
ಶಿವಮೊಗ್ಗ: ನಗರದ ಚೋರ್ ಬಜಾರ್ ನಲ್ಲಿ ಕಳೆದವಾರ ಬಟ್ಟೆ ವ್ಯಾಪಾರಿ ಸೆಂಧಿಲ್ ಕುಮಾರ್ ಮೇಲೆ ಸಂಜೆ 7.30 ರ ಸುಮಾರಿಗೆ ಇನ್ನೋರ್ವ ಬಟ್ಟೆ ವ್ಯಾಪಾರಿ, ರೌಡಿ ಶೀಟರ್ ಸಂತು ಅಲಿಯಾಸ್ ಜೋಗಿ ಸಂತು ಮತ್ತು ಸಹಚರರು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇಂದು ಮುಂಜಾನೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆಂಧಿಲ್ ಕುಮಾರ್ ಮೃತಪಟ್ಟಿದ್ದಾನೆ.
ಏನಿದು ಘಟನೆ:
ಮೃತ ಸೆಂಧಿಲ್ ಮತ್ತು ಸಂತೋಷ್ ಅಲಿಯಾಸ್ ಜೋಗಿ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಹಣ ಎಂಥ ಸ್ನೇಹಿತರನ್ನು ದೂರ ಮಾಡುತ್ತೆ ಎನ್ನುವ ಎನ್ನುವುದಕ್ಕೆ ಇವರುಗಳೇ ಸಾಕ್ಷಿ ಹಣದ ವಿಚಾರವಾಗಿ ಇವರ ನಡುವೆ ಜಗಳವಾಗಿ ಸಂತೋಷ್ ಮೇಲೆ 9 ತಿಂಗಳ ಹಿಂದೆ ಸೆಂಧಿಲ್ ಹಲ್ಲೇ ನಡೆಸುತ್ತಾನೆ . ಈ ಹಲ್ಲೆಯಲ್ಲಿ ತೀವ್ರವಾಗಿ ಸಂತೋಷ್ ಗಾಯಗೊಳ್ಳುತ್ತಾನೆ. ಸೆಂಧಿಲ್ ವಿರುದ್ಧ ನಗರದ ದೊಡ್ಡಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತದೆ. ಪೊಲೀಸರು ಜೈಲಿಗೂ ಕಳಿಸುತ್ತಾರೆ.
ಜೈಲಿನಿಂದ ಹೊರಬಂದ ಸೆಂಧಿಲ್ ನಿಂದ ಮತ್ತೆ ಸಂತೋಷ್ ಗೆ ಅವಾಜ್ :
ಒಂದು ಕಾಲದಲ್ಲಿ ಅಪರಾಧಿಗಳ ಜೊತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸೆಂಧಿಲ್ ನೆಮ್ಮದಿಯಾಗಿ ಇದ್ದ ಆದರೆ ಸಂತೋಷ್ ಸಿಕ್ಕಾಗಲೆಲ್ಲಾ ಒಂದು ಅವಾಜ್ ಹಾಕುತ್ತಿದ್ದ. ಮನೋಜ್ ಟೆಕ್ಸ್ ಟೈಲ್ಸ್ ಎನ್ನುವ ಬಟ್ಟೆಯಂಗಡಿ ಇಟ್ಟುಕೊಂಡಿದ್ದ ಸೆಂಧಿಲ್ ಈ ಗಲಾಟೆಯ ಆಗುವ ಮುಂಚೆ ಮತ್ತೆ ಸಂತೋಷ್ ಜೊತೆ ಕಿರಿಕ್ ಮಾಡಿಕೊಂಡಿದ್ದ. ಸಂತೋಷ್ ಎರಡು ವರ್ಷಗಳ ಹಿಂದೆಯೇ ವ್ಯಾಪಾರದಲ್ಲಿ ಲಾಸ್ ಆಗಿ ತನ್ನ ಬಟ್ಟೆಯ ಅಂಗಡಿಯನ್ನು ಮುಚ್ಚಿದ.
ವ್ಯವಸ್ಥಿತವಾಗಿ ಸಂಚು ರೂಪಿಸಿ ಹೂಂಚು ಹಾಕಿ ಸೆಂಧಿಲ್ ಗೆ ಮೂರ್ತ ಪಿಕ್ಸ್ ಮಾಡಿದ ಸಂತೋಷ್ ಗ್ಯಾಂಗ್:

ಕಳೆದವಾರ ಸೆಂಧಿಲ್ ಮೇಲೆ ಅಟ್ಯಾಕ್ ಮಾಡುವ ಮುನ್ನ ವ್ಯವಸ್ಥಿತವಾಗಿ ಸಂಚು ರೂಪಿಸಿ ಜೋಗಿ ಸಂತು ಮತ್ತು ಆತನ ಗ್ಯಾಂಗ್ ಬೆಳಿಗ್ಗೆಯಿಂದ ಸೆಂಧಿಲ್ ನ ಚಲನವಲನಗಳನ್ನು ಗಮನಿಸಿದ್ದಾರೆ ನಂತರ ನಂತರ ಎಲ್ಲಾ ಸರಿ ಇದೆ ಎಂದು ಗಮನಿಸಿಕೊಂಡು ರಾತ್ರಿ 7: 30 ರ ಸುಮಾರಿಗೆ ಹಲ್ಲೆಗೆ ಮುಂದಾಗಿದ್ದಾರೆ. ಸಂತು ಗ್ಯಾಂಗ್ ನಲ್ಲಿ ಪ್ರಮುಖವಾಗಿ ಸಂತು ಮತ್ತು ರಮೇಶ್ ಇಬ್ಬರು ಒಳಗೆ ನುಗ್ಗಿ ಚಾಕುವಿನಿಂದ ಸೆಂಧಿಲ್ ನ ಹೊಟ್ಟೆಯ ಭಾಗದಲ್ಲಿ,ಎದೆಯಭಾಗದಲ್ಲಿ ತಿವಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಭಯಗೊಂಡ ಸೆಂಧಿಲ್ ತಪ್ಪಿಸಿಕೊಂಡು ಪಕ್ಕದ ಅಂಗಡಿಗೆ ಹೋಗಿ ಪ್ರಾಣ ಉಳಿಸಿಕೊಂಡ ಆದರೆ ತೀವ್ರತರದ ಹಲ್ಲೆ ಆಗಿದ್ದರಿಂದ ಚಿಕಿತ್ಸೆಗೆ ಮೇಗನ್ ಗೆ ಸೇರಿಸಲಾಯಿತು. ಆದರೆ ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಗೆ ಕರೆದುಕೊಂಡು ಹೋದರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸೆಂಧಿಲ್ ಮೃತಪಟ್ಟಿದ್ದಾನೆ.
ಸಂತು ಅಲಿಯಾಸ್ ಜೋಗಿ ಮತ್ತು ರಮೇಶ್ ಗೆ ಬಲೆ ಬೀಸಿರುವ ಪೊಲೀಸರು :
ಸೆಂಧಿಲ್ ಹಲ್ಲೆಗೊಳಗಾದ ನಂತರ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಸಂತು ಅಲಿಯಾಸ್ ಜೋಗಿ ಮತ್ತು ರಮೇಶ್ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾನೆ. ಹಾಗೆ ಲೋಕೇಶ್ ಮತ್ತು ಇನ್ನೊಬ್ಬ ಇದ್ದರು ಎಂದು ದೂರು ನೀಡಿದ್ದಾನೆ. ಕುಟುಂಬದವರು ಕೂಡ ಸಂತೋಷ್ ಅಲಿಯಾಸ್ ಜೋಗಿ ರಮೇಶ್ ಮತ್ತು ಲೋಕೇಶ್ ಹಾಗೂ ಇನ್ನೊಬ್ಬ ಇದ್ದರು ಎಂದು ದೂರು ನೀಡಿದ್ದಾರೆ .
ಪೊಲೀಸರು ಪ್ರಮುಖ ಆರೋಪಿಗಳಾದ ರೌಡಿಶೀಟರ್ ಸಂತೋಷ ಅಲಿಯಾಸ್ ಜೋಗಿ ಮತ್ತು ರಮೇಶ್ ಗೆ ಹುಡುಕಾಟ ನಡೆಸಿದ್ದು. ಸದ್ಯದಲ್ಲೇ ಆರೋಪಿಗಳು ಬಂಧನ ಆಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಚೋರ್ ಬಜಾರ್ ನಲ್ಲಿ ನಡೆಯುವ ಎಷ್ಟೋ ಘಟನೆಗಳು ಹೊರಜಗತ್ತಿಗೆ ಗೊತ್ತಾಗುವುದಿಲ್ಲ ಇನ್ಮುಂದೆ ಒಂದೊಂದಾಗಿ ಎಲ್ಲ ಹೊರಬರುತ್ತದೆ ಎನ್ನುವುದು ಬಜಾರಿನಲ್ಲಿ ಈಗ ನಡೆಯುತ್ತಿರುವ ಬಿಸಿಬಿಸಿ ಚರ್ಚೆಯಾಗಿದೆ…
ರಘುರಾಜ್ ಹೆಚ್.ಕೆ…9449553305….
#####################################