ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಮಹಾ ಜನತೆಯೂ ಕುಡಿಯುವ ನೀರಿಗಾಗಿ ಶರಾವತಿ ನದಿಯಿಂದ ಕುಡಿಯುವ ನೀರು ಒದಗಿಸುವಂತೆ ತೀವ್ರ ಪ್ರತಿಭಟನೆಯಿಂದಾಗಿ ಸರ್ಕಾರ ಕೋಟಿಗಟ್ಟಲೇ ಅನುದಾನ ಮಂಜೂರು ಮಾಡಿದ್ದೂ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸಂಬಂಧ ಪಟ್ಟ ಅಧಿಕಾರಿಗಳ ಕರ್ತವ್ಯ ಲೋಪದಿಂದ ಹಳ್ಳ ಹಿಡಿದಿದೆ.
ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ – 03 ರಲ್ಲಿ OVER HEAD TANK ನಿರ್ಮಾಣ ಮಾಡುವ ಬಗ್ಗೆ ESTIMATE ಇದ್ದರೂ ಯೋಜನೆ ಅನುಷ್ಠಾನ ಉಲ್ಲಂಘನೆ ಮಾಡಿ GROUND LEVEL TANK ಮಾಡಿರುವುದು ಸಂಬಂಧ ಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ತೋರುತ್ತಿದೆ.
ಗುತ್ತಿಗೆದಾರರು ಕಾಮಗಾರಿ ಪೂರೈಸಿ ಇಂತಿಷ್ಟು ವರ್ಷ ಇಂತಿಷ್ಟು ದಿನಗಳು ಎಂದು ಅಷ್ಟರೊಳಗೆ ಕಾಮಗಾರಿ ಪ್ರಗತಿಯನ್ನೂ ಮುಗಿಸಿ ಕೊಡಬೇಕೆಂದು ಒಪ್ಪಂದವಿದ್ದರೂ 04 ರಿಂದ 05 ವಸಂತಗಳು ಕಳೆದರೂ ಗುತ್ತಿಗೆದಾರ ಕಾಮಗಾರಿ ಆಮೇ ವೇಗದಲ್ಲಿ ನಡೆಯುತ್ತಿರುವುದರಿಂದ ಕೂಡಲೇ ಸರ್ಕಾರ ಸಂಬಂಧ ಪಟ್ಟ ಗುತ್ತಿಗೆದಾರನ ಪರವಾನಿಗೆಯನ್ನೂ BLOCK LIST ಗೆ ಹಾಕಬೇಕು.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಕ್ರಮಗಳ ಬಗ್ಗೆ ಸೂಕ್ತ ತನಿಖೆಯನ್ನೂ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ಹಾಗೂ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಹೊನ್ನಳ್ಳಿ ರವರು ಆದೇಶ ಮಾಡುವಂತೆ ಹಾಗೂ ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ರವರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಾಳಗುಪ್ಪ ಹೋಬಳಿಯ ಜನತೆಗೆ ನ್ಯಾಯ ನೀಡಬೇಕೆಂದು ಗ್ರಾಮಸ್ಥರು ಮೂಲಕ ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ರಘುರಾಜ್ ಹೆಚ್.ಕೆ…9449553305….