
ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಕಛೇರಿಯಲ್ಲಿರುವ ಆಧಾರ್ ಸೇವಾ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂತಾಗಿದೆ.
ಮಾನ್ಯ ತಹಸೀಲ್ದಾರ್ ರವರಾದ ಶ್ರೀ ಮಲ್ಲೇಶ್ ಪೂಜಾರ್ ರವರು ವಾರದಲ್ಲಿ 03 ದಿನ ತಾಳಗುಪ್ಪ ನಾಡಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಿದ್ದಷ್ಟೇ ಹೊರತು ಆದೇಶ ಅನುಷ್ಠಾನ ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ.
ಕೇಂದ್ರ ಸರ್ಕಾರ ಲಕ್ಷಾಂತರ ರೂ ಗಳ ಸಾರ್ವಜನಿಕ ತೆರಿಗೆ ಹಣ ವಿನಿಯೋಗಿಸಿ ಸುಲಲಿತ ಸೇವೆಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಅಗತ್ಯ ಉಪಕರಣಗಳನ್ನೂ ತಾಳಗುಪ್ಪ ನಾಡಕಛೇರಿಗೆ ಒದಗಿಸಿರುವುದು ಸರಿಯಷ್ಟೇ.
ಸರ್ಕಾರದ ಅಗತ್ಯ ಸರ್ಕಾರಿ ಸೇವೆ ಪಡೆಯಲು ಎಲ್ಲದಕ್ಕೂ ಆಧಾರ್ ಕಾರ್ಡ್ ಕೇಳುವ ಸರ್ಕಾರ ಆಧಾರ್ ಕಾರ್ಡ್ ಸೇವೆ ನೀಡುವಲ್ಲಿ ವಿಫಲವಾಗಿದೆ.
ತಾಳಗುಪ್ಪ ನಾಡಕಛೇರಿಯ ಆಧಾರ್ ಕಾರ್ಡ್ ಸೇವೆ ಅಲಭ್ಯತೆಯಿಂದ ನಾಡಕಛೇರಿ ಒಳಪಡುವ ವಿದ್ಯಾರ್ಥಿಗಳು ರೈತರು ತೀವ್ರ ಪರದಾಟದಿಂದ ಇತ್ತ ವಿದ್ಯಾರ್ಥಿಗಳು ಶಾಲೆಯತ್ತ ತೆರಳದೇ, ಅತ್ತ ರೈತರು ಜಮೀನು ಕೆಲಸಕ್ಕೆ ಹೋಗದೇ ದಿನ0ಪ್ರತಿ ನಾಡಕಛೇರಿ ತಾಳಗುಪ್ಪಕ್ಕೆ ಅಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಶಿವಮೊಗ್ಗ ಜಿಲ್ಲಾಡಳಿತ ತಾಳಗುಪ್ಪ ನಾಡಕಛೇರಿಯಲ್ಲಿ ಸರ್ಕಾರಿ ಸಮಯದಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರದ ಸೇವಾ ಸೌಲಭ್ಯ ಸಿಗುವಂತಾಗಲಿ ಎಂಬುದು ನೊಂದ ಆಧಾರ್ ಕಾರ್ಡ್ ಪಡೆಯಲು ಆಗಮಿಸಿದವರ ಒಕ್ಕೊರಲ ಧ್ವನಿಯಾಗಿದೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…