
ಕುಂಸಿ:- ಶಿವಮೊಗ್ಗ ಜಿಲ್ಲೆಯಲ್ಲೇ ಒಂದಿಲ್ಲೊಂದು ಸಾಹಸಗಾತೆಯತ್ತ ಸಾಧನೆಗೈಯುತ್ತಾ ತನ್ನದೇ ಆದ ಹೆಸರು ಗಳಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಈಗ ಮಾನವೀಯತೆ ತೋರಿ ಜನಪ್ರಿಯತೆ ಗಳಿಸುತ್ತಿರುವುದು ಮತ್ತೊಮ್ಮೆ ಪ್ರಜ್ಞಾವಂತರ ಮೆಚ್ಚುಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ವಯಸ್ಸಾದ ಹಿರಿಯ ನಾಗರೀಕರಾದ ಅಜ್ಜಿ ನೆಡೆಸುತ್ತಿದ್ದ ಹೋಟೆಲ್ ಉದ್ಘಾಟನೆ ಮಾಡಿದ್ದಾರೆ. ಪೊಲೀಸ್ ಕರ್ತವ್ಯಕ್ಕಿಂತ ವಿಭಿನ್ನವಾಗಿದೆ.
ಕುಂಸಿ ಪೊಲೀಸ್ ಠಾಣೆ ಸನಿಹದಲ್ಲೇ ಹಲವಾರು ವರ್ಷಗಳಿಂದ ಹೋಟೆಲ್ ನೆಡೆಸುತ್ತಿದ್ದ ಇಬ್ಬರು ವೃದ್ಧ ಅಜ್ಜಿಯಂದಿರು ಎಲ್ಲರಿಗೂ ಆತ್ಮೀಯರು. ಹೋಟೆಲ್ ಸೇವೆಯನ್ನು ನೀಡುವಾಗ ತಾಯಂದಿರು ತೋರುವ ಮನೋಭಾವನೆಯಿಂದ ಊಟ ಉಪಹಾರ ಬಡಿಸುತ್ತಿರುವುದು ಸರ್ವರ ಅನುಭವ. ಸೇವೆಯಲ್ಲಿ ಅತ್ಯಂತ ಪ್ರೀತಿ ಮನೋಭಾವನೆ ಕರ್ತವ್ಯ ನಿರತ ಪೊಲೀಸರು ಸದಾ ಗಮನಿಸುತ್ತಿದ್ದೂ, ಗ್ರಾಹಕರಾಗಿರಾಗಿದ್ದರು ಪೊಲೀಸರನ್ನಲ್ಲದೇ ಸ್ಥಳೀಯರು ಹಾಗೂ ಪ್ರವಾಸಿಗರು ಸಹ ಊಟೋಪಚಾರ ಮಾಡುತ್ತಾ ಹೊಟ್ಟೆ ನಿಗಿಸಿಕೊಳ್ಳುವುದು ನೈಜ ಸಂಗತಿ.
ವೃದ್ಧ ಅಜ್ಜಿಯಂದಿರ ಹೋಟೆಲ್ ಮೇಲ್ಚಾವಣಿ ಗೆದ್ದಲು ಹಿಡಿದು ಮುರಿದು ಬೀಳುವ ಸ್ಥಿತಿಗೆ ತಲುಪಿತ್ತು. ಇದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಸಹ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಗೆದ್ದಲು ಹಿಡಿದು ಮುರಿದು ಬೀಳುವ ಮೇಲ್ಚಾವಣಿಯನ್ನು ಸರಿಪಡಿಸಿ ಕೊಡಲೇ ಬೇಕು ಎಂದು ಮನಸ್ಸು ಮಾಡಿದರು.
ಕೂಡಲೇ ಪೊಲೀಸ್ ಇನ್ಸ್ಪೆಕ್ಟರ್ ಅಭಯಪ್ರಕಾಶ್ ಹಾಗೂ ತಂಡ ಈ ಅಜ್ಜಿಯಂದಿರ ಹೋಟೆಲ್ ಮೇಲ್ಚಾವಣಿ ದುರಸ್ಥಿ ಕಾರ್ಯ ಆರಂಭಿಸಿಯೇ ಬಿಟ್ಟರು.
ಗೆದ್ದಲು ಹಿಡಿದು ಮುರಿದು ಬೀಳುವ ಹೋಟೆಲ್ ಮೇಲ್ಚಾವಣಿಯನ್ನೂ ತೆರವು ಗೊಳಿಸಿ, ತಗಡು ಶೀಟ್ ಸಹಿತ ಸುಸಜ್ಜಿತ ಹೋಟೆಲ್ ನವೀಕರಣ ಮಾಡಿಸಿದ್ದಾರೆ.
ಕುಂಸಿ ಪೊಲೀಸ್ ಠಾಣೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಸಹ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವಯಸ್ಸಾದ ಅಜ್ಜಿಯಂದಿರ ಪಾಲಿಗೆ ದೇವರು ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.
ಇಂತಹ ದಿನಗಳಲ್ಲಿ ಬಹುತೇಕ ಸರ್ಕಾರಿ ಅಧಿಕಾರಿಗಳು – ಚುನಾಯಿತ ಜನಪ್ರತಿನಿಧಿಗಳು ಹಣ ಮಾಡುವುದೊಂದೇ ತಮ್ಮ ಕಾಯಕ ವೃತ್ತಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಕುಂಸಿ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಸಹ ಅಧಿಕಾರಿಗಳು ಸಿಬ್ಬಂದಿಗಳ ಇಂತಹ ಮಾನವೀಯತೆ ಕಂಕೈರ್ಯ ಇನ್ನಿತರಿಗೆ ಮಾದರಿಯಾಗಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾರೈಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…