
ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲ ಚೇತನರಿಗೆ ಅನುಕೂಲವಾಗುವಂತಹ ವೀಲ್ ಚೇರ್ ಸೌಲಭ್ಯ ಗಗನಕುಸುಮವಾಗಿದ್ದೂ, ಗ್ರಾಮ ಪಂಚಾಯಿತಿಯ ಆದಾಯದ ಆರ್ಥಿಕ ಸಂಪನ್ಮೂಲಗಳಲ್ಲಿ 5% ವಿಕಲ ಚೇತನರಿಗೆ ಅನುದಾನ ಮೀಸಲು ಇಡಬೇಕಾದ ಸರ್ಕಾರದ ನಿಯಮಗಳನ್ನೂ ಗಾಳಿಗೆ ತೂರಿ ಆಡಳಿತ ನೆಡೆಸುತ್ತಿದ್ದೂ, ಆಯಾಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನಹರಿಸದೇ ಇರುವುದು ವಿಕಲಚೇತನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ತ್ಯಾಜ್ಯ ವಿಲೇವಾರಿ ಮಾಡಲು ಸುಮಾರು 06 ಲಕ್ಷದ ಆಟೋಗಳು ಗ್ರಾಮ ಪಂಚಾಯಿತಿ ಅವರಣದಲ್ಲೇ ಲಡ್ದಾಗುತ್ತಿದ್ದೂ, ಶಿವಮೊಗ್ಗ ಜಿಲ್ಲೆಯಲ್ಲಿ ಘನ ವಿಲೇವಾರಿ ಘಟಕ ಯೋಜನೆ ಸಂಪೂರ್ಣ ವಿಫಲತೆ ಕಂಡಿದ್ದೂ, ಮುಖ್ಯ ಕಾರಣ ಶಿವಮೊಗ್ಗ ಜಿಲ್ಲಾಪಂಚಾಯತ್ ನಿರಾಸಕ್ತಿ ಎಂಬುದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಸುಮಾರು 06 ಲಕ್ಷ ಆಟೋಗಾಗಿ ಸಾರ್ವಜನಿಕ ತೆರಿಗೆ ಹಣ ನೀರಲ್ಲಿ ಹೋಮ ಮಾಡುತ್ತಿರುವ ಕರ್ನಾಟಕ ಸರ್ಕಾರ, ಮೀಸಲಿಟ್ಟ 5% ವಿಕಲ ಚೇತನ ಅನುದಾನದಲ್ಲೇ ಗ್ರಾಮ ಪಂಚಾಯಿತಿ ಮಟ್ಟದ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ವೀಲ್ ಚೇರ್ ಒದಗಿಸಲು ಯಾಕೇ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ವಿರುದ್ಧ ವಿಕಲ ಚೇತನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ…9449553305…


1 comment
В этом обзорном материале представлены увлекательные детали, которые находят отражение в различных аспектах жизни. Мы исследуем непонятные и интересные моменты, позволяя читателю увидеть картину целиком. Погрузитесь в мир знаний и удивительных открытий!
Узнать больше – https://quick-vyvod-iz-zapoya-1.ru/