
ಹೊಸನಗರ (ನಿಟ್ಟೂರು ):- ಹೊಸನಗರ ತಾಲ್ಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಿಗೆ ಗ್ರಾಮದ ನಿವಾಸಿ ಶ್ರೀಮತಿ ಸಾದಮ್ಮ ಎಂಬುವವರು ಪಿಂಚಣಿ ಸರ್ಕಾರಿ ಸೌಲಭ್ಯ ಪಡೆಯಲು ದಿನಾಂಕ 17/06/2022 ತನ್ನ ಹೆಬ್ಬಿಗೆ ಗ್ರಾಮದಿಂದ ನಿಟ್ಟೂರು ಗ್ರಾಮದವರೆಗೆ ಸುಮಾರು 07 ಕಿ. ಮೀ ಕಾಲ್ನಡಿಗೆಯಲ್ಲಿ ಬಂದು ನಿಟ್ಟೂರು ಗ್ರಾಮದಲ್ಲಿರುವ ಸರ್ಕಾರಿ ಕಛೇರಿಯಲ್ಲಿ ಆ ಬಡ ವೃದ್ಧೆ ಮಧ್ಯಾಹ್ನ 01:00 ಗೂ ಹೆಚ್ಚಿನ ಸಮಯ ಕಾಯುತ್ತಾ ಇದ್ದರೂ ಗ್ರಾಮ ಲೆಕ್ಕಿಗ ಡಿ. ಪಿ. ಮಂಜಪ್ಪ, ಗ್ರಾಮ ಲೆಕ್ಕಧಿಕಾರಿ, ನಾಗೋಡಿ ವೃತ್ತ ಕಾದು ಕಾದು ತೀವ್ರ ಅಸ್ವಸ್ಥಳಾದ ಶ್ರೀಮತಿ ಸಾದಮ್ಮ ಸರ್ಕಾರಿ ಕಛೇರಿಯಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅಸ್ವಸ್ಥಳಾಗಿ ಬಿದ್ದಿದ್ದ ವೃದ್ಧೆ ಶ್ರೀಮತಿ ಸಾದಮ್ಮ ಉಪಚರಿಸಿ, ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನೆಡೆಸಿ ಈ ಹಿಂದಿನಿಂದಲೂ ಈ ಗ್ರಾಮ ಲೆಕ್ಕಿಗನ ವಿರುದ್ಧ ಮೌಖಿಕವಾಗಿ ಹಾಗೂ ಲಿಖಿತ ದೂರು ಸಲ್ಲಿಸಿದರೂ ಸಂಬಂಧ ಪಟ್ಟ ಕಂದಾಯ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವುದೇ ಇಂತಹ ಘಟನೆಗಳು ನೆಡೆಯುತ್ತಿರುವುದು ಸಕಾರಣವಾಗಿದೆ. ಕರ್ತವ್ಯ ಲೋಪ, ಕರ್ತವ್ಯ ಲೋಪವೆಸಗಿದ ಡಿ. ಪಿ. ಮಂಜಪ್ಪ ಗ್ರಾಮ ಲೆಕ್ಕಾಧಿಕಾರಿ ನಾಗೋಡಿ ವೃತ್ತ ನನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಪ್ರತಿಭಟನೆಗೆ ಹೊಸನಗರ ತಹಸೀಲ್ದಾರ್ ಕರ್ತವ್ಯ ಲೋಪವೆಸಗಿದ ಡಿ. ಪಿ. ಮಂಜಪ್ಪ ನಿಗೆ ನೋಟೀಸ್ ನೀಡಿದ್ದಾರೆ.
ದಯವಿಟ್ಟು ಅರ್ಹ ಶ್ರೀಮತಿ ಸಾದಮ್ಮ ರವರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಅಗತ್ಯ ಕ್ರಮಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಸೆಲ್ವಮಣಿ ಹಾಗೂ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ನಾಗೇಂದ್ರ ಹೊನ್ನಳ್ಳಿ ರವರು ಶ್ರೀಮತಿ ಸಾದಮ್ಮ ರವರಿಗೆ ಸೂಕ್ತ ನ್ಯಾಯ ಒದಗಿಸುವ ವಿಶ್ವಾಸ ಹೆಚ್ಚಿದೆ ಹಾಗೂ ಕರ್ತವ್ಯ ಲೋಪವೆಸಗಿದ ನಾಗೋಡಿ ವೃತ್ತ ಕರ್ತವ್ಯ ನಿರತ ಡಿ. ಪಿ. ಮಂಜಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೇಬೇಕು – ಸಾರ್ವಜನಿಕ ತೆರಿಗೆ ಹಣದಲ್ಲಿ ಸಂಬಳ ತಿನ್ನುತ್ತಿರುವ ಇನ್ನಿತರ ಮೈಗಳ್ಳ ಭ್ರಷ್ಟ ಅಧಿಕಾರಿಗಳಿಗೆ ಪಾಠವಾಗಬೇಕು ಬೇಕು ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ತಹಸೀಲ್ದಾರ್ ಹೊಸನಗರರವರು ಕೇವಲ ಕರ್ತವ್ಯ ಲೋಪವೆಸಗಿರುವ ಡಿ. ಪಿ. ಮಂಜಪ್ಪ ವಿರುದ್ಧ ಸಾಮಾನ್ಯ ಜನರ ಕಣ್ಣು ಒರೆಸುವ ತಂತ್ರಕ್ಕೆ ನೋಟೀಸ್ ಕೊಟ್ಟು ಸುಮ್ಮನಾಗುತ್ತಾರೋ…..?! ಅಥವಾ ಯಾವುದಾದರೂ ಸೂಕ್ತ ಕ್ರಮ ಕೈಗೊಳ್ಳುವರಾ….?! ಕಾದು ನೋಡೋಣಾ……?!!!
ಓಂಕಾರ ಎಸ್. ವಿ. ತಾಳಗುಪ್ಪ…
#####################################
ರಘುರಾಜ್ ಹೆಚ್. ಕೆ…9449553305….