
ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ, ಯು ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಕಾವ್ಯ ದಿನಾಂಕ:19/06/2022ರಂದು ದೆಹಲಿ ಯಲ್ಲಿ ನಡೆದ 16ವರ್ಷ ವಯೋಮಿತಿಯೊಳಗಿನ ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆ ಯಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ರಾಜ್ಯಕ್ಕೆ ಬೆಳ್ಳಿ ಪದಕ ತಂದುಕೊಟ್ಟು ಶಾಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ, ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದು.
ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ನಾಗರಾಜ್ ಮತ್ತು ಯಶೋಧಮ್ಮ ದಂಪತಿಗಳ ಪುತ್ರಿಯಾದ ಕುಮಾರಿ ಕಾವ್ಯ ಕೆ,ಎನ್ ಇವಳು ಪ್ರಾಥಮಿಕ ಶಿಕ್ಷಣವನ್ನು ಕರ್ನಾಟಕ ಪಬ್ಲಿಕ್ ಶಾಲೆ ಅಮೃತ ಹೊಸನಗರ ತಾ. ಇಲ್ಲಿ ಪಡೆದಿರುತ್ತಾಳೆ.
ಇವಳ ಈ ಸಾಧನೆಗೆ ಶಾಲೆಯ ಸಮಸ್ತ ಶಿಕ್ಷಕರು, ಆಡಳಿತ ಮಂಡಳಿ, ಪೋಷಕರು, ತಾಲೂಕಿನ ಸಮಸ್ತ ಪ್ರಜ್ಞಾವಂತ ನಾಗರಿಕರು ಹಾಗೂ ಪತ್ರಿಕೆ ಅಭಿನಂದನೆಗಳು ಸಲ್ಲಿಸುತ್ತದೆ.
ರಘುರಾಜ್ ಹೆಚ್.ಕೆ …9449553305…