

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ಕಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್. ಬಿ. ಕಾಲೇಜು ಸನಿಹದಲ್ಲೇ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಬೆಳೆದಿರುವ ಬೃಹತ್ ಮರಗಳ ಬುಡದಲ್ಲಿ ಅವೈಜ್ಞಾನಿಕವಾಗಿ ಹಿಟಾಚಿ ಬಳಸಿ ಮಣ್ಣು ತೆಗೆದಿದ್ದಾರೆ.
ಮಲೆನಾಡು ಭೂಮಿಯ ಮಣ್ಣು ಅತೀ ಮೃದುವಾಗಿರುತ್ತದೆ. ಮಳೆಗಾಲ ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೃಹತ್ ಮರಗಳ ಬುಡದಲ್ಲೇ ಅವೈಜ್ಞಾನಿಕವಾಗಿ ಮಣ್ಣು ತೆಗೆಸಿರುವುದು ಮುಂದೊಂದು ದಿನ ಪಾದಚಾರಿಗಳು, ಸಂಚರಿಸುವ ವಾಹನಗಳ ಮೇಲೆ ಮರಗಳು ಬೀಳುವ ಸಾಧ್ಯತೆ ಹೆಚ್ಚಿದೆ.
ಮರಗಳ ಬುಡದ ಮಣ್ಣು ತೆಗೆಸಿರುವುದರಿಂದ ಮಳೆಗಾಲದಲ್ಲಿ ಬೃಹತ್ ಮರಗಳಿಂದ ಸಂಭವಿಸುವ ಅವಘಡಕ್ಕೆ ಜವಾಬ್ದಾರರು ಯಾರು……….?!
ಕಣ್ಣಿದ್ದೂ ಕುರುಡರಾದ ಅರಣ್ಯ ಸಂಪತ್ತು ಉಳಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸುರಕ್ಷತಾ ಕ್ರಮ ಅನುಪಾಲನೆ ಮಾಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳು.
” ಕಾಮಗಾರಿ ನಿರ್ಲಕ್ಷತನ ಅನುಷ್ಠಾನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಭಂದ ಪಟ್ಟ ಅರಣ್ಯ ಸಚಿವರಿಗೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರ, ಪಾದಚಾರಿಗಳ, ವಾಹನ ಸವಾರರ ಹಿತದೃಷ್ಟಿಯಿಂದ ಲಿಖಿತ ಹಾಗೂ mail ಮೂಲಕ ದೂರುಗಳನ್ನು ಸಲ್ಲಿಸಿದ್ದು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುವರೋ ಕಾದು ನೋಡೋಣ.
ಓಂಕಾರ ಎಸ್. ವಿ. ತಾಳಗುಪ್ಪ…
####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…