
ಶಿವಮೊಗ್ಗ :- ಶಿವಮೊಗ್ಗ ಜಿಲ್ಲಾ ಗಡಿಭಾಗದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿ ಕಂದಕಕ್ಕೆ ಬಿದ್ದಿದ್ದೂ, ಕಾರು ಸಂಪೂರ್ಣ ನುಚ್ಚು ಗುಚ್ಚಾಗಿದೆ.
ಕೊಲ್ಲೂರು ಘಾಟಿ ರಸ್ತೆ ಸಂಪೂರ್ಣ ನೂಣುಪಾಗಿದ್ದೂ, ಮಳೆಗಾಲದ ಪರಿಣಾಮ ಪಾಚಿ ಕಟ್ಟುತ್ತಿರುವ ಘಾಟಿ ರಸ್ತೆ ವಾಹನ ಚಾಲಕರಿಗೆ ವಾಹನ ಚಾಲನೆ ಮಾಡುವುದೇ ಹರಸಾಹಸವಾಗಿದೆ.
ನಿನ್ನೆ ನೆಡೆದ ಕೊಲ್ಲೂರು ಘಾಟಿಯಲ್ಲಿ ಕಾರು ಸುಮಾರು 200 ಅಡಿಯ ಪ್ರಪಾತಕ್ಕೆ ಬೀಳಲು ಮುಖ್ಯ ಕಾರಣ ಘಾಟಿ ಜಾರುವ ರಸ್ತೆಯೇ ಮುಖ್ಯ ಕಾರಣ ಎನ್ನುವ ಕಾರು ಚಾಲಕ. ಚಾಲಕ ಒಬ್ಬರೇ ಕಾರಿನಲ್ಲಿ ಚಲಾಯಿಸುತ್ತಿದ್ದೂ, SEAT BELT ಹಾಕಿದ ಪರಿಣಾಮ ಒಂದು ಚೂರು ಯಾವುದೇ ಗಾಯವಾಗದೇ ಬದುಕುಳಿದೆ ಅಂತಾ ಪ್ರತಿಕ್ರಿಯೆ ನೀಡಿದ ಕಾರು ಚಾಲಕ.
ವಾಹನ ಸವಾರರೇ ಕಾಂಕ್ರೀಟ್ ರಸ್ತೆಯೂ ಮಳೆಗಾಲದಲ್ಲಿ ತುಂಬಾ ಜಾರುವ ಸ್ಥಿತಿಯಲ್ಲಿರುತ್ತದೆ. ಜಾಗರುಕವಾಗಿ ವಾಹನ ಚಲಾಯಿಸಿ.
ಕಾರು ಚಲಾಯಿಸುವಾಗ ತಪ್ಪದೇ SEAT BELT ಬಳಸಿಯೇ ವಾಹನ ಚಲಾವಣೆ ಮಾಡುವುದು ಒಳಿತು.
ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್. ಕೆ…9449553305…