Home ರಾಜ್ಯತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಬಲತ್ಕಾರ ಪ್ರಯತ್ನ,ಹಲ್ಲೆಗೆ ಯತ್ನ ..!! ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು..!!

ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಬಲತ್ಕಾರ ಪ್ರಯತ್ನ,ಹಲ್ಲೆಗೆ ಯತ್ನ ..!! ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು..!!

by EDITOR NEWS WARRIORS
0 comments

ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಬಂಡೆ ಕಾರ್ಮಿಕಳಾಗಿರುವ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಹಲ್ಲೆ ಬಲತ್ಕಾರಕ್ಕೆ ಪ್ರಯತ್ನ, ಬಲವಂತವಾಗಿ ಕೈ ಹಿಡಿದಿರುವ ಪ್ರಕರಣ ಮತ್ತು ಮೊಬೈಲ್ ಕಸಿದುಕೊಂಡಿರುವ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ

ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು ಪಾಲಾಗಿದ್ದು… ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯೆ ಸುಧಾ ಎಂಬುವರು ಜೀವನದ ನಿರ್ವಹಣೆಗೆ ಕೂಲಿ ಮಾಡಿಕೊಂಡು ಅನೇಕ ವರ್ಷಗಳಿಂದ ಬಂಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಮಯದಿಂದ ಅವರ ಗಂಡ ಕೃಷ್ಣಕುಮಾರ ರೊಂದಿಗೆ ಆರ್ಮುಗಂ ಬಂಡೆಯಲ್ಲಿ ಕೆಲಸವನ್ನು ಮಾಡುತ್ತಿದ್ದು. ಇವರುಗಳು ಮಾಡುತ್ತಿರುವ ಬಂಡೆಯು ಅಕ್ರಮವಾಗಿದ್ದು, ಅಧಿಕಾರಿಗಳು ಬಂದು ಪದೇಪದೇ ನಿಲ್ಲಿಸುತ್ತಿರುವ ಕಾರಣ ಸುಧಾರವರು ಬೇರೆ ಬಂಡೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರ್ಮುಗಂ ಕಳೆದ ತಿಂಗಳು ಆಕೆಯ ಮೇಲೆ ಹಲ್ಲೆಗೆ ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದ ಪರಿಣಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪುನಃ: ದಿನಾಂಕ 19 -12- 2022 ರಂದು ಸುಧಾ ಮತ್ತು ಅವರ ಗಂಡ ಬೇರೆಯವರ ಬಂಡೆಯಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಆಕೆಯನ್ನು ಅವಾಚ್ಚ ಶಬ್ದಗಳಿಂದ ಬೈದು ಹಲ್ಲೆಗೆ ಪ್ರಯತ್ನಿಸಿ ಮೊಬೈಲ್ ಕಸಿದುಕೊಳ್ಳುವಾಗ ಆಕೆ ಕೈ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಕಾರಣ ಇವರು ತೀರ್ಥಹಳ್ಳಿ ಠಾಣೆಗೆ ನಿನ್ನೆ ದಿನ 20 -12- 2022 ರಂದು ದೂರು ನೀಡಿದ್ದು , ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಅಪರಾಧ ಸಂಖ್ಯೆ 0228 /2022 ರಲ್ಲಿ ಐಪಿಸಿ ಸೆಕ್ಷನ್ 354 (ಎ ),506, 341 ರೆಡ್ ವಿತ್ 34, 504, 386, 354 ಮತ್ತು 114 ಸೆಕ್ಷನ್ ಪ್ರಕಾರ ಬಂಧಿಸಿ ತೀರ್ಥಹಳ್ಳಿ ವ್ಯವಹಾರಗಳ ನ್ಯಾಯಾಲಯ (ಕಿರಿಯ ವಿಭಾಗ )ಮತ್ತು ಜೆಎಂಎಫ್ ಸಿ ನ್ಯಾಯಾಲಯದೆದುರು ಹಾಜರುಪಡಿಸಿದಾಗ, ಗೌರವಾನ್ವಿತ ನ್ಯಾಯಾಧೀಶರು ಆರೋಪಿ ಆರ್ಮುಗಂ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...