ. ಮುಂದೆ ಪತ್ರಿಕೆ ನಿರ್ಮಿತಿ ಕೇಂದ್ರದ ಕರ್ಮಕಾಂಡವನ್ನು ಎಳೆ ಎಳೆಯಾಗಿ ಸಾರ್ವಜನಿಕರ ಅಧಿಕಾರಿಗಳ, ಜನಪ್ರತಿನಿಧಿಗಳ, ಮುಂದೆ ಸಾಕ್ಷಿ ಸಮೇತ ಇಡುತ್ತದೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್. ಕೆ…9449553305….