
ಶಿವಮೊಗ್ಗ, : ಹೊಸನಗರ ತಾಲೂಕಿನ ಹೆಬ್ಬಿಗೆ ಗ್ರಾಮದ ವೃದ್ದೆ ಸಾಧಮ್ಮ 7 ಕಿಲೋಮೀಟರ್ ನಡೆದುಕೊಂಡು ಬಂದು ಸುಸ್ತಾಗಿ ಬಿದ್ದು ಪಿಂಚಣಿಗಾಗಿ ಪರದಾಡಿದ್ದರು. ಆದರೂ ಗ್ರಾಮಲೆಕ್ಕಿಗ ಇವರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ತಾಶೀಲ್ದಾರ್ ಗ್ರಾಮಲೆಕ್ಕಿಗ ನಿಗೆ ನೋಟಿಸ್ ನೀಡಿದ್ದರು. ಪತ್ರಿಕೆ ಇದನ್ನು ವಿವರವಾಗಿ ಪ್ರಕಟಿಸಿತ್ತು. ಕೂಡಲೇ ಜಿಲ್ಲಾಧಿಕಾರಿಗಳು ತಾಸಿಲ್ದಾರ್ ಗೆ ಆದೇಶ ನೀಡಿ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮನೆಗೆ ತೆರಳಿ ನೀಡುವಂತೆ ಸೂಚನೆ ನೀಡಿದರು.
ಹೊಸನಗರ ತಾಲೂಕು ಹೆಬ್ಬಿಗೆ ಗ್ರಾಮದ ಸಾಧಮ್ಮ ಅವರ ಮನೆಗೆ ತೆರಳಿ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಪಿಂಚಣಿಯ ಮಂಜೂರಾತಿ ಪತ್ರವನ್ನು ಮಂಗಳವಾರ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮನೆಗೆ ತೆರಳಿ ಪಿಂಚಣಿ ಪತ್ರ ನೀಡಿದ ತಾಶೀಲ್ದಾರ್:
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರ ಸೂಚನೆಯಂತೆ ಫಲಾನುಭವಿಯ ಮನೆಗೆ ತೆರಳಿದ ತಹಶೀಲ್ದಾರ್ ಅವರು ಪತ್ರವನ್ನು ಹಸ್ತಾಂತರಿಸಿ ಆರೋಗ್ಯವನ್ನು ವಿಚಾರಿಸಿದರು.
ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಜಿಲ್ಲಾಧಿಕಾರಿ ಆದೇಶ :
ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡುವವರ ವಿರುದ್ಧ ಕ್ರಮವನ್ನು ಜರುಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಸಂಬಂಧಪಟ್ಟ ಗ್ರಾಮ ಲೆಕ್ಕಿಗನ ವಿರುದ್ಧ ಸೂಕ್ತಕ್ರಮ ಅಪಾರ ಜಿಲ್ಲಾಧಿಕಾರಿ:
ಸಂಬಂಧಪಟ್ಟ ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿಗೆ ಈಗಾಗಲೇ ನೊಟೀಸ್ ಜಾರಿಗೊಳಿಸಲಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದ್ದಾರೆ.
ರಘುರಾಜ್ ಹೆಚ್.ಕೆ…9449553305…