
ಸಾಗರ :- ಸಾಗರ ನಗರಸಭೆಯ ವಾರ್ಡ್ ನಂ.16 ರಲ್ಲಿ ಕಳೆದ 3ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಾರ್ವಜನಿಕ ಶೌಚಾಲಯ ಪರಿಸ್ಥಿತಿ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಗಾಂಧಿನಗರ ಅಗ್ರಹಾರ ವೃತ್ತ ಅದರಲ್ಲೂ ಸಾಗರಕ್ಕೆ ಪ್ರವೇಶವಾಗುತ್ತಿದ್ದಂತೆ ಸಿಗುವ ವೃತ್ತದಲ್ಲಿ ಇರುವ ಈ ಶೌಚಾಲಯ ಇಲ್ಲಿಯ ಸ್ಥಳೀಯ ಪ್ರಯಾಣಿಕರ ಬಹುಬೇಡಿಕೆಮತ್ತು ಅಗತ್ಯ ವಾದ ಕಟ್ಟಡವಾಗಿತ್ತು ಆದರೆ ಕಟ್ಟಡ ಸಂಪೂರ್ಣವಾಗಿ ಮುಗಿದರೂ ಇವತ್ತಿಗುಾ ಶೌಚಾಲಯದ ಆರಂಭಗೊಳ್ಳದೆ ದುಸ್ಥಿತಿಗೆ ತಲುಪಿದೆ
ಇದರಂತೆಯೇ ಕಳೆದ 6ತಿಂಗಳ ಹಿಂದೆ ಯಾರ ಲಾಭಕ್ಕಾಗಿ ಮಾಡಿದ್ದಾರೋ ಗೊತ್ತಿಲ್ಲ 200ಮೀಟರ್ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ ಆದರೆ ಈ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿದಾಗಿನಿಂದಲೂ ಯಾರೊಬ್ಬರೂ ನಡೆದಾಡಿದ ದೃಶ್ಯವೂ ಕಂಡು ಬಂದಿಲ್ಲ ಇಲ್ಲಿ ವಾಕಿಂಗ್ ಟ್ರ್ಯಾಕ್ ಅವಶ್ಯಕತೆ ಇರಲಿಲ್ಲ ಯಾರೊ ದುಡ್ಡು ಮಾಡುವ ಉದ್ದೇಶದಿಂದ ಮಾಡಿರಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ .
ಈ ರೀತಿ ಕಾಮಗಾರಿಗಳನ್ನು ಮಾಡಿ ಅದನ್ನು ಉಪಯೋಗಕ್ಕೆ ಬಾರದ ರೀತಿಯಲ್ಲಿ ನಡೆಸಿಕೊಳ್ಳುವುದು ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತೆ ಅಲ್ಲವೇ? ಇದಕ್ಕೆ ಸಂಬಂಧಪಟ್ಟವರು ಉತ್ತರ ಕೊಡಬಲ್ಲಿರಾ? ನಗರಸಭೆ ಅಧಿಕಾರಿಗಳು ಮತ್ತು ಈ ಭಾಗದ ಜನ ಪ್ರತಿನಿಧಿಗಳ ತಕ್ಷಣ ಗಮನಹರಿಸಬೇಕೆಂದು ಇಲ್ಲಿಯ ಸ್ಥಳಿಯರು ಆಗ್ರಹಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್.ಕೆ…9449553305….