ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆಯ ದುರಾಡಳಿತದ ನಡೆಯಿಂದ ಒಂದಿಲ್ಲೊಂದು ಆಡಳಿತ ನಿರ್ಲಕ್ಷತನದ ಸದಾ ಸುದ್ದಿಯಲ್ಲಿದೆ. ಸಾಗರ ನಗರದ ವಾರ್ಡ್ ನಂ. 2.ಜೆ.ಪಿ ನಗರ ಅತ್ಯಂತ ಹಿಂದುಳಿದ ವರ್ಗಗಳು ವಾಸಿಸುವ ಆಶ್ರಯ ಬಡಾವಣೆಯಲ್ಲಿ ಈಗ್ಗೆ ಕೆಲವು ವರ್ಷಗಳ ಹಿಂದೇ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ ಅನೇಕ ಜನರ ಬಾಯಾರಿಕೆಯನ್ನು ನಿವಾರಿಸಿದ ಈ ನೀರಿನ ಟ್ಯಾಂಕ್ ಪರಿಸ್ಥಿತಿ ಈಗ ಹೀಗಿದೆ.
ಏಕೆಂದರೆ ಈಗ ಜೆ.ಪಿ ನಗರದಲ್ಲಿ ಸುಸಜ್ಜಿತವಾದ ಟ್ಯಾಂಕ್ ನಿರ್ಮಾಣವಾಗಿದೆ ಆದರೆ ಕೆಲವು ಸಾರಿ ನೀರು ಸರಬರಾಜು ವ್ಯತ್ಯಯ ಉಂಟಾದಾಗ ಕುಡಿಯುವ ನೀರಿನ ಅವಶ್ಯಕತೆ ಗಾಗಿ ಈ ಟ್ಯಾಂಕಿನಿಂದ ಈಗಲೂ ನೀರನ್ನು ಬಳಸುತ್ತಿದ್ದಾರೆ ಕಾರಣ ಬೋರ್ ವೆಲ್ ನೀರು ಈ ಟ್ಯಾಂಕಿಗೆ ಸರಬರಾಜು ಮಾಡಿ ಇದರಿಂದ ಈ ಭಾಗದ ಬಡಾವಣೆಯ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಈ ಟ್ಯಾಂಕ್ ನ ಪರಿಸ್ಥಿತಿ ಅಯೋಮಯವಾಗಿದೆ ಮುಳ್ಳುಕಂಟಿಗಳು ಬೆಳೆದು ದುರಾವಸ್ಥೆ ತಲುಪಿದ್ದು ತಕ್ಷಣದಲ್ಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಈ ಭಾಗದ ಪರಿಸರವನ್ನ ಸುಂದರವಾಗಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಸಾಗರ ನಗರದ ಪರಿಸರ ಅಧಿಕಾರಿಗಳು ಇದ್ದಾರೆಯೇ ಎಂಬುದೇ ಯಕ್ಷ ಪ್ರೆಶ್ನೆಯಾಗಿದೆಯೆಂದು ಸ್ಥಳೀಯ ನಿವಾಸಿಗಳು ಸಾಗರ ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಂದಾದರೂ ಕುಂಭಕರ್ಣ ನಿದ್ರೆಯಲ್ಲಿರುವ ಸಾಗರ ನಗರಸಭೆ ಆಡಳಿತ ರೂಢರೂ ಇತ್ತ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವರಾ ಎಂದು ಸ್ಥಳೀಯರು ಆಕಾಶ ನೋಡುತ್ತಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
####################################
ರಘುರಾಜ್ ಹೆಚ್.ಕೆ….9449553305….