
ಶಿವಮೊಗ್ಗ: ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ, ಪ್ರಾಮಾಣಿಕತೆ, ಹಾಗೂ ಜನಸ್ನೇಹಿ ಅಪರ ಜಿಲ್ಲಾಧಿಕಾರಿ ಆಗಿದ್ದ ಡಾಕ್ಟರ್ ನಾಗೇಂದ್ರ ಹೊನ್ನಳ್ಳಿ ಚುನಾವಣೆ ನಿಮಿತ್ತ ಮುಂದಿನ ಆದೇಶದವರೆಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಸಿದ್ದರಾಮಪ್ಪ ಶ್ರೀಶೈಲ ಬಿರಾದಾರ್ ಅವರು ವರ್ಗಾವಣೆಯಾಗಿದ್ದಾರೆ.
ಅಪರ ಜಿಲ್ಲಾಧಿಕಾರಿಯಾಗಿ ಡಾ. ನಾಗೇಂದ್ರ ಹೊನ್ನಳ್ಳಿ ಅವರ ಸೇವೆ :
ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾಕ್ಟರ್ ನಾಗೇಂದ್ರ ಹೊನ್ನಳ್ಳಿ ಅವರು ಎಲ್ಲರೊಂದಿಗೂ ಸ್ನೇಹದಿಂದ ವರ್ತಿಸುತ್ತಾ ಯಾವುದೇ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ಕ್ಷಣಮಾತ್ರದಲ್ಲಿ ಮುಗಿಸುತ್ತಾ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮಾಧಾನದಿಂದ ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಡಾಕ್ಟರ್ ನಾಗೇಂದ್ರ ಹೊನ್ನಳ್ಳಿ ಅವರದ್ದು ಇಂತಹ ಅಧಿಕಾರಿಯ ಅವಶ್ಯಕತೆ ಶಿವಮೊಗ್ಗ ಜಿಲ್ಲೆಯ ನಾಗರಿಕರಿಗೆ ಇದೆ ಹಾಗಾಗಿ ಸರ್ಕಾರ ಚುನಾವಣೆಯ ದೃಷ್ಟಿಯಿಂದ ವರ್ಗಾವಣೆಗೊಳಿಸಿದ್ದರು ಸಾರ್ವಜನಿಕ ಸೇವೆಗೆ ಮತ್ತೆ ಇವರನ್ನು ಚುನಾವಣೆಯ ನಂತರ ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಿದರೆ ಉತ್ತಮ ಎನ್ನುವುದು ಸಾರ್ವಜನಿಕರ ಒಮ್ಮತದ ಅಭಿಪ್ರಾಯ…
ವರ್ಗಾವಣೆಯ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಅವರು ಇದೊಂದು ಸಾಮಾನ್ಯ ಪ್ರಕ್ರಿಯೆ ಚುನಾವಣೆ ವೇಳೆ ಈ ಪ್ರಕ್ರಿಯೆ ಸಾಮಾನ್ಯ ನನಗೆ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಮುಖಂಡರುಗಳಿಂದ, ಸಚಿವರು, ಸಂಸದರು ಶಾಸಕರುಗಳಿಂದ , ಮಾಧ್ಯಮದ ಮಿತ್ರರಿಂದ, ವೈದ್ಯರಿಂದ, ವಿವಿಧ ಸಂಘಟನೆಗಳಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಸಹಕಾರ ಸಿಕ್ಕಿದೆ ಅದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಮತ್ತೆ ಶಿವಮೊಗ್ಗ ಜಿಲ್ಲೆಯ ಸೇವೆಗೆ ಸದಾ ಸಿದ್ದನಾಗಿರುತ್ತೇನೆ… ಅಬ್ದುಲ್ ಕಲಾಂ ಕನಸನ್ನು ನೆರವೇರಿಸಬೇಕೆನ್ನುವ ಆಸೆ ಇದೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನೋಡೋಣ ಎಂದು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದರು…
ರಘುರಾಜ್ ಹೆಚ್.ಕೆ…9449553305…


2 comments
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.
Cialis online – Beställ Cialis online utan besvär. Diskret leverans, enkel betalning och garanterad produktkvalitet gör onlineköp smidigt och tryggt. Få kraftfull effekt när du behöver det som mest.