
ಬೆಂಗಳೂರು: ನಗರದಲ್ಲಿ ಬಿಜೆಪಿ ಕಾರ್ಯಕಾರಣಿ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಶಾಸಕ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಅದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಜೋಶಿ, ‘ಪಂಚರತ್ನ ಅಂತಾ ಯಾಕೆ ಹೆಸರು ಇಟ್ಟವ್ರೋ ಅಂತಾ ಗೊತ್ತಿಲ್ಲ.
ಸಕ್ರಿಯ ರಾಜಕಾರಣದಲ್ಲಿರುವ ದೇವೇಗೌಡರ ಇಬ್ಬರು ಮಕ್ಕಳು . ಆ ಇಬ್ಬರಿಗೆ ಇಬ್ರು ಹೆಂಡಂದಿರು. ಅವರ ಮಕ್ಕಳಲ್ಲಿ ಒಬ್ಬ ಎಂಎಲ್ಸಿ, ಮತ್ತೊಬ್ಬ ಎಂಪಿ, ಇನ್ನೊಬ್ಬ ಚುನಾವಣೆ ಯಲ್ಲಿ ಸ್ಪರ್ಧೆ ಮಾಡ್ತಾವ್ನೆ. ಒಟ್ಟು 9 ಜನರು, ಇವ್ರು ಪಂಚರತ್ನ ಅಲ್ಲ, ಇವ್ರು ನವಗ್ರಹ ಯಾತ್ರೆ ಅಂತಾ ಮಾಡಬೇಕಿತ್ತು’ ಎಂದು ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ವ್ಯಂಗ್ಯ ಮಾಡಿದರು.
ಮುಂದುವರೆದು ಮಾತನಾಡುತ್ತಾ, ‘ಅವರ ಮನೆಯಲ್ಲೇ ಬಡಿದಾಟ ಇದೆ. ಕೊನೆಗೆ ನಮ್ಮ ಹೈಕಮಾಂಡ್ ಇದೆ ತೀರ್ಮಾನ ಮಾಡ್ತಾರೆ ಅಂತಾರೆ. ಹೈಕಮಾಂಡ್ ಎಲ್ಲಿರೋದು ಅಡುಗೆ ಮನೇಲಾ..? ಕುಟುಂಬದಲ್ಲಿ ಒಟ್ಟಿಗೆ ಇರಲು ಇವರಿಗೆ ಯೋಗ್ಯತೆ ಇಲ್ಲ. ಕುಟುಂಬ ಸರಿಯಾಗಿ ಇಲ್ಲದವ್ರು ಇವ್ರು ರಾಜ್ಯ ಉದ್ಧಾರ ಮಾಡ್ತಾರಾ..?’ ಎಂದು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು..
ಮತ್ತೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾ ದೇವೇಗೌಡರ ಕುಟುಂಬದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿರುದ್ಧ ಟಿಕೆ ಟಿಪ್ಪಣಿಗಳು ಕೇಳಿ ಬರುತ್ತಿದ್ದು ಇದು ಚರ್ಚೆಗೆ ಗ್ರಾಸವಾಗಿದೆ ಕರ್ನಾಟಕ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ ಹಾಗಾದರೆ ಅದರ ವಿರುದ್ಧ ಪ್ರಹ್ಲಾದ್ ಜೋಷಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ಅಭಿಮಾನಿಗಳು ಕಿಡಿಕಾರಿದ್ದಾರೆ.
ರಘುರಾಜ್ ಹೆಚ್.ಕೆ…9449553305…


2 comments
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.
В этом информативном тексте представлены захватывающие события и факты, которые заставят вас задуматься. Мы обращаем внимание на важные моменты, которые часто остаются незамеченными, и предлагаем новые перспективы на привычные вещи. Подготовьтесь к тому, чтобы быть поглощенным увлекательными рассказами!
Подробнее – https://quick-vyvod-iz-zapoya-1.ru/