ಸಾಗರ: ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು, ರಾಜಸ್ವ ನಿರೀಕ್ಷಿಕರು, ಗ್ರಾಮ ಲೆಕ್ಕಿಗರು ಸೇರಿ ಬಗರ್ ಹುಕುಂ ಅರ್ಜಿದಾರರಿಂದ 50,000/- 1,00000/- ಮಿಕ್ಕಿದ ಲಂಚದ ರೂಪದಲ್ಲಿ ಬಡ ರೈತರ ರಕ್ತ ಹೀರುತ್ತಿದ್ದಾರೆ…….!!!!!!
ಸಾಗರ :- ಶಿವಮೊಗ್ಗ ಜಿಲ್ಲೆ ಅದರಲ್ಲೂ ಸಾಗರ ತಾಲ್ಲೂಕು ದೇಶದಲ್ಲೇ ಸ್ವಾತಂತ್ರ ಹೋರಾಟಗಾರ ಗಾಡಿ ಗಣಪತಪ್ಪ, ಕಾಗೋಡು ತಿಮ್ಮಪ್ಪ, . ಬಂಗಾರಪ್ಪ ಇನ್ನೂ ಮುಂತಾದ ನಾಯಕರುಗಳ ಹೋರಾಟದ ಹಾದಿಯಾದ ” ಊಳುವವನೇ ಹೊಲದ ಒಡೆಯ ” ಹೋರಾಟ ಇಡೀ ದೇಶಕ್ಕೆ ಮಾದರಿಯಾದ ಬೆನ್ನಲ್ಲೇ, ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು, ಕೆಲ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರುಗಳು ಬಗರ್ ಹುಕುಂ ಅರ್ಜಿದಾರರುಗಳಾದ ಬಡ ರೈತರಿಂದ 50000/- ದಿಂದ 100000/- ಒಂದೊಂದು ಕಡತಗಳಿಂದ ಪೀಕುವ ಭ್ರಷ್ಟ ಅಧಿಕಾರಿಗಳಿಂದ ಸಾಗರ ತಾಲ್ಲೂಕಿಗೆ ಕಪ್ಪು ಚುಕ್ಕೆ ಬರುತ್ತಿದೆ.
ಮನೆದಳ ಮಂಜೂರಾತಿಗೆ 4000/- ಫಿಕ್ಸ್
ವರದಿಗೆ ಸಿಕ್ಕ ಫಲ ಶ್ರುತಿ :
ಸಾಗರದ ತಾಲೂಕು ಕಚೇರಿಯಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದ ಗ್ರಾಮಲೆಕ್ಕಿಗ ರಾಘು ಶಾನ್ಭೋಗ್ ಎನ್ನುವಾತನ ಲಂಚ ಬಾಕತನವನ್ನು ನಿಮ್ಮ ನ್ಯೂಸ್ ವಾರಿಯರ್ಸ್ ವಿಡಿಯೋ ಸಮೇತ ಸಾಕ್ಷಿಯನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿದ್ದ ರಾಘು ಶಾನ್ಬೋಗ್ ಎನ್ನುವ ಗ್ರಾಮ ಲೆಕ್ಕಿಗನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ…
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ…9449553305….