
ಶಿವಮೊಗ್ಗ : ಇಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಶಿಕ್ಷಣ ಸಮಿತಿ ಜೊತೆಯಲ್ಲಿ ಕಸ್ತೂರಬಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ದಿ. ಹೆಚ್. ಇಬ್ರಾಹಿಂ ದತ್ತಿ ಮತ್ತು ಭೂಪಾಳಂ ಆರ್. ಚಂದ್ರಶೇಖರಯ್ಯ ದತ್ತಿ ಕಾರ್ಯಕ್ರಮವನ್ನು ಎನ್.ಇ.ಎಸ್. ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ. ಎಸ್. ನಾರಾಯಣ ರಾವ್ ಉದ್ಘಾಟಿಸಿದರು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು ಕನ್ನಡ ಸಾಹಿತ್ಯ ಈ ಹೊತ್ತಿನ ಬಿಕ್ಕಟ್ಟುಗಳು ವಿಚಾರವಾಗಿ ಮಾತನಾಡಿದರು. ಉಮೇಶ್ ಆರಾಧ್ಯ ಅವರು ಮಲೆನಾಡು-ಭೂಪಾಳಂ ಕೊಡುಗೆ ಕುರಿತು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಬಿ. ಸಿ. ಪ್ರಭಾಕರ್ ಬೆಂಗಳೂರಿನಿಂದ ಬಂದಿದ್ದರು. ಟಿ. ಆರ್. ಅಶ್ವತ್ಥ ನಾರಾಯಣ, ಭೂಪಾಳಂ ಸತ್ಯನಾರಾಯಣ, ಕೆ. ಆರ್. ಉಮೇಶ್, ಎಸ್. ಆರ್. ವೆಂಕಟೇಶ, ತಿಪ್ಪೇಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್. ಹೆಚ್. ರವಿಕುಮಾರ್ ನಿರೂಪಿಸಿದರು. ಹೆಚ್. ವಿ. ಶುಭಕರ ಸ್ವಾಗತಿಸಿದರು. ದಾಕ್ಷಾಯಿಣಿ ಅವರು ವಂದಿಸಿದರು.
ರಘುರಾಜ್ ಹೆಚ್.ಕೆ…94449553305…