
ಸಾಗರ ತಾಲೂಕಿನಾದ್ಯಂತ ವರುಣನ ಆರ್ಭಟ ಹೆಚ್ಚಾಗಿದೆ ವರುಣನ ಆರ್ಭಟಕ್ಕೆ ಸಾಕಷ್ಟು ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದು , ಕೆರೆ ಕೋಡಿಗಳು ಸಹ ಒಡೆದಿವೆ.
ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಆಚಾಪುರ ಹಾಗೂ ಗೌತಮಪುರದಲ್ಲಿ ಮಳೆಯ ಅಪಾರ ಪ್ರಮಾಣ ಕ್ಕೆ ಮನೆಯ ಗೋಡೆ ಬಿದ್ದು ಸಾಕಷ್ಟು ಹಾನಿಯಾಗಿದೆ.
ಆಚಾಪುರದಲ್ಲಿ ಪ್ಯಾರಿಜಾನ್ ರವರ ಮನೆ ಭಾಗಶಃ ಬಿದ್ದಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೌತಮಪುರದಲ್ಲಿ ನಾಗಮ್ಮ ಎಂಬುವರ ಮನೆ ಸಂಪೂರ್ಣವಾಗಿ ಬಿದ್ದಿದ್ದು ಬಡ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ.
ಸ್ಥಳಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ
ಮಳೆಯಿಂದ ಮನೆಯ ಗೋಡೆಗಳು ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಈ ಇಳಿ ವಯಸ್ಸಿನಲ್ಲಿಯೂ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ವೈಯಕ್ತಿಕ ಧನ ಸಹಾಯ ಕೂಡ ಮಾಡಿದರು.
ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹ :
ಮಳೆಯಿಂದ ಮನೆ ಬಿದ್ದಿರುವ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ್ ಹೊನಗೋಡು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡರುಗಳಾದ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮ . ಜ್ಯೋತಿ ಕೋವಿ. ರೇವಪ್ಪ ಪಟೇಲ್ .ಗ್ರಾ ಪಂ ಅಧ್ಯಕ್ಷರಾದ ಗಣಪತಿ ಇರವಕ್ಕಿ. ನವೀನಾ ರವೀಂದ್ರ .ನಾಗರತ್ನ. ಸದಸ್ಯರಾದ ಬಸವರಾಜ ಅಜಾಪುರ .ಹಾಜಿರಾಬಿ. ನಟರಾಜ .ಶಿವನಾಂದ ಖಲ್ಲಿಮುಲ್ಲ .ಮೋಹನ್ . ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….