Saturday, May 3, 2025
Google search engine
Homeಶಿವಮೊಗ್ಗದೇವಸ್ಥಾನ ಹುಂಡಿಗೆ ಕನ್ನ ಹಾಕಿದ ಇಬ್ಬರು ಖದೀಮರ ಬಂಧನ - ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ...

ದೇವಸ್ಥಾನ ಹುಂಡಿಗೆ ಕನ್ನ ಹಾಕಿದ ಇಬ್ಬರು ಖದೀಮರ ಬಂಧನ – ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ವಶ..!!

ಭದ್ರಾವತಿ : ಕುಮರಿ ನಾರಾಯಣಪುರ ಗ್ರಾಮದ ಚೌಡಮ್ಮ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ.


ಭದ್ರಾವತಿಯ ಹೊಸಮನೆ ನಿವಾಸಿ ವಸಂತರಾಜು ಅಲಿಯಾಸ್ ವಸಂತ(37), ಬೇಡರ ಹೊಸಳ್ಳಿಯ ಶ್ವೇತಾ ಅಲಿಯಾಸ್ ಆಸ್ಮಾ(32) ಬಂಧಿತರು.


ಚೌಡಮ್ಮ ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳಗಡೆ ಇದ್ದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು 20,000 ರಿಂದ 30,000 ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.


ಘಟನೆಯ ಹಿನ್ನಲೆ:


ಜೂನ್ 13ರಂದು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ನಾಗರಾಜ್ ಎಂ,ಆದರ್ಶ್ ಜಿ ,ಉದಯ್ ಕುಮಾರ್ ಹೆಚ್ ಕೆ ಜಂಕ್ಷನ್ ಬಳಿ ವಿಶೇಷ ಗಸ್ತಿನಲ್ಲಿದ್ದಾಗ ವಸಂತ್ ಎಂಬುವವನು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದದನ್ನು ಕಂಡು ವಶಕ್ಕೆ ಪಡೆದು ಪಿಐ ಮುಂದೆ ಹಾಜರು ಪಡಿಸಿದ್ದಾರೆ.ನಂತರ ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ.


110 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಸೀಜ್:
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ 1 ದೇವಸ್ಥಾನ ಕಳ್ಳತನ ಪ್ರಕರಣ, ಪೇಪರ್ ಟೌನ್ ಪೊಲೀಸ್ ಠಾಣೆ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯ 2 ಹಗಲು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 10,25,000 ಒಟ್ಟು 220 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 132 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 5000/- ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.


ಈ ಕಾರ್ಯಾಚರಣೆಯನ್ನು ಎಸ್ಪಿ ಲಕ್ಷ್ಮಿಪ್ರಸಾದ್ ,ಎಎಸ್ಪಿ ವಿಕ್ರಂ ಆಮ್ಟೆ dysp ಜಿತೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ಪಿಐ ಗುರುರಾಜ್,ಸಿಬ್ಬಂದಿಗಳಾದ ನಾಗರಾಜ್ ಎಂ,ಆದರ್ಶ್ ಜಿ,ಉದಯ್ ಕುಮಾರ್ ,ಶಿವಪ್ಪ ಎಂ ಹೆಚ್,ವಿನಾಯಕ ಜಗದೀಶ್ ಪ್ರಕಾಶ್ ಜಿ ಕೆ,ಗಿರೀಶ್ ನಾಯ್ಕ,ಮತ್ತು ಪ್ರಭು ಪಾಲ್ಗೊಂಡಿದ್ದರು.

ಓಂಕಾರ ಎಸ್. ವಿ. ತಾಳಗುಪ್ಪ

####################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...