
ತೀರ್ಥಹಳ್ಳಿ: ಸ್ವಚ್ಛ ಭಾರತ ಘೋಷಣೆ ಮತ್ತು ಅನುಷ್ಠಾನ ಎಲ್ಲೆಡೆ ರಾರಾಜಿಸುತ್ತಿವೆ . ಆದರೆ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಮೇಳಿಗೆ — ಕೊಪ್ಪ ಹೋಗುವ ಬಹುದೊಡ್ಡ ಸರ್ಕಲ್ ನಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮ್ ಇರುವ ಕಂಬದ ಕೆಳಗೆ ಅನೇಕ ದಿನಗಳಿಂದ ಕಸದ ತೊಟ್ಟಿ ತುಂಬಿ ಮತ್ತು ಅದರ ಆಜುಬಾಜಿನಲ್ಲಿ ಕಸದ ರಾಶಿ ರಾಶಿ ಬಿದ್ದಿವೆ .ಕೊಳೆತು ನಾರುತ್ತಿದ್ದು ಕ್ರಿಮಿಕೀಟಗಳು ತುಂಬಿಕೊಂಡು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿದೆ
ಜೊತೆಯಲ್ಲಿ ನೀರಿನ ತೇವಾಂಶದಿಂದ ಪಕ್ಕದಲ್ಲೇ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಗ್ರೌಂಡ್ ಆಗಿ ಸಾರ್ವಜನಿಕರ ಜೀವಕ್ಕೆ ಮತ್ತು ಪ್ರಾಣಿಗಳಿಗೆ ಜೀವಕ್ಕೆ ಅಪಾಯವಿರುವ ಸ್ಥಿತಿ ಇದೆ .
ಜನ ಛೀಮಾರಿ ಹಾಕುತಿದ್ದಾರೆ?
ಬಹುಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ಜನ ಬಸ್ಸಿನ ವ್ಯವಸ್ಥೆ ಕಾದು ನಿಲ್ಲುವ ಪ್ರಮುಖ ಸ್ಥಳದಲ್ಲಿ ಈ ವ್ಯವಸ್ಥೆಯನ್ನು ಕಂಡು ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಛೀಮಾರಿ ಹಾಕತೊಡಗಿದ್ದಾರೆ .
ಪೋಸ್ ಕೊಡುವ ನಾಯಕರೇ ನಿಮ್ಮ ಕಣ್ಣಿಗೆ ಇದು ಕಾಣುವುದಿಲ್ಲವೇ?
ಯಾರೋ ಮಾಡಿದ ಕೆಲಸಗಳಿಗೆ ಫೋಟೊ ತೆಗೆದು ಫೋಸ್ ಕೊಡುವ ಜನಪ್ರತಿನಿಧಿಗಳ ಕಣ್ಣಿಗೆ ಇದೆಲ್ಲ ಕಾಣಿಸದೇ ಇರುವುದು ದುರಂತ ಅಲ್ಲದೆ ಮತ್ತೇನು ?
ನೂತನ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನ ಹರಿಸಲಿ:
ಜನಪರ ಕಾಳಜಿಯುಳ್ಳ
ನೂತನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಲಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಲ್ಲಿ ಕಸದ ರಾಶಿ ಗಳಿವೆ ಅದನ್ನು ಸ್ವಚ್ಛಗೊಳಿಸಲು ಆದೇಶ ನೀಡಲಿ ಎಂದು ಗ್ರಾಮಸ್ಥರ ಒತ್ತಾಯವಾಗಿದೆ .
ಲಿಯೋ ಆರೋಜ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…