
ದಾವಣಗೆರೆ: ಇಂದು ದಾವಣಗೆರೆಯಲ್ಲಿ ನಡೆದ ಪ್ರಜಾವಾಣಿ ವರ್ಷದ ಸಾಧಕ ಪ್ರಶಸ್ತಿ 2022 ಅನ್ನು ಹೊಸೂರು ಗುಡ್ಡೆಕೇರಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್.ಪಿ ಅವರಿಗೆ ನೀಡಿ ಗೌರವಿಸಲಾಯಿತು.
ತಾಲೂಕಿನಲ್ಲಿ ಉತ್ತಮ ಹೆಸರು ಗಳಿಸಿ ಮಾದರಿ ಶಾಲೆ ಎನಿಸಿಕೊಂಡಿದೆ:

ಒಂದು ಸರ್ಕಾರಿ ಶಾಲೆಯನ್ನು ಉತ್ತಮ ಶಾಲೆಯನ್ನಾಗಿ ಮಾಡಲು ಸರ್ವರ ಸಹಕಾರದಿಂದ ಶಾಲೆಯ ಅಭ್ಯುದಯಕ್ಕೆ ದುಡಿದು ಮಾದರಿ ಶಾಲೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ, ಜನಮನ್ನಣೆಗಳಿಸಿರುವ ಮಂಜು ಬಾಬು ಅವರು ತಾಲೂಕಿನಾದ್ಯಂತ ಚಿರಪರಿಚಿತರು ಶಾಲೆಯ ಮಕ್ಕಳಿಗೆ ಇವರು ದೈವ ಸಂಭೂತರು ಸದಾ ಕ್ರಿಯಾಶೀಲರಾಗಿರುವ ಮಂಜು ಬಾಬು ಅವರು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಒಂದು ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದ ಹಾಗೆ ಮಾಡಿರುವ ಮಂಜು ಬಾಬು ಅವರು ಪೋಷಕರೊಂದಿಗೆ ,ಶಾಲಾ ಅಭಿವೃದ್ಧಿ ಮಂಡಳಿ ಅವರೊಂದಿಗೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.
ಈ ಸಮಯದಲ್ಲಿ ಶಾಲಾ ಹಿತೈಷಿಗಳು, ಸ್ನೇಹಿತರು, ಶಾಲಾ ಪೋಷಕರು, ಶಿಕ್ಷಕರು, ಮಕ್ಕಳು,ಸಾರ್ವಜನಿಕರು, ಶಿಕ್ಷಣ ಇಲಾಖೆಯವರು, ದಾನಿಗಳು ಶುಭ ಹಾರೈಸಿದ್ದಾರೆ….
ನ್ಯೂಸ್ ವಾರಿಯರ್ಸ್ ಪತ್ರಿಕಾ ಬಳಗದಿಂದ ಮಂಜು ಬಾಬು ಅವರಿಗೆ ಅಭಿನಂದನೆ… ನಿಮ್ಮ ಕಾಯಕ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ….
ರಘುರಾಜ್ ಹೆಚ್. ಕೆ…9449553305….