ಶಿವಮೊಗ್ಗ : ನಿರಂತರವಾಗಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿಗಳಾದ ಡಾ. ಗುರುದತ್ತ ಹೆಗಡೆಯವರು ಶಿವಮೊಗ್ಗ ಜಿಲ್ಲಾಧ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಆದೇಶಿಸಿದ್ದರು.
ಇಂದು ಮೊಹರಂ ಆಗಿದ್ದರಿಂದ ಇಂದು ಕೂಡ ರಜೆ ಇತ್ತು ಹಾಗೆ ಮುಂದುವರಿದು ಮಳೆ ಇನ್ನೂ ನಿರಂತರವಾಗಿ ಬರುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಹೊಸನಗರ ತಾಲೂಕು ತಹಸಿಲ್ದಾರ್ ರಶ್ಮಿ ಹಾಲೇಶ್, ಹಾಗೂ ತೀರ್ಥಹಳ್ಳಿ ತಾಲೂಕ್ ತಹಶೀಲ್ದಾರ್ ಜಕ್ಕಣ್ಣಗೌಡರ್ ನಾಳೆ ಕೂಡ ಎಲ್ಲಾ ಶಾಲಾ ಕಾಲೇಜುಗಳಿಗೆ ಅಂಗನವಾಡಿಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ.
ಉಳಿದಂತೆ ಸಾಗರ ತಾಲೂಕಿನ ಮಾಹಿತಿ ಇನ್ನು ಬಂದಿಲ್ಲ..