Saturday, May 3, 2025
Google search engine
Homeರಾಜ್ಯಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಐದನೇ ದಿನ.. ! ಹಿಂದೂ ರಾಷ್ಟ್ರ ಸ್ಥಾಪನೆಗಾಗಿ...

ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಐದನೇ ದಿನ.. ! ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂತರು ಮತ್ತು ಮಹಾತ್ಮರು ಕಾರ್ಯ ಮಾಡಬೇಕು ..! – ಪೂ. ಪರಮಾತ್ಮಾಜಿ ಮಹಾರಾಜರು, ಧಾರವಾಡ, ಕರ್ನಾಟಕ…!!

ಧರ್ಮದ ಮೇಲೆ ಅಧರ್ಮದ ತಾಂಡವವಾಗುತ್ತಿರುವಾಗ, ಭಗವಾನ ಪರಶುರಾಮರು ಪರಶುವನ್ನು ಹಿಡಿದರು. ಇಂತಹ ಭಗವಾನ ಪರಶುರಾಮರನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕು. ಇದು ತಪಸ್ಸಿನ ಸಮಯವಾಗಿರದೇ ಸಂಘರ್ಷದ ಸಮಯವಾಗಿದೆ. ಎಲ್ಲ ಸಂತರು ಮತ್ತು ಮಹಾತ್ಮರು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಾರ್ಯ ಮಾಡಬೇಕು. ಅದಕ್ಕಾಗಿ ಅವರು ರಸ್ತೆಗಿಳಿದು ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸಬೇಕು ಎಂದು ಧಾರವಾಡದ ಪೂ. ಪರಮಾತ್ಮಾಜೀ ಮಹಾರಾಜರು ಕರೆ ನೀಡಿದರು. ಅವರು ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧೀವೇಶನದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳ ಸಂಘಟನೆ’ ಈ ಪ್ರಬೋಧನಾ ಭಾಗದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಧ್ಯಾತ್ಮಿಕ ಸಂಸ್ಥೆಗಳ ಏಕತೆಗಾಗಿ ಮಾಡಿದ ಪ್ರಯತ್ನಗಳು’ ಈ ಕುರಿತು ಮಾತನಾಡುತ್ತಿದ್ದರು. ಅಧಿವೇಶನದ ಪ್ರಬೋಧನಾ ಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ತಜ್ಞ ಡಾ. ಲಕ್ಷ್ಮೀಶ ಸೋಂದಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ಸಹ ತಮ್ಮ ವಿಚಾರಗಳನ್ನು ಮಂಡಿಸಿದರು.


ಪೂ. ಪರಮಾತ್ಮಾಜಿ ಮಹಾರಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದೂ ಸಂತರು ತಮ್ಮ ಹಣವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಖರ್ಚು ಮಾಡುತ್ತಾರೆ. ನಮ್ಮ ಸಂತರ ಬಳಿ ಮಠ-ಮಂದಿರಗಳ ಮೂಲಕ ಇರುವ ದೊಡ್ಡ ಸಂಪತ್ತು ಧರ್ಮಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು. ಈ ಸಮಯದಲ್ಲಿ ಡಾ. ಲಕ್ಷ್ಮೀಶ ಸೋಂದಾ ಇವರು ಮಾತನಾಡುತ್ತಾ, ಇತಿಹಾಸವು ಒಂದು ರೀತಿಯಲ್ಲಿ ಬದುಕಿನ ಕನ್ನಡಿಯಾಗಿದೆ. ಭಾರತದ ತಕ್ಷಶಿಲಾ ಮತ್ತು ನಲಂದಾದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದರು.

ಭಾರತದ ಮೇಲಿನ ಆಕ್ರಮಣಗಳು ಮತ್ತು ಲೂಟಿಗಳನ್ನು ಉದ್ದೇಶಪೂರ್ವಕವಾಗಿ ಇತಿಹಾಸದಿಂದ ಮುಚ್ಚಿಡಲಾಗಿದೆ, ಹಾಗೆಯೇ ಮೊಘಲರು ಮಾಡಿದ ದೌರ್ಜನ್ಯಗಳನ್ನು ಮುಚ್ಚಿಡಲಾಗಿದೆ. ಇತಿಹಾಸವನ್ನು ವಿದೇಶಿ ದೃಷ್ಟಿಕೋನದಿಂದ ಬರೆಯಲಾಗಿದೆ ಎಂದು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಾವು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕರ್ನಾಟಕದಲ್ಲೂ ‘ಹಲಾಲ್’ ವಿರುದ್ಧ ಅಭಿಯಾನವನ್ನು ನಡೆಸಿದೆವು. ಹಿಂದೂ ಖಸಾಯಿ ಸಮುದಾಯಕ್ಕೆ ‘ಜಟ್ಕಾ’ ಮಾಂಸವನ್ನು ನೀಡುವಂತೆ ಉತ್ತೇಜಿಸಿದೆವು. ಹೀಗಾಗಿ ೭೦೦ ಕಡೆಗಳಲ್ಲಿ ‘ಜಟ್ಕಾ’ ಮಾಂಸದ ಅಂಗಡಿ ತೆರೆಯುವಂತೆ ಹಿಂದೂಗಳು ಒತ್ತಾಯಿಸಿದರು.

ಬೆಂಗಳೂರಿನ ‘ಕ್ಲಾರೆನ್ಸ್ ಕಾನ್ವೆಂಟ್ ಹೈಯರ್ ಸೆಕೆಂಡರಿ ಶಾಲೆ’ಯಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್ ಓದುವುದು ಕಡ್ಡಾಯ ಮಾಡಲಾಗಿತ್ತು. ನಾವು ಅದನ್ನೂ ವಿರೋಧಿಸಿದೆವು. ನಂತರ ಶಾಲೆಯ ಆಡಳಿತವು ಬೈಬಲ್ ಬೋಧನೆಯನ್ನು ನಿಷೇಧಿಸಿತು ಎಂದು ಹೇಳಿದರು.


ಮೋಹನ ಗೌಡ, ರಾಜ್ಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ
(ಸಂಪರ್ಕ : 7204082609)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...