
ಕಾರ್ಗಲ್ – ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಸೇವೆ ನೀಡುವಲ್ಲಿ ವಿಫಲತೆಯ ಆಡಳಿತಕ್ಕೆ ಸಂಬಂಧ ಪಟ್ಟಂತೆ ಒಂದಿಲ್ಲೊಂದು ಸುದ್ದಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ದಿನಾಂಕ 31/08/2021 ರಂದು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಕಾರ್ಯಾಲಯಕ್ಕೆ ಖುದ್ದಾಗಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ತನ್ನ ಪತಿಯ ಮರಣ ನಂತರ ತನ್ನ ಪತಿಯ ಸ್ವತ್ತನ್ನೂ ತನ್ನ ಹೆಸರಿಗೆ ಪೌತಿ ಬದಲಾವಣೆ ಮಾಡಿಕೊಡುವಂತೆ ಕಾನೂನು ಪ್ರಕಾರ ಸಂಬಂಧ ಪಟ್ಟ ಪೂರಕ ದಾಖಲಾತಿಗಳನ್ನೂ ನೀಡಿ, 06 ಮಾಸಗಳೇ ಉರುಳುತ್ತಾ ಬಂದರೂ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಆಡಳಿತಗಾರರು ” ಇಂದು ಭಾ, ನಾಳೆ ಭಾ ” ಎಂದು ಸತಾಯಿಸುತ್ತಿರುವ ಬಗ್ಗೆ ದಾಖಲಾತಿ ಸಮೇತ ಮಾಹಿತಿಯೊಂದಿಗೆ ನಿನ್ನೆ ದಿನ ನನ್ನ ಮನೆಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರೀಕರಾದ ವಿಧವಾ ಮಹಿಳೆ ಶ್ರೀಮತಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ಅಳುತ್ತಾ ತಮ್ಮ ಆಳಲನ್ನೂ ತೋಡಿಕೊಂಡರು.
ಕಾರ್ಗಲ್ ಜೋಗ ಪಂಚಾಯಿತಿ ಆಡಳಿತಗಾರನಾದ ಮುಖ್ಯಾಧಿಕಾರಿಗಳು, ಅಧ್ಯಕ್ಷರು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಮುಚಿತ ಮಾರ್ಗದಲ್ಲಿ ವಿಧವಾ ಹಿರಿಯ ನಾಗರೀಕರಾದ ಸುಲೋಚನಾ ಕೋಂ ರಾಜು ದೊರೆಸ್ವಾಮಿ ರವರ ಪೌತಿ ಖಾತಾ ಬದಲಾವಣೆಯ ಸರ್ಕಾರಿ ಸೇವೆಗೆ ಸತಾಯಿಸುವುದು, ಅನಗತ್ಯ ವಿಳಂಬ ಹಾಗೂ ಮಾನಸಿಕವಾಗಿ ಕಿರುಕುಳ ವಿರುದ್ಧ ಸೂಕ್ತ ನ್ಯಾಯಕ್ಕಾಗಿ ನಾಳೆ ದಿನ ಸಾಗರಕ್ಕೆ ಸಾರ್ವಜನಿಕರ ಕುಂದು – ಕೊರತೆ ಸಭೆಯಲ್ಲಿ ಕಾನೂನು ಪಾಲನೆಯೊಂದಿಗೆ ದೂರು ಸಲ್ಲಿಸಲಾಗುವುದು.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305….